ಚಿಕ್ಕಮಗಳೂರು: “ಕಾಂಗ್ರೆಸ್ ಸರ್ಕಾರವಾಗಿದ್ದರೆ ಕಲ್ಲು ಹೊಡೆಯಬಹುದಿತ್ತು. ನಮ್ಮದೇ ಸರ್ಕಾರ ಇದೆ, ಏನು ಮಾಡುವುದು”. ಇದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮಾತುಗಳು. ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜಸ್ವಿ ಸೂರ್ಯ ಅವರದೆನ್ನಲಾದ ಆಡಿಯೋ ಇದೀಗ ವೈರಲ್ ಆಗಿದೆ.
ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಅರವಿನಗಂಡಿ ಜೊತೆ ತೇಜಸ್ವಿ ಸೂರ್ಯ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ದೂರವಾಣಿ ಕರೆಯಲ್ಲಿ ‘ಕಾರ್ಯಕರ್ತರ ಸಾವು ಜಾಸ್ತಿಯಾಗಿದೆ. ಇದರ ಬಗ್ಗೆ ನಾಯಕರು ಯಾರೂ ಗಮನ ಹರಿಸುತ್ತಿಲ್ಲ ಎಂದ ಸಂದೀಪ್ ಗೆ ಉತ್ತರಿಸಿದ ತೇಜಸ್ವಿ ಸೂರ್ಯ ‘ಹೌದು ನಿಮ್ಗೆ ಎಷ್ಟು ಆಕ್ರೋಶವಿದೆಯೋ ನಮಗೂ ಅಷ್ಟೇ ಆಕ್ರೋಶವಿದೆ.ಕಾಂಗ್ರೆಸ್ ಸರ್ಕಾರವಾಗಿದ್ದರೆ ಕಲ್ಲು ಹೊಡೆಯಬಹುದಿತ್ತು, ನಮ್ಮದೇ ಸರ್ಕಾರ ಇದೇ, ಏನು ಮಾಡುವುದು” ಎಂದಿದ್ದಾರೆ.
ಇದನ್ನೂ ಓದಿ:ಬಿಜೆಪಿಗೆ ಬಿಸಿ ತುಪ್ಪವಾದ ಕರಾವಳಿ ಹಿಂದುತ್ವ: ತನ್ನದೇ ಅಸ್ತ್ರ ತಿರುಮಂತ್ರ ಆಗಿದ್ದು ಹೇಗೆ?
ಸಾಮೂಹಿಕ ರಾಜೀನಾಮೆ ನೀಡಿರುವ ಕುರಿತು ಮಾತುಕತೆ ನಡೆಸಿರುವ ತೇಜಸ್ವಿ ಸೂರ್ಯ, ನೀವುಗಳು ರಾಜೀನಾಮೆ ವಾಪಾಸ್ ತೆಗೆದುಕೊಳ್ಳಿ. ಎಲ್ಲಾ ಜಿಲ್ಲಾಧ್ಯಕ್ಷರು ಸೇರಿ ಸಿಎಂ ಭೇಟಿ ಮಾಡೋಣ ಎಂದಿದ್ದಾರೆ.