Advertisement

ಮುಂಬೈ ಇಂಡಿಯನ್ಸ್‌ಗೆ ಜಹೀರ್‌ ಬೌಲಿಂಗ್‌ ಸಲಹೆಗಾರ?

06:55 AM Nov 05, 2018 | |

ಮುಂಬೈ: ಮುಂಬರುವ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಟಿ20 ಕ್ರಿಕೆಟ್‌ ಕೂಟದಲ್ಲಿ ಭಾರತದ ಮಾಜಿ ವೇಗಿ ಜಹೀರ್‌ ಖಾನ್‌ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಬೌಲಿಂಗ್‌ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. 

Advertisement

ಇವರು ಶ್ರೀಲಂಕಾದ ಲಸಿತ್‌ ಮಾಲಿಂಗ ಬದಲಾಗಿ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂದು ಮುಂಬೈನ ಆಂಗ್ಲ ಮಾಧ್ಯಮ ವರದಿ ಮಾಡಿದೆ. ಹಿಂದಿನ ಆವೃತ್ತಿಯಲ್ಲಿ ಮಾಲಿಂಗ ಅನ್‌ಸೋಲ್ಡ್‌ ಆಗಿದ್ದರು. ಇದೀಗ ಮಾಲಿಂಗ ಮತ್ತೆ ಮುಂಬೈ ತಂಡ ಪ್ರತಿನಿಧಿಸುವ ಸಾಧ್ಯತೆ ಇದೆ. 

ಮುಂಬರುವ ವಿಶ್ವಕಪ್‌ ಕ್ರಿಕೆಟ್‌ ಗಮನದಲ್ಲಿಟ್ಟುಕೊಂಡು ಮಾಲಿಂಗ ತಂಡದ ಸಲಹೆಗಾರ ಹುದ್ದೆಯಿಂದ ಕೆಳಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ಮಾಲಿಂಗ ಇತ್ತೀಚೆಗೆ ಏಷ್ಯಾ ಕಪ್‌ ಕ್ರಿಕೆಟ್‌ ಕೂಟದಲ್ಲಿ ಪಾಲ್ಗೊಂಡಿದ್ದರು. ಒಂದು ವೇಳೆ ಮುಂಬೈ ತಂಡ ಮಾಲಿಂಗ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಿದ್ದರೆ ಮಾಲಿಂಗ ಬೇರೆ ಯಾವುದಾದರೂ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next