Advertisement

ಏಪ್ರಿಲ್‌ 1ಕ್ಕೆ ಯುವರತ್ನ ರಿಲೀಸ್‌

12:43 PM Jan 02, 2021 | Team Udayavani |

ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ ಹೊಸಚಿತ್ರ “ಯುವರತ್ನ’ದ ಬಿಡುಗಡೆಗೆ ಅಂತೂ ಮುಹೂರ್ತ ನಿಗಧಿಯಾಗಿದೆ.

Advertisement

“ಯುವರತ್ನ’ ಚಿತ್ರದ ಬಿಡುಗಡೆ ಯಾವಾಗ ಎಂದು ಕಾದು ಕುಳಿತಿದ್ದ ಅಪ್ಪು ಅಭಿಮಾನಿಗಳಿಗೆ ಚಿತ್ರತಂಡ ವರ್ಷದ ಮೊದಲ ದಿನವೇ ಗುಡ್‌ ನ್ಯೂಸ್‌ ಕೊಟ್ಟಿದೆ. ಹೌದು, “ಯುವರತ್ನ’ ಚಿತ್ರವನ್ನು ಇದೇ ಏಪ್ರಿಲ್‌ 1 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ನಟ ಪುನೀತ್‌ ರಾಜಕುಮಾರ್‌, ನಿರ್ದೇಶಕ ಸಂತೋಷ್‌ ಆನಂದರಾಮ್‌ ಟ್ವಿಟ್ಟರ್‌ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ “ಯುವರತ್ನ’ ಚಿತ್ರವನ್ನು ರಿಲೀಸ್‌ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ.

ಇದನ್ನೂ ಓದಿ: ಬಾ ಗುರು ಸಿನಿಮಾ ನೋಡೋಣ… : ಬೇವು ತಿಂದಾಯ್ತು ಬೆಲ್ಲ ಸವಿಯುವ ಸಮಯ

“ಯುವರತ್ನ’ ಚಿತ್ರದಲ್ಲಿ ಪುನೀತ್‌ ರಾಜಕುಮಾರ್‌ಗೆ ಸಯೇಷಾ ಸೈಗಲ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. “ಯುವರತ್ನ’ ಚಿತ್ರದ ಬಿಡುಗಡೆಯ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿದ್ದರೂ, ಇಲ್ಲಿಯವರೆಗೆ ಚಿತ್ರತಂಡ ಮಾತ್ರ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿರಲಿಲ್ಲ. ಆದರೆ ಕಳೆದ ಒಂದು ತಿಂಗಳಿನಿಂದ ಚಿತ್ರದ ಟೀಸರ್‌, ಮತ್ತು ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ “ಯುವರತ್ನ’ ಚಿತ್ರತಂಡ, ಈಗ “ಯುವರತ್ನ’ ಚಿತ್ರದ ರಿಲೀಸ್‌ ಡೇಟ್‌ ಅನ್ನು ಅಧಿಕೃತವಾಗಿ ಅನೌನ್ಸ್‌ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next