ಮುಂಬಯಿ: ಉದ್ದೀಪನ ಮದ್ದು ಸೇವನೆ ಮಾಡಿರುವ ಕಾರಣಕ್ಕಾಗಿ ಆಲ್‌ರೌಂಡರ್ ಯೂಸುಫ್ ಪಠಾಣ್ ಅವರನ್ನು ಬಿಸಿಸಿಐ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ 5 ತಿಂಗಳ ಕಾಲ ಅಮಾನತು ಮಾಡಿದೆ.
‘ನಿಷೇಧಿತ ಉದ್ದೀಪನ ಮದ್ದನ್ನು ಅಜಾಗರೂಕತೆಯಿಂದ ಸೇವಿಸಿರುವುದು ಧೃಡಪಟ್ಟಿರುವ ಕಾರಣ
ಪಠಾಣ್ ಅವರನ್ನು ತಕ್ಷಣದಿಂದ 5 ತಿಂಗಳ ಕಾಲ ನಿಷೇಧಿಸಲಾಗಿದೆ’ ಎಂದು ಬಿಸಿಸಿಐ ಮಂಗಳವಾರ ತಿಳಿಸಿದೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ದೇಸಿ ಪಂದ್ಯವೊಂದನ್ನು ಆಡುತ್ತಿರುವ ವೇಳೆ ಉದ್ದೀಪನ ಪರೀಕ್ಷೆ ನಡೆಸಲಾಗಿದ್ದು, ಆ ಪರೀಕ್ಷೆಯಲ್ಲಿ ಪಠಾಣ್ ಮದ್ದು ಸೇವಿಸಿರುವು ದು ಧೃಡಪಟ್ಟಿದೆ ಎಂದು ಬಿಸಿಸಿಐ ಹೇಳಿದೆ.
ಕೆಮ್ಮಿನ ಸಿರಪ್‌ಗಳಲ್ಲಿ ಸಾಮಾನ್ಯವಾಗಿ ಕಾಣಬಹುದಾದ ಮದ್ದನ್ನು ಪಠಾಣ್ ಸೇವಿಸಿದ್ದರು ಎನ್ನಲಾಗಿದೆ.
ಸದ್ಯ ಭಾರತ ಕ್ರಿಕೆಟ್ ತಂಡದಿಂದ ದೂರವಿರುವ ಬರೋಡದ ಆಟಗಾರನಿಗೆ ಬಾರಿಯ ಐಪಿಎಲ್‌ನಲ್ಲಿ ಆಡುವ ಕನಸು ಭಗ್ನಗೊಂಡಿದ್ದು, ಭಾರೀ ಮೊತ್ತವು ತಪ್ಪಿ ಹೊದಂತಾಗಿದೆ.