Advertisement

Yuva Dasara: ಅ.6 -10 ರವರೆಗೆ ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ; ಇಲ್ಲಿದೆ ವಿವರ

05:51 PM Sep 25, 2024 | Team Udayavani |

ಮೈಸೂರು: ನಾಡ ಹಬ್ಬ ಮೈಸೂರು ದಸರಾ (Mysore Dasara) ಸಂಭ್ರಮವನ್ನು ಅದ್ಧೂರಿ ಆಚರಣೆಗೆ ದಿನಗಣನೆ ಬಾಕಿ ಉಳಿದಿದೆ. ರಾಜ್ಯದ ಜನ ಮಾತ್ರವಲ್ಲದೆ ದೇಶದೆಲ್ಲೆಡೆಯಿಂದ ನಮ್ಮ ದಸರಾ ನೋಡಲು ಜನ ಹರಿದು ಬರುತ್ತಾರೆ.

Advertisement

ಪ್ರತಿ ವರ್ಷ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಜನಾಕರ್ಷಣೆಯಾಗಿ ಗಮನ ಸೆಳೆಯುವ ಯುವ ದಸರಾವನ್ನು(Yuva Dasara) ಈ ಬಾರಿ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಬದಲಿಗೆ ನಗರದ ಹೊರವಲಯದಲ್ಲಿ ನಡೆಯಲಿದೆ.

ಉತ್ತನಹಳ್ಳಿ ಬಳಿಯ 100 ಎಕರೆ ಖಾಲಿ ಜಾಗದಲ್ಲಿ ಬೃಹತ್‌ ವೇದಿಕೆ ನಿರ್ಮಿಸಿ ಯುವ ದಸರಾ ನಡೆಸಲು ತೀರ್ಮಾನಿಸಲಾಗಿದೆ. ಈ ನಡುವೆ ಯುವ ದಸರಾದಲ್ಲಿ ನಡೆಯುವ ಕಾರ್ಯಕ್ರಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈ ಪಟ್ಟಿಯನ್ನು ನೋಡಿ ಅನೇಕರು ಆಕ್ರೋಶವನ್ನು ಹೊರಹಾಕಿದ್ದಾರೆ.

ಅಕ್ಟೋಬರ್ 6 ರಿಂದ 10ರವರೆಗೆ ʼಯುವ ದಸರಾʼ ಮಹೋತ್ಸವ ಜರುಗಲಿದೆ. ಈ ಸಂಭ್ರಮದ ಸಂಜೆಯನ್ನು ಸುಮಧುರಗೊಳಿಸಲು ಈ ಬಾರಿ ಬಾಲಿವುಡ್‌ನ ಖ್ಯಾತ ಗಾಯಕರು ಮೈಸೂರಿಗೆ ಬರಲಿದ್ದಾರೆ.

ಯುವ ದಸರಾ ಕಾರ್ಯಕ್ರಮಗಳ ವಿವರ..

Advertisement

ಅಕ್ಟೋಬರ್‌ 6: ಅಕ್ಟೋಬರ್‌ 6 ರಂದು ಯುವ ದಸರಾ ವೇದಿಕೆಯಲ್ಲಿ ಖ್ಯಾತ ಬಾಲಿವುಡ್‌ ಗಾಯಕಿಯಾಗಿರುವ ಶ್ರೇಯಾ ಘೋಷಾಲ್ ಅವರು ತನ್ನ ಮ್ಯೂಸಿಕಲ್‌ ಪರ್ಫಮೆನ್ಸ್​  ನೀಡಲಿದ್ದಾರೆ.

ಅಕ್ಟೋಬರ್‌ 7: ಈ ದಿನ ಖ್ಯಾತ ಸಂಗೀತ ನಿರ್ದೇಶಕ- ಸಂಯೋಜಕ ಕನ್ನಡದ ಅಪ್ಪಟ ಪ್ರತಿಭೆ ರವಿ ಬಸ್ರೂರು ಮತ್ತವರ ತಂಡದಿಂದ ಮ್ಯೂಸಿಕಲ್‌ ನೈಟ್‌ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್‌ 8:  ಈ ಸಂಜೆ ಬಾಲಿವುಡ್‌ನ ಖ್ಯಾತ ಗಾಯಕ ಹಾಗೂ ರ್‍ಯಾಪರ್ ಆಗಿರುವ ಬಾದ್‌ಷಾ ಅವರು ಸಾವಿರಾರು ಮಂದಿ ದಸರಾ ಪ್ರೇಕ್ಷಕರನ್ನು ಬಾಲಿವುಡ್‌ ಹಾಡುಗಳ ಮೂಲಕ ರಂಜಿಸಲಿದ್ದಾರೆ.

ಅಕ್ಟೋಬರ್‌ 9: ಭಾರತದ ಖ್ಯಾತ ಗಾಯಕರು ಹಾಗೂ ಸಂಗೀತ ಸಂಯೋಕರಾಗಿರುವ ಎ.ಆರ್‌.ರೆಹಮಾನ್ ಅವರು ಕರುನಾಡಿನ ದಸರಾ ಹಬ್ಬಕ್ಕೆ ತನ್ನ ಹಾಡುಗಳ ಮೂಲಕ ಮೆರಗನ್ನು ನೀಡಿ ರಂಜಿಸಲಿದ್ದಾರೆ.

ಅಕ್ಟೋಬರ್‌ 10: ಯುವ ದಸರಾದ ಅಂತಿಮ ದಿನದಂದು ದಿಗ್ಗಜ ಮ್ಯೂಸಿಕ್‌ ಡೈರೆಕ್ಟರ್‌ ಇಳಯರಾಜ ಅವರು ಸಂಗೀತ ಕಾರ್ಯಕ್ರಮವನ್ನು ನೀಡಲಿದ್ದಾರೆ.

ಕಾರ್ಯಕ್ರಮ ಪಟ್ಟಿ ರಿಲೀಸ್‌ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಅಸಮಾಧಾನವನ್ನು ಹೊರಹಾಕಿದ್ದಾರೆ. ಕನ್ನಡದ ರವಿ ಬಸ್ರೂರು ಹೊರತುಪಡಿಸಿದರೆ ಬೇರೆ ಎಲ್ಲಾ ಕಾರ್ಯಕ್ರಮವನ್ನು ಬಾಲಿವುಡ್‌ ಹಾಗೂ ತಮಿಳಿನ ಜನರಿಗೆ ನೀಡಿದ್ದೀರಿ ಎಂದು ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಕನ್ನಡ ಪ್ರತಿಭೆಗಳಿಗೆ ಅವಕಾಶ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next