ಚಂಡೀಗಢ: ಒಂದು ಕಾಲ ದಲ್ಲಿ ತಮ್ಮ ಸ್ಫೋಟಕ, ನಂಬಿಗಸ್ಥ ಬ್ಯಾಟಿಂಗ್‌ನಿಂದ ವಿಶ್ವ ಕ್ರಿಕೆಟ್‌ನಲ್ಲಿ ಮಿಂಚಿದ ಯುವರಾಜ್ ಸಿಂಗ್, ಕಳೆದ ವರ್ಷ ಜೂನ್‌ನಲ್ಲಿ ಎಲ್ಲ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದರು. ಈಗ ನಿವೃತ್ತಿ ತ್ಯಜಿಸಿ ದೇಶಿ ಕ್ರಿಕೆಟಿಗೆ ಮರಳುವ ಸುಳಿವು ನೀಡಿದ್ದಾರೆ. ಈ ಕುರಿತು ಯುವರಾಜ್ ಬಿಸಿಸಿಐಗೆ ಪತ್ರವೊಂದನ್ನು ಬರೆದಿದ್ದು, ಉತ್ತರಕ್ಕಾಗಿ ಕಾಯುತ್ತಿದ್ದಾರೆ.
ಪಂಜಾಬ್ ಕ್ರಿಕೆಟ್ ತಂಡ ಅತ್ಯುತ್ತಮ ಪ್ರದರ್ಶನ ನೀಡಬೇಕು, ಇದಕ್ಕೆ ತನ್ನ ನೆರವು ಸಿಗಬೇಕು ಎಂಬ ಹಿನ್ನೆಲೆಯಲ್ಲಿ ಯುವಿ ಈ ನಿರ್ಧಾರ ಮಾಡಿದ್ದಾರೆ. ಈಗಾಗಲೇ ಅವರು ಪಂಜಾಬ್ ತಂಡದ ಶುಭಮನ್ ಗಿಲ್, ಅಭಿಷೇಕ್ ಶರ್ಮ, ಪ್ರಭ್‌ಸಿಮ್ರಾನ್ ಸಿಂಗ್, ಅನ್‌ಮೋಲ್‌ಪ್ರೀತ್ ಸಿಂಗ್ ಜತೆ ಕಳೆದ ಕೆಲವು ತಿಂಗಳಿನಿಂದ ಅಭ್ಯಾಸ ನಡೆಸಿದ್ದಾರೆ.
ಇದೇ ವೇಳೆ ವಾಪಸ್ ಬನ್ನಿ ಎಂದು ಪಂಜಾಬ್ ಕ್ರಿಕೆಟ್ ಸಂಸ್ಥೆಯೂ (ಪಿಸಿಎ) ಮನವಿ ಮಾಡಿದೆ. ಪಿಸಿಎ ಕಾರ್ಯದರ್ಶಿ ಪುನೀತ್ ಬಾಲಿ, ಯುವರಾಜ್ ಅವ ರನ್ನು ಸಂಪರ್ಕಿಸಿದವರಲ್ಲಿ ಪ್ರಮು ಖರು. ಈ ಕುರಿತು ಸುದೀರ್ಘವಾಗಿ ಯೋಚಿಸಿ, ಮತ್ತೆ ದೇಶಿ ಕ್ರಿಕೆಟಿಗೆ ಮರ ಳುವ ಸೂಚನೆ ನೀಡಿದ್ದಾರೆ ಯುವಿ.
“ಸದ್ಯ ಖಚಿತವಾಗಿ ಏನನ್ನೂ ಹೇಳಲಾರೆ. ವಿವಿಧ ಕ್ರಿಕೆಟ್ ಲೀಗ್‌ಗಳಲ್ಲಿ ಆಡಬೇಕೆಂದು ನಾನು ನಿರ್ಧರಿಸಿದ್ದೆ. ಆದರೆ ಬಾಲಿ ಅವರ ಕೋರಿಕೆಯನ್ನು ತಿರಸ್ಕರಿಸಲಾಗದು’ ಎನ್ನುವ ಮೂಲಕ ಯುವರಾಜ್ ಸಿಂಗ್ ದೇಶಿ ಕ್ರಿಕೆಟಿನತ್ತ ಮರಳಿ ಹೆಜ್ಜೆ ಇಡಲಿದ್ದಾರೆ ಎಂದು ತೀರ್ಮಾನಿಸಬಹುದಾಗಿದೆ.
“ಯುವರಾಜ್ ಸದ್ಯ ಯುಎಇ ಯಲ್ಲಿದ್ದು, ಒಂದೆರಡು ದಿನಗಳಲ್ಲಿ ಮರಳಲಿದ್ದಾರೆ. ಅನಂತರ ತೀರ್ಮಾನ ತೆಗೆದುಕೊಳ್ಳಬಹುದು’ ಎಂಬುದಾಗಿ ತಾಯಿ ಶಬ್ನಮ್ ಹೇಳಿದ್ದಾರೆ. ಇದೇನಿದ್ದರೂ ಆತನ ವೈಯಕ್ತಿಕ ನಿರ್ಧಾರ ಎಂಬುದು ತಂದೆ ಯೋಗ ರಾಜ್ ಸಿಂಗ್ ಪ್ರತಿಕ್ರಿಯೆ.