ವಿನ್ ಇ-ಸ್ಕೂಟರ್ ಬಿಡುಗಡೆ: ಒಮ್ಮೆ ಜಾರ್ಜ್ ಮಾಡಿದರೆ 68 ಕಿ.ಮೀ. ಮೈಲೇಜ್
04:05 PM Apr 30, 2023 | Team Udayavani |
ಯುಲು ಕಂಪೆನಿಯು ತನ್ನ ಮೊದಲ ಇ-ಸ್ಕೂಟರ್ “ವಿನ್’ ಬಿಡುಗಡೆಗೊಳಿಸಿದೆ. ಇದರಲ್ಲಿ ಸಣ್ಣ ಪ್ರಮಾಣದ ಲಗೇಜ್ ಕೂಡ ಸಾಗಿಸಬಹುದಾಗಿದೆ. ಇದರ ಪ್ರಾರಂಭಿಕ ಬೆಲೆ 55,555 ರೂ. ಇದೆ.
Advertisement
ಗ್ರಾಹಕರು 999 ರೂ. ನೀಡಿ ಕಂಪೆನಿ ವೆಬ್‌ಸೈಟ್ ಮೂಲಕ ಬುಕ್ಕಿಂಗ್ ಮಾಡಬಹುದು.
ಮೇ ತಿಂಗಳಿಂದಲೇ ಇ-ಸ್ಕೂಟರ್ ಗ್ರಾಹಕರಿಗೆ ಲಭ್ಯವಾಗಲಿದೆ. ಅನಂತರ ಇದರ ಬೆಲೆ 59,999 ರೂ. ಆಗಲಿದೆ. ಇದರ ಗರಿಷ್ಠ ವೇಗ ಗಂಟೆಗೆ 25 ಕಿ.ಮೀ. ಇದೆ.
ಇದು 250 ವ್ಯಾಟ್ ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು, ಒಮ್ಮೆ ಜಾರ್ಜ್ ಮಾಡಿದರೆ 68 ಕಿ.ಮೀ. ಮೈಲೇಜ್ ಬರಲಿದೆ ಎಂದು ಕಂಪೆನಿ ತಿಳಿಸಿದೆ.