Advertisement

ಯುವರಾಜ್‌ ಸಿಂಗ್‌ ಹೊಸ ಹೇರ್‌ಸ್ಟೈಲ್‌

09:56 AM Apr 07, 2017 | Team Udayavani |

ಹೈದರಾಬಾದ್‌: ಸ್ಫೋಟಕ ಅರ್ಧಶತಕ ಸಿಡಿಸಿ ಹಾಲಿ ಚಾಂಪಿಯನ್‌ ಸನ್‌ರೈಸರ್ ಹೈದರಾಬಾದ್‌ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟ ಯುವರಾಜ್‌ ಸಿಂಗ್‌ ಹೊಸ ಹೇರ್‌ಸ್ಟೈಲ್‌ನಿಂದಲೂ ಗಮನ ಸೆಳೆದರು. 

Advertisement

ಪಂದ್ಯದ ಬಳಿಕ ನಡೆದ ಪ್ರಶಸ್ತಿ ವಿತರಣ ಸಮಾರಂಭದಲ್ಲಿ ವೀಕ್ಷಕವಿವರಣೆಕಾರ ಸಂಜಯ್‌ ಮಾಂಜ್ರೆàಕರ್‌ ಅವರು ಯುವಿ ಅವರ ಹೇರ್‌ಸ್ಟೈಲ್‌ ಬಗ್ಗೆ ಮಾತು ಆರಂಭಿಸಿದರು. ನಿಮ್ಮ ಹೇರ್‌ಸ್ಟೈಲ್‌ ಬಗ್ಗೆ ಮಾತು ಆರಂಭಿಸುವೆ. ನಿಮ್ಮ ಅಭ್ಯಂತರವಿಲ್ಲದಿದ್ದರೆ ಇದೊಂದು ಆಸಕ್ತಿಯ ವಿಷಯವಲ್ಲವೇ. ಸ್ವಲ್ಪಮಟ್ಟಿಗೆ ಹೊಸತು ಅಲ್ಲವೇ ಎಂದರು. ಇದಕ್ಕೆ ತಮಾಷೆಯಾಗಿ ಉತ್ತರಿಸಿದ ಯುವರಾಜ್‌ ಪ್ರತಿಯೊಂದು ಐಪಿಎಲ್‌ ಹೊಸತನ್ನು ತರುತ್ತಿದೆ. ನಾವು ಯುವ ಆಟಗಾರರಿಂದ ಕಲಿಯುತ್ತೇವೆ ಮತ್ತು ಇದು ನನ್ನ ಪಾಲಿಗೆ ಒಳ್ಳೆಯದನ್ನು ಮಾಡುಬಹುದೆಂಬ ಭರವಸೆಯಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next