Advertisement

ವಿದೇಶಿಗರು ಟೀಕಿಸಿದ್ದು ಸರಕಾರವನ್ನೇ ಹೊರತು ದೇಶವನ್ನಲ್ಲ: ವೈ.ಎಸ್‌.ವಿ. ದತ್ತ

11:28 PM Feb 06, 2021 | Team Udayavani |

ಬೆಂಗಳೂರು: ಸರಕಾರ ಮತ್ತು ದೇಶ ಬೇರೆ ಬೇರೆಯಾಗಿದೆ. ವಿದೇಶಿ ಸೆಲೆಬ್ರಿಟಿಗಳು ಟ್ವೀಟ್‌ ಮೂಲಕ ಕೇಂದ್ರ ಸರಕಾರದ ನೀತಿಯನ್ನು ವಿರೋಧಿಸುತ್ತಿದ್ದಾರೆಯೇ ಹೊರತು ನಮ್ಮ ದೇಶವನ್ನಲ್ಲ. ಸರಕಾರವನ್ನು ವಿರೋಧಿಸುವುದು ರಾಷ್ಟ್ರದ್ರೋಹ ಎನ್ನುವುದಾದರೆ ಸಾವಿರಾರು ಬಾರಿ ರಾಷ್ಟ್ರದೋಹ ಪಟ್ಟ ಕಟ್ಟಿಕೊಳ್ಳಲು ಸಿದ್ಧ ಎಂದು ಜೆಡಿಎಸ್‌ನ ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಹೇಳಿದರು.

Advertisement

ಜೆಡಿಎಸ್‌ ಕಚೇರಿ “ಜೆ.ಪಿ. ಭವನ’ದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಕೇಂದ್ರ ಸರಕಾರ ಎಷ್ಟೇ ಸ್ಪಷ್ಟೀಕರಣ ನೀಡಿದರೂ ರೈತರಿಗೆ ವಿಶ್ವಾಸ ಮೂಡುತ್ತಿಲ್ಲ. ಹಾಗೆಂದು ಕೇಂದ್ರ ಸರಕಾರ ರೈತರಿಗೆ ಅಪರಾಧಿ ಪಟ್ಟ ಕಟ್ಟಿ ದುರ್ಬಲಗೊಳಿಸುವುದು ಸರಿಯಲ್ಲ ಎಂದದರು.

ಕೇಂದ್ರ ಸರಕಾರದ ವಿರುದ್ಧ ವಿದೇಶಿ ಸೆಲೆಬ್ರಿಟಿಗಳು ಟ್ವೀಟ್‌ ಮಾಡಿದ್ದು ತಪ್ಪು ಎನ್ನಲಾಗುತ್ತಿದೆ. ಹಿಂದೆ ಇಂದಿರಾಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಜಗತ್ತಿನ ಜನತಾಂತ್ರಿಕ ದೇಶಗಳು ವಿರೋಧಿಸಿದ್ದವು. ಆಗ ಜನಸಂಘವೂ ಅದನ್ನು ಒಪ್ಪಿಕೊಂಡಿತ್ತು. ಈಗ ಹಾಲಿವುಡ್‌ ಸೆಲೆಬ್ರಿಟಿಗಳು ಟ್ವೀಟ್‌ ಮಾಡಿದ್ದು ತಪ್ಪು ಎನ್ನುವುದು ಹೇಗೆ ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ:ಮಾತುಕತೆಯಿಂದಷ್ಟೇ ಲಡಾಖ್‌ಗೆ ಪರಿಹಾರ: ವಿದೇಶಾಂಗ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next