ಮೆಲ್ಬರ್ನ್: ಭಾರತದ ಯುವ ಟೆನಿಸ್ ಆಟಗಾರ ಯೂಕಿ ಭಾಂಬ್ರಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಮುಖ್ಯ ಸುತ್ತು ಪ್ರವೇಶಿಸು ವಲ್ಲಿ ಯಶಸ್ವಿ ಯಾಗಿ ದ್ದಾರೆ. ಆದರೆ ಭಾರತದ ಮತ್ತೂಬ್ಬ ಆಟಗಾರ ರಾಮ್ ಕುಮಾರ್ ರಾಮನಾಥನ್ ಸೋತು ಮುಖ್ಯ ಸುತ್ತು ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.
ಆಸ್ಟ್ರೇಲಿಯನ್ ಓಪನ್‌ನಲ್ಲಿ 3ನೇ ಬಾರಿ ಸ್ಪರ್ಧಿಸುತ್ತಿರುವ ಯೂಕಿ, ರವಿವಾರದ ಅರ್ಹತಾ ಸುತ್ತಿನ 3ನೇ ಪಂದ್ಯದಲ್ಲಿ 1-6, 6-3, 6-3ರಿಂದ ಕೆನಡಾದ ಪೀಟರ್ ಪೋಲನ್‌ಸ್ಕಿ ವಿರುದ್ಧ ಗೆಲುವು ಸಾಧಿಸಿದರು.
ಈ ಹಿಂದೆ 2015 ಮತ್ತು 2016ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸ್ಪರ್ಧಿಸಿದ್ದ ಭಾಂಬ್ರಿ, ಮೊದಲ ಸುತ್ತಿನಲ್ಲೇ ಕ್ರಮವಾಗಿ ಆ್ಯಂಡಿ ಮರ್ರೆ ಮತ್ತು ಥಾಮಸ್ ಬೆರ್ಡಿಶ್ ವಿರುದ್ಧ ಸೋತಿದ್ದರು. ಈ ಬಾರಿ ಅವರ ಮೊದಲ ಸುತ್ತಿನ ಎದುರಾಳಿ ಮಾರ್ಕೋಸ್ ಬಗ್ಧಾಟಿಸ್.
ಭಾರತದ ಮತ್ತೋರ್ವ ಭರವಸೆಯಾಗಿದ್ದ ರಾಮ್‌ಕುಮಾರ್ ರಾಮನಾಥನ್ 4-6, 6-4, 4-6ರಿಂದ ಕೆನಡಾದ ವಾಸೆಕ್ ಪೊಸ್ಪಿಸಿಲ್ ವಿರುದ್ಧ ಸೋಲುಂಡರು.