Advertisement

ಮಾ.16ಕ್ಕೆ “ಯುವರತ್ನ’ಡೈಲಾಗ್‌ ಟೀಸರ್‌

09:28 AM Mar 11, 2020 | Lakshmi GovindaRaj |

ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಮಾರ್ಚ್‌ 17ಕ್ಕೆ ಎದುರು ನೋಡುತ್ತಿದ್ದಾರೆ. ಅದಕ್ಕೆ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ. ಮಾರ್ಚ್‌ 17 ರಂದು ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ತಯಾರಿ ನಡೆಸಿದ್ದಾರೆ.

Advertisement

ಈಗ ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲು “ಯುವರತ್ನ’ ತಂಡ ಮುಂದಾಗಿದೆ. ಮಾರ್ಚ್‌ 16 ರಂದು “ಯುವರತ್ನ’ ಚಿತ್ರದ ಡೈಲಾಗ್‌ ಟೀಸರ್‌ ಬಿಡುಗಡೆ ಮಾಡಲಿದೆ. ಪವರ್‌ಫ‌ುಲ್‌ ಡೈಲಾಗ್‌ಗಳಿರುವ ಟೀಸರ್‌ ಅನ್ನು ಪುನೀತ್‌ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಲಿದೆ.

ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ ಈ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಹಾಡುಗಳ ಚಿತ್ರೀಕರಣ ಬಾಕಿ ಇದೆ. ವಿದೇಶಕ್ಕೆ ಹೋಗಿ ಹಾಡುಗಳನ್ನು ಚಿತ್ರೀಕರಿಸಲು ಚಿತ್ರತಂಡ ಮುಂದಾಗಿತ್ತು. ಆದರೆ, ಎಲ್ಲಾ ಕಡೆ ಕೊರೊನಾ ವೈರಸ್‌ ಎಫೆಕ್ಟ್ ಜೋರಾಗಿದ್ದರಿಂದ ಚಿತ್ರತಂಡ ಕೂಡಾ ಹಾಡಿನ ಚಿತ್ರೀಕರಣವನ್ನು ಮುಂದಕ್ಕೆ ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next