Advertisement

ಶಾಖೋತ್ಪನ್ನಕ್ಕೆ ವೈಟಿಪಿಎಸ್‌ ಕೊನೆಗೂ ಅಣಿ

11:26 PM Feb 14, 2020 | Lakshmi GovindaRaj |

ರಾಯಚೂರು: ವಾಣಿಜ್ಯ ಉತ್ಪಾದನೆಗೆ ಮುಕ್ತಗೊಂಡು ಎರಡು ವರ್ಷವಾದರೂ ವಿದ್ಯುತ್‌ ಉತ್ಪಾದಿಸದೆ ಸ್ತಬ್ಧಗೊಂಡಿದ್ದ ಯರಮರಸ್‌ ಸೂಪರ್‌ ಕ್ರಿಟಿಕಲ್‌ ಪವರ್‌ ಸ್ಟೇಶನ್‌ (ವೈಟಿಪಿಎಸ್‌) ಕೊನೆಗೂ ಕಾರ್ಯಾರಂಭಗೊಳ್ಳುವ ಮುನ್ಸೂಚನೆ ನೀಡಿದೆ. ಗುರುವಾರದಿಂದ ಮೊದಲನೇ ಘಟಕ ಆರಂಭಿಸಿದ್ದು, ಕೆಲವೊಂದು ತಾಂತ್ರಿಕ ಸಮಸ್ಯೆ ನಿವಾರಿಸುವಲ್ಲಿ ತಜ್ಞರ ತಂಡ ಶ್ರಮಿಸುತ್ತಿದೆ.

Advertisement

ಅತ್ಯಾಧುನಿಕ ತಂತ್ರಜ್ಞಾನವುಳ್ಳ ವೈಟಿಪಿಎಸ್‌ 1600 ಮೆಗಾ ವ್ಯಾಟ್‌ ವಿದ್ಯುತ್‌ ಸಾಮರ್ಥ್ಯ ಹೊಂದಿದೆ. ಕಡಿಮೆ ಕಲ್ಲಿದ್ದಲು ಬಳಸಿ ಅಧಿಕ ವಿದ್ಯುತ್‌ ಉತ್ಪಾದಿಸುವ ತಂತ್ರಜ್ಞಾನ ಇದಾ ಗಿದ್ದು, 800 ಮೆಗಾವ್ಯಾಟ್‌ ಸಾಮರ್ಥ್ಯದ ಎರಡು ಘಟಕ ಹೊಂದಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಎರಡನೇ ಘಟಕವನ್ನು ಆರಂಭಿಸಲಾಗಿತ್ತು. ಆದರೆ, ಎರಡು ವರ್ಷವಾ ದರೂ ವಿದ್ಯುತ್‌ ಉತ್ಪಾದನೆ ಕೆಲಸ ಮಾತ್ರ ಆರಂಭವಾಗಿರಲಿಲ್ಲ.

ಕಲ್ಲಿದ್ದಲು ಸಾಗಿಸಲು ರೈಲು ಮಾರ್ಗ ಸೇರಿ ದಂತೆ ಸಾಕಷ್ಟು ಸಿವಿಲ್‌ ಕೆಲಸಗಳು ಬಾಕಿ ಉಳಿದಿದ್ದವು. ಅಲ್ಲದೇ, ಪದೇಪದೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿ ದ್ದವು. ಕೊನೆಗೂ ಅದು ಮುಗಿಯುವ ಹಂತಕ್ಕೆ ಬಂದಿದ್ದು, ಮೊದಲ ಘಟಕವನ್ನು ಗುರುವಾರದಿಂದ ಆರಂಭಿಸಲಾಗಿದೆ. ಟರ್ಬನ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬರುತ್ತಿದೆ. ತಜ್ಞರ ತಂಡ ಪರಿ ಶೀಲನೆ ನಡೆಸಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ.

ಬೀಡು ಬಿಟ್ಟ ತಜ್ಞರ ತಂಡ: ಎರಡು ವರ್ಷದಿಂದ ವಿದ್ಯುತ್‌ ಉತ್ಪಾದನೆ ಮಾಡದ ಕಾರಣ ಸಿಸ್ಟಮ್‌ ಸೆಟಿಂಗ್‌ಗಳಲ್ಲಿ ಏರುಪೇರಾಗಿದೆ. ಇದರಿಂದ ಪದೇಪದೆ ಸಮಸ್ಯೆ ಕಂಡು ಬರುತ್ತಿದೆ. ಹೀಗಾಗಿ ಘಟಕ ಅನುಷ್ಠಾನ ಮಾಡಿದ ಬಿಎಚ್‌ಇಎಲ್‌ ಸಂಸ್ಥೆ ತಜ್ಞರ ತಂಡ ವೈಟಿಪಿಎಸ್‌ನಲ್ಲಿ ಬೀಡು ಬಿಟ್ಟಿದೆ. ಎಲ್ಲಿ ಸಮಸ್ಯೆಯಾಗುತ್ತಿದೆ ಎಂದು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಕೆಲವೊಂದು ಸಾಫ್ಟ್ವೇರ್‌ ಹೊಂದಾಣಿಕೆಗಳು ತಪ್ಪಿದ್ದು, ದುರಸ್ತಿ ಮಾಡಲಾಗುತ್ತಿದೆ. 800 ಮೆಗಾವ್ಯಾಟ್‌ ಸಾಮರ್ಥ್ಯ ಘಟಕವಾದ್ದರಿಂದ ಸಾಕಷ್ಟು ಸವಾಲುಗಳು ಎದುರಾಗು ತ್ತಿವೆ ಎಂದು ಮೂಲಗಳು ತಿಳಿಸಿವೆ.

ಕಲ್ಲಿದ್ದಲು ಸಂಗ್ರಹ: ವೈಟಿಪಿಎಸ್‌ಗೆ ಕಲ್ಲಿದ್ದಲು ಪೂರೈಸಲು ಪ್ರತ್ಯೇಕ ರೈಲು ನಿರ್ಮಾಣ ಕಾಮಗಾರಿ ಮುಗಿದಿದೆ. ಸುಮಾರು 70ಕ್ಕೂ ಅಧಿಕ ರ್ಯಾಕ್‌ಗಳ ಮೂಲಕ ವೈಟಿಪಿ ಎಸ್‌ ಆವರಣದಲ್ಲೇ ಕಲ್ಲಿದ್ದಲು ಸಂಗ್ರಹಿಸಲಾಗಿದೆ. ಈಗ ವೈಟಿಪಿಎಸ್‌ನಲ್ಲಿ 3.22 ಲಕ್ಷ ಟನ್‌ ಕಲ್ಲಿದ್ದಲು ಸಂಗ್ರಹವಿದೆ. ಇನ್ನು ಮುಂದೆ ನಿರಂತರವಾಗಿ ವಿದ್ಯುತ್‌ ಉತ್ಪಾದನೆ ಆರಂಭಿಸಿದಲ್ಲಿ ಕಲ್ಲಿದ್ದಲು ಆಮದು ಪ್ರಮಾಣ ಹೆಚ್ಚಲಿದೆ. ಆದರೆ, ಸದ್ಯಕ್ಕೆ ಇನ್ನು ಪೂರ್ಣ ಪ್ರಮಾಣದಲ್ಲಿ ಕೆಲಸ ಶುರುವಾಗದ ಕಾರಣ ಯಾವುದೇ ಕೊರತೆ ಕಂಡು ಬಂದಿಲ್ಲ ಎಂದು ವಿವರಿಸುತ್ತಾರೆ ಅಧಿಕಾರಿಗಳು.

Advertisement

ಬೇಡಿಕೆ ಪ್ರಸ್ತಾವನೆ ಇಲ್ಲ: ಬೇಸಿಗೆ ಶುರುವಾಗುತ್ತಿದ್ದು, ಆರ್‌ಟಿಪಿಎಸ್‌ಗೆ ವಿದ್ಯುತ್‌ ಬೇಡಿಕೆ ಹೆಚ್ಚಾಗಿದೆ. ಎಂಟು ಘಟಕಗಳಲ್ಲಿ ಮೊದಲನೇ ಘಟಕವನ್ನು ವಾರ್ಷಿಕ ದುರಸ್ತಿ ಕಾರ್ಯಕ್ಕೆ ಕೈಗೊಂಡಿದ್ದು, ಉಳಿದ 7 ಘಟಕಗಳು ಉತ್ಪಾದನೆಯಲ್ಲಿ ತೊಡಗಿವೆ. 1,720 ಮೆಗಾವ್ಯಾಟ್‌ ಉತ್ಪಾದನಾ ಸಾಮರ್ಥ್ಯದ ಈ ಕೇಂದ್ರದಿಂದ ಈಗ ಸರಾಸರಿ 1200-1300 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಮಧ್ಯಾಹ್ನ ಮಾತ್ರ ಬೇಡಿಕೆ ಹೆಚ್ಚಾಗುತ್ತಿದ್ದು, ರಾತ್ರಿ ಕಡಿಮೆ ಇದೆ. ಆದರೆ, ವೈಟಿಪಿಎಸ್‌ಗೆ ಮಾತ್ರ ಇನ್ನೂ ವಿದ್ಯುತ್‌ ಬೇಡಿಕೆ ಬಂದಿಲ್ಲ. ಇದು ಪೂರ್ಣ ಪ್ರಮಾಣದಲ್ಲಿ ಆರಂಭವಾಗುವವರೆಗೂ ಈ ಕೇಂದ್ರದ ಮೇಲೆ ಅವಲಂಬನೆ ಆಗುವುದು ಕಷ್ಟ ಎನ್ನಲಾಗುತ್ತಿದೆ.

ವೈಟಿಪಿಎಸ್‌ ಮೊದಲನೇ ಘಟ ಕಕ್ಕೆ ಚಾಲನೆ ನೀಡಿದ್ದೇವೆ. ಆದರೆ, ಕೆಲವೊಂದು ತಾಂತ್ರಿಕ ಅಡಚಣೆಗಳು ಕಂಡು ಬರುತ್ತಿದ್ದು, ಬಿಎಚ್‌ಇಎಲ್‌ ತಜ್ಞರು ಪರಿಶೀಲನೆ ಮಾಡು ತ್ತಿ ದ್ದಾರೆ. ನಿರಂತರ ವಿದ್ಯುತ್‌ ಉತ್ಪಾದನೆ ಬಗ್ಗೆ ಈಗಲೇ ಹೇಳಲಾಗದುಸಂಪೂರ್ಣ ಹೊಂದಾಣಿಕೆ ಬಳಿಕ, ಕೇಂದ್ರ ಸಕ್ರಿಯವಾಗಿ ಕಾರ್ಯಾರಂಭಿಸಲಿದೆ.
-ಲಕ್ಷ್ಮಣ ಕಬಾಡೆ, ವೈಟಿಪಿಎಸ್‌ ಯೋಜನಾ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next