Advertisement

ಬ್ರಾಡಿ, ನೀವೋರ್ವ ಲೆಜೆಂಡ್‌: ಯುವಿ

02:47 AM Jul 30, 2020 | Hari Prasad |

ಹೊಸದಿಲ್ಲಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಉರುಳಿಸಿದ ಸಾಧಕನಾಗಿ ಮೂಡಿಬಂದ ಸ್ಟುವರ್ಟ್‌ ಬ್ರಾಡ್‌ ಅವರಿಗೆ ಯುವರಾಜ್‌ ಸಿಂಗ್‌ ಶುಭ ಹಾರೈಸಿದ್ದಾರೆ.

Advertisement

ಬ್ರಾಡ್‌ ‘ಕ್ರಿಕೆಟ್‌ ಲೆಜೆಂಡ್‌’ ಎಂದು ಗುಣಗಾನ ಮಾಡಿದ್ದಾರೆ.

‘ಪ್ರತೀ ಸಲವೂ ನಾನು ಬ್ರಾಡ್‌ ಬಗ್ಗೆ ಬರೆಯುವಾಗ ಜನರು 6 ಸಿಕ್ಸರ್‌ಗಳಿಗೆ ತಳುಕು ಹಾಕುತ್ತಾರೆ.

ಆದರೆ ಇಂದು ನನ್ನೆಲ್ಲ ಅಭಿಮಾನಿಗಳಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ, ಬ್ರಾಡ್‌ ಸಾಧನೆಗೊಂದು ಪ್ರಶಂಸೆ ಇರಲಿ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಉಡಾಯಿಸುವುದು ತಮಾಷೆಯಲ್ಲ.

Advertisement

ಇದಕ್ಕೆ ಕಠಿನ ದುಡಿಮೆ, ಬದ್ಧತೆ ಅಗತ್ಯವಿದೆ. ಬ್ರಾಡಿ, ನೀವೋರ್ವ ಲೆಜೆಂಡ್ರಿ ಕ್ರಿಕೆಟಿಗ! ಹ್ಯಾಟ್ಸ್‌ ಆಫ್’ ಎಂದು ಯುವರಾಜ್‌ ಸಿಂಗ್‌ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

6 ಸಿಕ್ಸರ್‌ಗಳ ಕಹಿ…
2007ರ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಬ್ರಾಡ್‌ ಅವರ ಓವರಿನಲ್ಲಿ ಸತತ 6 ಸಿಕ್ಸರ್‌ ಬಾರಿಸಿ ಮೆರೆದಿದ್ದ ಯುವರಾಜ್‌, ಇಂಗ್ಲೆಂಡ್‌ ಕ್ರಿಕೆಟಿಗನ ಈ ಐತಿಹಾಸಿಕ ಸಾಧನೆಯ ವೇಳೆ ಶುಭ ಹಾರೈಸಿದ್ದು ಕ್ರೀಡಾಸ್ಫೂರ್ತಿಯ ಉತ್ತಮ ನಿದರ್ಶನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next