ಹೈದರಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ ಟ್ವೆಂಟಿ ಪಂದ್ಯವನ್ನು ಭಾರತ ಆರು ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದಿತ್ತು. ವಿರಾಟ್ ಕೊಹ್ಲಿಯ ನಾಯಕನ ಆಟ, ಕನ್ನಡಿಗ ರಾಹುಲ್ ಅರ್ಧಶತಕದ ನೆರವಿನಿಂದ ಭಾರತದ ತಂಡ ಜಯಭೇರಿ ಬಾರಿಸಿತ್ತು.
ಆದರೆ ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಗೆ ಈ ಗೆಲುವು ಸಂತೋಷ ತಂದಿಲ್ಲ. ದಾಖಲೆಯ ಚೇಸಿಂಗ್ ಮಾಡಿ ಗೆದ್ದರೂ ಯುವಿ ಟೀಂ ಇಂಡಿಯಾ ವಿರುದ್ದ ಕಿಡಿಕಾರಿದ್ದಾರೆ.
ಯುವಿ ಟೀಕೆಗೆ ಕಾರಣ ಮೊದಲ ಟಿ ಟ್ವೆಂಟಿಯಲ್ಲಿ ಭಾರತದ ಕಳಪೆ ಫೀಲ್ಡಿಂಗ್. ಹೌದು ಹೈದರಾಬಾದ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 207 ರನ್ ಗಳ ಬೃಹತ್ ಮೊತ್ತ ಪೇರಿಸಲು ಭಾರತದ ಕಳಪೆ ಕ್ಷೇತ್ರ ರಕ್ಷಣೆ ಕೂಡಾ ಕಾರಣವಾಗಿತ್ತು.
ರೋಹಿತ್ ಶರ್ಮಾ ಮತ್ತು ವಾಶಿಂಗ್ಟನ್ ಸುಂದರ್ ತಲಾ ಎರಡು ಕ್ಯಾಚ್ ಗಳನ್ನು ಕೈಚೆಲ್ಲಿದ್ದರು. ನಾಯಕ ವಿರಾಟ್ ಕೊಹ್ಲಿಯ ಕ್ಷೇತ್ರ ರಕ್ಷಣೆ ಕೂಡಾ ಕಳಪೆಯಾಗಿತ್ತು.
Related Articles
ಈ ಬಗ್ಗೆ ಟ್ವಿಟ್ ಮಾಡಿರುವ ಯುವರಾಜ್ ಸಿಂಗ್, ಇದು ಟೀಂ ಇಂಡಿಯಾದ ಕಳಪೆ ಕ್ಷೇತ್ರ ರಕ್ಷಣೆ. ಯುವಕರು ಬಾಲ್ ಗೆ ಸ್ವಲ್ಪ ತಡವಾಗಿ ಪ್ರತಿಕ್ರಯಿಸುತ್ತಿದ್ದಾರೆ. ಕ್ರಿಕೆಟ್ ಪಂದ್ಯಗಳ ಸಂಖ್ಯೆ ಹೆಚ್ಚಾಯಿತೇ? ಎಂದು ಬರೆದುಕೊಂಡಿದ್ದಾರೆ.