ವಾಷಿಂಗ್ಟನ್: ಯೂಟ್ಯೂಬ್ ನಲ್ಲಿ ಲೈಕ್ಸ್, ವೀವ್ಸ್ ಗಾಗಿ ವ್ಯಕ್ತಿಯೊಬ್ಬ ಮಾಡಿದ ಸಾಹಸದಿಂದ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಯೂಟ್ಯೂಬ್ ನಲ್ಲಿ ಒಂದಷ್ಟು ಸಬ್ ಸ್ಕೈಬರ್ಸ್ ನ್ನು ಹೊಂದಿರುವ ಕ್ಯಾಲಿಫೋರ್ನಿಯಾದ ಲೊಂಪೊಕ್‌ನ ಟ್ರೆವರ್ ಡೇನಿಯಲ್ ಜಾಕೋಬ್ (29) ಎಂಬಾತ ಹೆಚ್ಚು ಲೈಕ್ಸ್ ಹಾಗೂ ವೀವ್ಸ್ ತನ್ನ ವಿಮಾನವನ್ನು ಉದ್ದೇಶಪೂರ್ವಕವಾಗಿ ಪತನ ಮಾಡಲು ಹೊರಟಿದ್ದಾರೆ. ನವೆಂಬರ್ 24, 2021 ರಂದು ತನ್ನ ವಿಮಾನವನ್ನು ಪತನ ಮಾಡಿದ್ದು, ಪ್ಯಾರಾಚೂಟ್ ನಲ್ಲಿ ಕೆಮರಾಗಳನ್ನು ಹಿಡಿದುಕೊಂಡು ಗಾಳಿಯಲ್ಲಿ ಜಾಕೋಬ್ ಹಾರಿದ್ದಾನೆ. ವಿಮಾನ ಒಣ ಪ್ರದೇಶದಲ್ಲಿ ಬಿದ್ದು ಪತನಗೊಂಡಿದೆ.
“ಐ ಕ್ರ್ಯಾಶ್ಡ್ ಮೈ ಏರ್‌ಪ್ಲೇನ್” ಎಂಬ ಶೀರ್ಷಿಕೆಯಡಿಯಲ್ಲಿ ಅಪಘಾತದ ವೀಡಿಯೊವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ವೈರಲ್ ವಿಡಿಯೋದಿಂದ ಆತ ಹಣವನ್ನು ಪಡೆದುಕೊಂಡಿದ್ದಾನೆ.
ಈ ವಿಮಾನ ಪತನದ ಬಗ್ಗೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ತನಿಖೆಯನ್ನು ಕೈಗೊಂಡಿದೆ. ತನಿಖೆಯ ವೇಳೆ ತಾನು ವಿಮಾನವನ್ನು ಉದ್ದೇಶಪೂರ್ವಕವಾಗಿಯೇ ಪತನ ಮಾಡಿದ್ದೇನೆ. ಆ ಬಳಿಕ ಅವಶೇಷಗಳನ್ನು ನಾಶ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.
ತನಿಖೆಯ ಬಳಿಕ ಅಪಾಯವನ್ನುಂಟು ಮಾಡುವ ಕೃತ್ಯವೆಸದ ಟ್ರೆವರ್ ಡೇನಿಯಲ್ ಜಾಕೋಬ್ ಅವರಿಗೆ 20 ವರ್ಷ ಜೈಲು ಶಿಕ್ಷೆಯ ತೀರ್ಪನ್ನು ಅಲ್ಲಿನ ನ್ಯಾಯಾಲಯ ನೀಡಿದೆ ಎಂದು ವರದಿ ತಿಳಿಸಿದೆ.