ಮುಂಬೈ: ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಪತ್ನಿ ಹೇಜಲ್ ಕೀಚ್ ಮೊದಲ ಮಗುವಿನ ಸಂತಸದಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಯುವರಾಜ್ ಸಿಂಗ್ ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ.
“ದೇವರು ನಮಗೆ ಗಂಡು ಮಗುವನ್ನು ಆಶೀರ್ವದಿಸಿದ್ದಾನೆ ಎಂದು ನಮ್ಮ ಎಲ್ಲಾ ಅಭಿಮಾನಿಗಳು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಈ ಆಶೀರ್ವಾದಕ್ಕಾಗಿ ನಾವು ದೇವರಿಗೆ ಧನ್ಯವಾದ ಹೇಳುತ್ತೇವೆ. ನೀವು ನಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ಬಯಸುತ್ತೇವೆ ”ಎಂದು ಯುವರಾಜ್ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ರಾಜ್ಯದ ಐವರು ಪದ್ಮಶ್ರೀಗೆ ಭಾಜನರು; ವಿಟ್ಲದ ಅಮೈ ಮಹಾಲಿಂಗ ನಾಯ್ಕರಿಗೂ ಪ್ರಶಸ್ತಿ
ಯುವರಾಜ್ ಸಿಂಗ್ ಮತ್ತು ಹೇಜಲ್ ಕೀಚ್ 2016 ರಲ್ಲಿ ವಿವಾಹವಾದರು.
Related Articles
ಅವರು 19 ವರ್ಷಗಳ ಕಾಲ ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸಿದ ನಂತರ ಜೂನ್ 10, 2019 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದರು.