ದೇವದಾಸ್ ಕಾಪಿಕಾಡ್ ನಿರ್ದೇಶನದ ಅನಿಲ್ ಕುಮಾರ್, ಲೋಕೇಶ್ ಕೋಟ್ಯಾನ್, ರಾಜೇಶ್ ಕುಡ್ಲ ನಿರ್ಮಾಣದ “ಜಬರ್‌ದಸ್ತ್ ಶಂಕರ’ ಸಿನೆಮಾದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದೆ.
ಸದ್ಯ ಇದರ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಇರುವೈಲ್, ಉಳಾಯಿಬೆಟ್ಟು, ಎಡಪದವು, ಬೆಂಜನ ಪದವು, ಕೊಡಾ¾ಣ್, ಮೆಲ್ಕಾರ್, ಪನೋಲಿಬೈಲ್ ಬಳಿಯ ಕೇಶವನಗರ ಮುಂತಾದ ಕಡೆಗಳಲ್ಲಿ ಸಿನೆಮಾದ ಶೂಟಿಂಗ್ ನಡೆದಿದೆ.
“ಜಬರ್‌ದಸ್ತ್ ಶಂಕರ’ನ ಪಾತ್ರದಲ್ಲಿ ಅರ್ಜುನ್ ಕಾಪಿಕಾಡ್, ಗ್ಯಾರೇಜ್ ಮಾಲಕನ ಪಾತ್ರದಲ್ಲಿ ದೇವದಾಸ್ ಕಾಪಿಕಾಡ್ ಇದ್ದಾರೆ.
ಇನ್ನುಳಿದಂತೆ ಸಾಯಿಕೃಷ್ಣ, ಸತೀಶ್ ಬಂದಲೆ, ಲಕ್ಷ್ಮಣ್ ಕುಮಾರ್ ಮಲ್ಲೂರು, ಗೋಪಿನಾಥ ಭಟ್, ಚೇತನ್ ರೈ ಮಾಣಿ, ಸರೋಜಿನಿ ಶೆಟ್ಟಿ, ಗಿರೀಶ್ ಎಂ. ಶೆಟ್ಟಿ ಕಟೀಲ್, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಸುನೀಲ್ ನೆಲ್ಲಿಗುಡ್ಡೆ ಪ್ರತೀಕ್ ಶೆಟ್ಟಿ, ನೀತಾ ಅಶೋಕ್, ನಿಶ್ಮಿತಾ ಬಂಗೇರ, ಶರಣ್ ಕೈಂಕಂಬ ಅಭಿನಯಿಸಿದ್ದಾರೆ.
ಸಿನೆಮಾಕ್ಕೆ ಸಿದ್ದು ಕೆಮರಾ, ಮಣಿಕಾಂತ್ ಕದ್ರಿ ಸಂಗೀತ, ಮಾಸ್‌ಮಾದ ಸಾಹಸ, ಸ್ಟಾರ್‌ಗಿರಿ ನೃತ್ಯ, ಸುಜಿತ್‌ನಾಯಕ್ ಸಂಕಲನ, ಕೇಶವ ಸುವರ್ಣ ಕಲೆ, ಶರತ್ ಪೂಜಾರಿ ವಸ್ತ್ರಾಲಂಕಾರದಲ್ಲಿ ದುಡಿದಿದ್ದಾರೆ. ಕಥೆ- ಚಿತ್ರಕಥೆ ಸಾಹಿತ್ಯ, ಸಂಭಾಷಣೆ, ನಿರ್ದೇಶನ ದೇವದಾಸ್ ಕಾಪಿಕಾಡ್.
ಯಕ್ಷಗಾನ ಸೇರಿದಂತೆ ಕರಾವಳಿಯ ಜಾನಪದ ಪ್ರಕಾರಗಳನ್ನು ಬಳಸಿಕೊಂಡು ವಿಭಿನ್ನ ನೆಲೆಯಲ್ಲಿ ಕಥೆ ಹೆಣೆಯಲಾಗಿದೆ. ಈ ಬಾರಿ ಹಾಸ್ಯದ ಜತೆಗೆ ಉತ್ತಮ ಕಥೆಯೊಂದನ್ನು “ಜಬರ್‌ದಸ್ತ್ ಶಂಕರ’ ನ ಮೂಲಕ ಹೇಳಲು ಹೊರಟಿದ್ದಾರೆ. ಸಿನೆಮಾದಲ್ಲಿ ಮನರಂಜನೆ, ಕಾಮಿಡಿ, ಹೀರೋಯಿಸಂ, ರೋಮಾನ್ಸ್, ಸಸ್ಪೆನ್ಸ್, ಥ್ರಿಲ್ಲಿಂಗ್ ಎಲ್ಲವೂ ಇದೆ. ಮುಖ್ಯವಾಗಿ ಹಾಡುಗಳು, ಫೈಟಿಂಗ್ ಗಮನ ಸೆಳೆಯಲಿದೆ ಎನ್ನುತ್ತಾರೆ ಕಾರ್ಯಕಾರಿ ನಿರ್ಮಾಪಕ ರಾಜೇಶ್ ಕುಡ್ಲ.