ಪುನೀತ್ ರಾಜ್‌ಕುಮಾರ್ ನಟನೆಯ “ಯುವರತ್ನ’ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರ ಏ.01 ರಂದು ಬಿಡುಗಡೆಯಾಗುತ್ತಿದ್ದು, ಈಗಾಗಲೇ ಮುಂಗಡ ಬುಕಿಂಗ್ ಆರಂಭವಾಗಿದೆ.
ಈಗಾಗಲೇ ಬಹುತೇಕ ಶೋಗಳು ಹೌಸ್ ಫುಲ್ ಆಗುವ ಮೂಲಕ ಸಿನಿಮಾದ ಕ್ರೇಜ್ ಅನ್ನು ತೋರಿಸುತ್ತಿದೆ. 2019ರಲ್ಲಿ ಪುನೀತ್ ನಟನೆಯ “ನಟ ಸಾರ್ವಭೌಮ’ ಚಿತ್ರ ಬಿಡುಗಡೆಯಾದ ನಂತರ ಅವರು ನಾಯಕರಾಗಿರುವ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಈಗ “ಯುವರತ್ನ’ ಬಿಡುಗಡೆಯ ಹಂತಕ್ಕೆ ಬಂದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ:ಟೀ ಮಾರಿ ಕೋಟ್ಯಧಿಪತಿಯಾದ 22ರ ಯುವಕ : ಅರ್ಧಕ್ಕೆ ಶಿಕ್ಷಣ ಬಿಟ್ಟವ ಕುಬೇರನಾದ ರಿಯಲ್ ಕಹಾನಿ
ಈ ಚಿತ್ರ ವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದು, ಹೊಂಬಾಳೆ ಫಿಲಂಸ್ ನಿರ್ಮಿಸಿದೆ. ಈಗಾಗಲೇ ಈ ಕಾಂಬಿನೇಶನ್ ನಲ್ಲಿ ಬಂದ “ರಾಜ್ ಕುಮಾರ’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಈಗ ಮತ್ತೂಮ್ಮೆ ಕಾಂಬಿನೇಶನ್ ಚಿತ್ರ ಬರುತ್ತಿದೆ. ಈ ಬಗ್ಗೆ ಮಾತನಾಡುವ ಪುನೀತ್, “ಕಾಂಬಿನೇಷನ್ ಅನ್ನೋದಕ್ಕಿಂತ ನಿರ್ದೇಶಕ ಸಂತೋಷ್, “ಹೊಂಬಾಳೆ ಫಿಲಂಸ್’ ಜೊತೆಗೆ ಫ್ಯಾಮಿಲಿ ಥರದ ಒಂದು ಸಂಬಂಧ ಬೆಳೆದುಬಿಟ್ಟಿದೆ. “ಯುವರತ್ನ’ ಸಿನಿಮಾ ವ್ಯಾಲ್ಯೂ ಬಹಳ ಇಷ್ಟವಾಯಿತು. ಹಾಗಾಗಿ ಒಪ್ಪಿಕೊಂಡೆ’ ಎನ್ನುತ್ತಾರೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಿಟ್ ಆಗಿದ್ದು, ಟ್ರೇಲರ್ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳ ಮನ ಗೆದ್ದಿದೆ. ಅದರಲ್ಲೂ ಟ್ರೇಲರ್‌ನಲ್ಲಿರುವ ಡೈಲಾಗ್ ಮಾಸ್ ಆಡಿಯನ್ಸ್ ಕ್ರೇಜ್ ಹೆಚ್ಚಿಸಿದೆ.