Advertisement
ಆರನ್ ಫಿಂಚ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ಭರ್ಜರಿ ಆಟದ ಹೊರತಾಗಿಯೂ ನಾಟಕೀಯ ಕುಸಿತ ತಂಡ ಕೋಲ್ಕತಾ ತಂಡವು 19.4 ಓವರ್‌ಗಳಲ್ಲಿ 210 ರನ್ನಿಗೆ ಆಲೌಟಾಗಿ 7 ರನ್ನಿನಿಂದ ಸೋಲನ್ನು ಕಂಡಿದೆ. ಈ ಮೊದಲು ರಾಜಸ್ಥಾನ್ ರಾಯಲ್ಸ್ ಜೋಸ್ ಬಟ್ಲರ್ ಅವರ ಭರ್ಜರಿ ಶತಕದಿಂದಾಗಿ 5 ವಿಕೆಟಿಗೆ 217 ರನ್ ಪೇರಿಸಿತ್ತು.
17ನೇ ಓವರ್ ಎಸೆದ ಚಹಲ್ ಕೇವಲ ಎರಡು ರನ್ ನೀಡಿ ಹ್ಯಾಟ್ರಿಕ್ ಸಹಿತ 4 ವಿಕೆಟ್ ಕಿತ್ತರು. ಇದುವೇ ಪಂದ್ಯ ತಿರುವು ಪಡೆಯಲು ಕಾರಣವಾಯಿತು. ಈ ಓವರಿನ ಮೊದಲ ಎಸೆತದಲ್ಲಿ ಅವರು ವೆಂಕಟೇಶ್ ಅಯ್ಯರ್ ವಿಕೆಟ್ ಉರುಳಿಸಿದರು. ಆಬಳಿಕ 4,5 ಮತ್ತು 6ನೇ ಎಸೆತದಲ್ಲಿ ಅನುಕ್ರಮವಾಗಿ ಅಪಾಯಕಾರಿ ಶ್ರೇಯಸ್, ಶಿವಂ ಮವಿ ಮತ್ತು ಕಮಿನ್ಸ್ ವಿಕೆಟ್ ಹಾರಿಸಿ ಹ್ಯಾಟ್ರಿಕ್ ಸಾಧಿಸಿದರು.
Related Articles
Advertisement
ಈ ಮೊದಲು ಆರಂಭಿಕ ಅಟಗಾರ ಜೋಸ್ ಬಟ್ಲರ್ ಅವರ ಸ್ಫೋಟಕ ಶತಕ ದಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡವು 5 ವಿಕೆಟಿಗೆ 217 ರನ್ನುಗಳ ಬೃಹತ್ ಮೊತ್ತ ಪೇರಿಸಿತ್ತು. ಇದು ಈ ಐಪಿಎಲ್‌ನ ಅತ್ಯಧಿಕ ಮೊತ್ತವೂ ಆಗಿದೆ. ಈ ಮೊದಲು ಚೆನ್ನೈ ತಂಡವು ಆರ್‌ಸಿಬಿ ವಿರುದ್ಧ 216 ರನ್ ಗಳಿಸಿತ್ತು.
17ನೇ ಓವರಿನಲ್ಲಿ ಶತಕ ಪೂರ್ತಿಗೊಳಿಸಿದ ಬಟ್ಲರ್ ಮುಂದಿನೆರಡು ಎಸೆತಗಳಲ್ಲಿ ವರುಣ್‌ಗೆ ಕ್ಯಾಚಿತ್ತು ಔಟಾದರು. ಇದು ಈ ಐಪಿಎಲ್‌ನಲ್ಲಿ ಬಟ್ಲರ್ ದಾಖಲಿಸಿದ ಎರಡನೇ ಶತಕವಾಗಿದೆ. ಈ ಮೊದಲು ಬಟ್ಲರ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸರಿಯಾಗಿ 100 ರನ್ ಗಳಿಸಿದ್ದರು. ಪಡಿಕ್ಕಲ್ ಮತ್ತು ಸ್ಯಾಮ್ಸನ್ ಜತೆ ಉತ್ತಮ ಜತೆಯಾಟದಲ್ಲಿ ಭಾಗಿಯಾಗಿದ್ದ ಬಟ್ಲರ್ ಒಟ್ಟಾರೆ 61 ಎಸೆತ ಎದುರಿಸಿದ್ದು 103 ರನ್ ಹೊಡೆದರು. 9 ಬೌಂಡರಿ ಮತ್ತು 5 ಸಿಕ್ಸರ್ ಸಿಡಿಸಿ ರಂಜಿಸಿದರು.
ಕೊನೆ ಕ್ಷಣದಲ್ಲಿ ಹಿಟ್‌ಮೈರ್ ಸಿಡಿದ ಕಾರಣ ರಾಜಸ್ಥಾನದ ಮೊತ್ತ 217ರ ವರೆಗೆ ತಲುಪಿತು. ಹಿಟ್‌ಮೈರ್ 13 ಎಸೆತಗಳಿಂದ 26 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮ ಓವರಿನಲ್ಲಿ ತಂಡವು 18 ರನ್ ಗಳಿಸಿತ್ತು. ಆದರೆ ಶಿವಂ ಮವಿ ಎಸೆದ 19ನೇ ಓವರಿನಲ್ಲಿ ಕೇವಲ 5 ರನ್ ಬಂದಿತ್ತು.
ರಾಜಸ್ಥಾನ ತಂಡದ ಆರಂಭ ಉತ್ತಮವಾಗಿತ್ತು. ಇನ್ನಿಂಗ್ಸ್ ಆರಂಭಿಸಿದ ಜೋಸ್ ಬಟ್ಲರ್ ಮತ್ತು ಕರ್ನಾಟಕದ ದೇವದತ್ತ ಪಡಿಕ್ಕಲ್ ಕೆಕೆಆರ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ್ದರು.
ಸ್ಕೋರ್ ಪಟ್ಟಿ
ರಾಜಸ್ಥಾನ್ ರಾಯಲ್ಸ್ಜೋಸ್ ಬಟ್ಲರ್ ಸಿ ವರುಣ್ ಬಿ ಕಮಿನ್ಸ್ 103
ದೇವದತ್ತ ಪಡಿಕ್ಕಲ್ ಬಿ ನಾರಾಯಣ್ 24
ಸಂಜು ಸ್ಯಾಮ್ಸನ್ ಸಿ ಮವಿ ಬಿ ರಸೆಲ್ 38
ಶಿಮ್ರಾನ್ ಹಿಟ್‌ಮೈರ್ ಔಟಾಗದೆ 26
ರಿಯಾನ್ ಪರಾಗ್ ಸಿ ಮವಿ ಬಿ ನಾರಾಯಣ್ 5
ಕರುಣ್ ನಾಯರ್ ಸಿ ಕಮಿನ್ಸ್ ಬಿ ಮವಿ 3
ಆರ್. ಅಶ್ವಿನ್ ಔಟಾಗದೆ 2
ಇತರ 16
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ) 217
ವಿಕೆಟ್ ಪತನ: 1-97, 2-164, 3-183, 4-189, 5-198
ಬೌಲಿಂಗ್: ಉಮೇಶ್ ಯಾದವ್ 4-0-44-0
ಶಿವಂ ಮವಿ 4-0-34-1
ವರುಣ್ ಚಕ್ರವರ್ತಿ 2-0-30-0
ಪ್ಯಾಟ್ ಕಮಿನ್ಸ್ 4-0-50-1
ಸುನೀಲ್ ನಾರಾಯಣ್ 4-0-21-2
ಆ್ಯಂಡ್ರೆ ರಸೆಲ್ 2-0-29-1 ಕೋಲ್ಕತಾ ನೈಟ್‌ರೈಡರ್
ಆರನ್ ಫಿಂಚ್ ಸಿ ನಾಯರ್ ಬಿ ಕೃಷ್ಣ 58
ಸುನೀಲ್ ನಾರಾಯಣ್ ರನೌಟ್ 0
ಶ್ರೇಯಸ್ ಅಯ್ಯರ್ ಎಲ್‌ಬಿಡಬ್ಲ್ಯು ಬಿ ಚಹಲ್ 85
ನಿತೀಶ್ ರಾಣಾ ಸಿ ಬಟ್ಲರ್ ಬಿ ಚಹಲ್ 18
ಆ್ಯಂಡ್ರೆ ರಸೆಲ್ ಬಿ ಅಶ್ವಿನ್ 0
ವೆಂಕಟೇಶ್ ಅಯ್ಯರ್ ಸ್ಟಂಪ್ಡ್ ಸ್ಯಾಮ್ಸನ್ ಬಿ ಚಹಲ್ 6
ಶೆಲ್ಡನ್ ಜ್ಯಾಕ್ಸನ್ ಸಿ ಕೃಷ್ಣ ಬಿ ಮೆಕ್‌ಕಾಯ್ 8
ಶಿವಂ ಮವಿ ಸಿ ಪರಾಗ್ ಬಿ ಚಹಲ್ 0
ಪ್ಯಾಟ್ ಕಮಿನ್ಸ್ ಸಿ ಸ್ಯಾಮ್ಸನ್ ಬಿ ಚಹಲ್ 0
ಉಮೇಶ್ ಯಾದವ್ ಬಿ ಮೆಕ್‌ಕಾಯ್ 21
ವರುಣ್ ಚಕ್ರವರ್ತಿ ಔಟಾಗದೆ 1
ಇತರ: 13
ಒಟ್ಟು (19.4 ಓವರ್‌ಗಳಲ್ಲಿ ಆಲೌಟ್) 210
ವಿಕೆಟ್ ಪತನ: 1-0, 2-107, 3-148, 4-149, 5-178, 6-180, 7-180, 8-180, 9-209
ಬೌಲಿಂಗ್: ಟ್ರೆಂಟ್ ಬೌಲ್ಟ್ 4-0-48-0
ಪ್ರಸಿದ್ಧ್ ಕೃಷ್ಣ 4-0-43-1
ಒಬೆದ್ ಮೆಕ್‌ಕಾಯ್ 3.4-0-41-2
ಆರ್. ಅಶ್ವಿನ್ 4-0-38-1
ಯಜುವೇಂದ್ರ ಚಹಲ್ 4-0-40-5
ಪಂದ್ಯಶ್ರೇಷ್ಠ: ಯಜುವೇಂದ್ರ ಚಹಲ್