ಮುಂಬೈ: ಭಾರತ ಮತ್ತು ಪಾಕಿಸ್ಥಾನಗಳ ನಡುವಿನ ದ್ವಿಪಕ್ಷೀಯ ಸರಣಿಗಳು ಮತ್ತೆ ನಡೆಯಬೇಕು. ಇದು ಕ್ರೀಡೆಗೆ ಉತ್ತಮ ಎಂದು ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಯುವರಾಜ್ ಜೊತೆ ಪಾಕಿಸ್ಥಾನದ ಮಾಜಿ ಆಲ್ ರೌಂಡರ್ ಆಟಗಾರ ಶಾಹೀದ್ ಅಫ್ರಿದಿ ಕೂಡಾ ಭಾರತ- ಪಾಕಿಸ್ಥಾನ ನಡುವಿನ ಸರಣಿ ನಡೆಯಬೇಕೆಂದು ಹೇಳಿದ್ದಾರೆ.
ಸ್ಪೋರ್ಟ್ಸ್ 360 ವೆಬ್ ಸೈಟ್ ಗೆ ಮಾತನಾಡಿದ ಯುವರಾಜ್ ಸಿಂಗ್, ಪಾಕಿಸ್ಥಾನ ವಿರುದ್ಧದ 2004, 2006 ಮತ್ತು 2008ರ ದ್ವಿಪಕ್ಷೀಯ ಸರಣಿಗಳಲ್ಲಿ ನಾನು ಆಡಿರುವುದನ್ನು ನೆನಪಿಸಲು ಖುಷಿಯಾಗುತ್ತಿದೆ. ಮುಂದೆಯೂ ಇದು ಮುಂದುವರಿಯಬೇಕು. ಆದರೆ ಇದೆಲ್ಲಾ ನಮ್ಮ ಕೈಯಲ್ಲಿಲ್ಲ ಎಂದರು.
ನಾವು ಕ್ರೀಡೆಯ ಪ್ರೀತಿಯಿಂದ ಕ್ರಿಕೆಟ್ ಆಡುತ್ತೇವೆ. ಆದರೆ ನಾವು ಯಾರ ವಿರುದ್ದ ಆಡುತ್ತೇವೆ ಎನ್ನುವುದು ನಮ್ಮ ಕೈಯಲ್ಲಿಲ್ಲ. ಆದರೆ ಕ್ರೀಡೆಯ ಬೆಳವಣಿಗೆಯ ಉದ್ದೇಶದಿಂದ ಭಾರತ ಪಾಕಿಸ್ಥಾನ ಕ್ರಿಕೆಟ್ ಆಡಬೇಕು ಎಂದು ಯುವರಾಜ್ ಹೇಳಿದರು.
ಭಾರತ ಪಾಕಿಸ್ಥಾನ ನಡುವೆ 2013ರಿಂದ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ.