ಮುಂಬೈ: ಮಹೇಂದ್ರ ಸಿಂಗ್ ಧೋನಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇದಾಗಿ ಮೊದಲ ಪಂದ್ಯದಲ್ಲೇ ತಂಡ ಗೆಲುವು ಸಾಧಿಸಿದೆ. ಐಪಿಎಲ್ 2022 ಕ್ಕೆ ಮುಂಚಿತವಾಗಿ ಸಿಎಸ್‌ಕೆ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಬಿಟ್ಟುಕೊಟ್ಟಿದ್ದ ಧೋನಿ, ‘ತಂಡದ ಲಾಭ’ಕ್ಕಾಗಿ ಮತ್ತೆ ನಾಯಕತ್ವದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಧೋನಿ ವೃತ್ತಿಜೀವನದಲ್ಲಿ ಪಡೆದ ಬೆಂಬಲವನ್ನು ಅನೇಕ ಕ್ರಿಕೆಟಿಗರು ಪಡೆಯುವುದಿಲ್ಲ ಎಂದು ಯುವರಾಜ್ ಸಿಂಗ್ ಆಭಿಪ್ರಾಯ ಪಟ್ಟಿದ್ದಾರೆ.
“ಖಂಡಿತವಾಗಿಯೂ, ನೀವು ಕೋಚ್ ಮತ್ತು ನಾಯಕನ ಬೆಂಬಲವನ್ನು ಹೊಂದಿದ್ದರೆ ಅದು ಸಹಾಯ ಮಾಡುತ್ತದೆ. ಮಾಹಿ (ಎಂಎಸ್ ಧೋನಿ) ಅವರ ವೃತ್ತಿಜೀವನದ ಕೊನೆಯಲ್ಲಿ ನೋಡಿ. ಅವರಿಗೆ ವಿರಾಟ್ ಮತ್ತು ರವಿಶಾಸ್ತ್ರಿಯವರಿಂದ ತುಂಬಾ ಬೆಂಬಲವಿತ್ತು. ಅವರು ಅವನನ್ನು ವಿಶ್ವಕಪ್ ಗೆ ಕರೆದೊಯ್ದರು. ಅವರು ಕೊನೆಯವರೆಗೂ ಆಡಿದರು ಮತ್ತು 350 ಪಂದ್ಯಗಳನ್ನು ಆಡಿದರು. ಬೆಂಬಲ ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಆದರೆ ಭಾರತೀಯ ಕ್ರಿಕೆಟ್‌ನಲ್ಲಿ ಎಲ್ಲರಿಗೂ ಬೆಂಬಲ ಸಿಗುವುದಿಲ್ಲ” ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಮುಂಬೈ ಇಂಡಿಯನ್ಸ್ ಸೋಲಿನ ಆರಂಭದಿಂದ ಚಾಂಪಿಯನ್ ಆಗುವ ತನಕ…
ಗೌತಮ್ ಗಂಭೀರ್, ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್ ಮತ್ತು ವಿವಿಎಸ್ ಲಕ್ಷ್ಮಣ್ ಅವರ ಉದಾಹರಣೆಗಳನ್ನು ಯುವರಾಜ್ ನೀಡಿದರು. ಆಟಗಾರನ ಸ್ಥಾನವು ಅಪಾಯದಲ್ಲಿದ್ದಾಗ, ಆತ ಉನ್ನತ ಮಟ್ಟದಲ್ಲಿ ಪ್ರದರ್ಶನ ನೀಡುವುದು ಕಷ್ಟ ಎಂದರು.
“ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಗೌತಮ್ ಗಂಭೀರ್ ಅವರಂತಹ ಶ್ರೇಷ್ಠ ಆಟಗಾರರಿಗೆ ಆ ಬೆಂಬಲ ಸಿಗಲಿಲ್ಲ. ನೀವು ಅಲ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ ನಿಮ್ಮ ತಲೆಯ ಮೇಲೆ ತುಗು ಕತ್ತಿ ನೇತಾಡುತ್ತಿದೆ ಎಂದು ನಿಮಗೆ ಅನಿಸಿದರೆ ಹೇಗೆ ಏಕಾಗ್ರತೆ ಮಾಡುತ್ತೀರಿ, ಹೇಗೆ ಉತ್ತಮ ಪ್ರದರ್ಶನ ನೀಡುತ್ತೀರಿ” ಎಂದು ಯುವರಾಜ್ ಪ್ರಶ್ನಿಸಿದರು.