Advertisement
ಇದೇ ಸಂದರ್ಭದಲ್ಲಿ ಯುವಿ ಕ್ರಿಸ್‌ನಲ್ಲಿ ಆಗಾಗಾ ಕೆಮ್ಮುತ್ತಿದ್ದರು. ಆದರೆ ಅದು ಯಾವುದೋ ಗಂಭೀರ ಕಾಯಿಲೆ ಅನ್ನುವುದು ಸ್ವತಃ ಯುವರಾಜ್‌ಗೂ ತಿಳಿದಿರಲ್ಲ. ಆನಂತರವೇ ಗೊತ್ತಾಗಿದ್ದು, ಅದು ಶ್ವಾಸಕೋಶದ ಕ್ಯಾನ್ಸರ್ ಲಕ್ಷಣ ಅನ್ನುವುದು. ನಂತರ ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಯುವಿ ಪುನಃ ಪುನಃ ಪುಟಿದೇಳುತ್ತಿರುವುದು ಎಂತಹವರಲ್ಲಿಯೂ ಅಚ್ಚರಿ ಹುಟ್ಟಿಸುವ ಜತೆಗೆ ಉತ್ಸಾಹ ಚಿಮ್ಮಿಸುವಂತೆ ಮಾಡುತ್ತೆ.
2012ರಲ್ಲಿ ಕ್ಯಾನ್ಸರ್‌ಗೆ ತುತ್ತಾದಾಗ ಇನ್ನು ಕ್ರಿಕೆಟ್‌ನಲ್ಲಿ ಯುವಿ ಕಥೆ ಮುಗಿಯಿತು ಅಂದುಕೊಂಡವರೇ ಅಧಿಕ. ಮತ್ತೆ ಯುವಿ ಕಣಕ್ಕೆ ಇಳಿಯಬೇಕು ಅನ್ನುವ ಭಯಕೆ ಅಭಿಮಾನಿಗಳಲ್ಲಿ ಇತ್ತು. ಹೀಗಾಗಿ ಅಭಿಮಾನಿಗಳು ಯುವಿ ಹೆಸರಲ್ಲಿ ದೇವರಿಗೆ ಹೋಮ, ಪೂಜೆ ಮಾಡಿದ್ದಾರೆ. ಅಂತೂ ಯುವಿ ಶೀಘ್ರವೇ ಚೇತರಿಸಿಕೊಂಡರು. ಅಷ್ಟೇ ಅಲ್ಲ ಕ್ರಿಕೆಟ್ ಅನ್ನು ಫ್ಯಾಷನ್ ಆಗಿ ತೆಗೆದುಕೊಂಡ ಯುವಿ ಮತ್ತೆ ದೇಶಿಯ ಟೂರ್ನಿಗಳಲ್ಲಿ ಆಡಲು ಕಣಕ್ಕೆ ಇಳಿದರು. ದೇಶಿಯ ಟೂರ್ನಿಯಲ್ಲಿ ನೀಡಿದ ಪ್ರದರ್ಶನ ಮತ್ತೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯಲು ಮೆಟ್ಟಿಲಾಯಿತು. ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಗೆ ಆಯ್ಕೆಯಾಗಿ ಜಗತ್ತು ಇಬ್ಬೆರಗಾಗುವಂತೆ ಮಾಡಿದರು. 2012ರ ಟಿ20 ವಿಶ್ವಕಪ್‌ಗ್ೂ ಆಯ್ಕೆಯಾದರು. ಯುವಿಗೆ ಮತ್ತೆ ಮತ್ತೆ ಪುಟಿದೇಳುವ ತಾಕತ್ತು
ಯುವಿ ಕಥೆ ಮುಗಿಯಿತು ಅನ್ನುವ ಕಾಲಗಟ್ಟದಲೇ ಯುವಿ ಪುಟಿದೇಳುತ್ತಾರೆ. ಅಂತಹ ಒಂದು ಅದ್ಭುತ ಗುಣ ಯುವಿಯಲ್ಲಿದೆ. ಅದು ಆತ ಕ್ರಿಕೆಟ್ ಅನ್ನು ಫ್ಯಾಷನ್ ಆಗಿ ತೆಗೆದುಕೊಂಡಿರುವುದರಿಂದಲೂ ಅಥವಾ ಜೀವನದಲ್ಲಿ ಅನುಭವಿಸಿದ ನೋವೋ ತಿಳಿಯದು. ಇದು ಯುವಿಯನ್ನು ಪುಟಿದೇಳುವಂತೆ ಮಾಡುತ್ತದೆ. 2011 ವಿಶ್ವಕಪ್ ನಂತರ ಯುವಿ ಆಗಾಗ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ನಿರಂತರ ಸ್ಥಾನ ಸಿಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧ ಭರ್ಜರಿ 150 ರನ್ ಬಾರಿಸಿ ಭಾರತಕ್ಕೆ ಗೆಲುವು ತಂದರು. ಹೀಗಾಗಿ ಮತ್ತೆ ಕ್ರಿಕೆಟ್ ಜಗತ್ತು ಯುವಿಯತ್ತ ತಿರುಗಿ ನೋಡುತ್ತಿದೆ.
Related Articles
ಬ್ರಿಟಿಷರ ವಿರುದ್ಧ ಭಗತ್ ಸಿಂಗ್ ಹೋರಾಟ ಎಂತದ್ದು ಅನ್ನುವುದು ಇಡೀ ಭಾರತಕ್ಕೆ ಗೊತ್ತು. ಅದೇ ರೀತಿ ಸದ್ಯ ಬ್ರಿಟಿಷರಿಗೆ ದುಸ್ವಪ್ನವಾಗಿ ಕಾಡುತ್ತಿರುವ ಪಂಜಾಬಿಗನೆಂದರೆ ಆತ ಯುವರಾಜ್ ಸಿಂಗ್ ಆಗಿದ್ದಾರೆ. 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್‌ನ ಒಂದೇ ಓವರ್‌ಲ್ಲಿ 6 ಸಿಕ್ಸರ್‌ಬಾರಿಸಿ ವಿಶ್ವದಾಖಲೆ ನಿರ್ಮಿಸಿದರು. ಅಷ್ಟೇ ಅಲ್ಲ ಯುವಿ ಏಕದಿನದಲ್ಲಿ ಇಲ್ಲಿಯವರೆಗೆ ಇಂಗ್ಲೆಂಡ್ ವಿರುದ್ಧ 4 ಶತಕ ದಾಖಲಿಸಿದ್ದಾರೆ. ಪ್ರತಿ ಬಾರಿ ಭಾರತ-ಇಂಗ್ಲೆಂಡ್ ಪಂದ್ಯ ಇರುವಾಗ ಇಂಗ್ಲೆಂಡ್ ಬೌಲರ್‌ಗಳು ಬೆವರಿಳಿಯುವುದು ಖಚಿತ. ಯುವಿ ಬ್ಯಾಟಿಂಗ್ ವೈಭವ ನೋಡುವುದು ಹಬ್ಬ.
Advertisement
ಕ್ಯಾನ್ಸರ್ ರೋಗಿಗಳಿಗೆ ನೆರವುಕ್ಯಾನ್ಸರ್ ರೋಗದಿಂದ ಗುಣಮುಖರಾದ ಯುವರಾಜ್‌ಗೆ ಅದರ ನೋವು ಏನು ಅನ್ನುವ ಅರಿವಿದೆ. ಹೀಗಾಗಿ ಬಡ ರೋಗಿಗಳಿಗಾಗಿ ನೆರವಾಗುವ ಉದ್ದೇಶದಿಂದ ಟ್ರಸ್ಟ್‌ವೊಂದನ್ನು ಸ್ಥಾಪಿಸಿದ್ದಾರೆ. ಇದರ ಮೂಲಕ ರೋಗಿಗಳಿಗೆ ಚಿಕಿತ್ಸೆಗೆ ನೆರವು ನೀಡುವ ಕೆಲಸವಾಗುತ್ತಿದೆ. ಕ್ರಿಕೆಟ್‌ಗಾಗಿ ವಿವಿಧ ನಗರಗಳಿಗೆ ಹೋದಾಗ ಅಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳನ್ನು ಭೇಟಿ ಮಾಡಿ ಒಂದೊಷ್ಟು ಸಮಯ ಕಳೆಯುತ್ತಾರೆ. ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಾರೆ. ಇಂತಹ ಒಂದು ಮಾನವೀಯ ಗುಣ ಯುವಿಯಲ್ಲಿ ಅಡಕವಾಗಿದೆ. ಮಂಜು ಮಳಗುಳಿ