Advertisement

ಖ್ಯಾತ ಯೂಟ್ಯೂಬರ್‌ ನಾಪತ್ತೆ; ಮಗಳಿಗಾಗಿ ಲೈವ್‌ ಸ್ಟ್ರೀಮ್‌ ಮಾಡಿ ದುಃಖ ತೋಡಿಕೊಂಡ ಹೆತ್ತವರು!

08:03 PM Sep 11, 2022 | Team Udayavani |

ಮಧ್ಯಪ್ರದೇಶ:ಖ್ಯಾತ ಯೂಟ್ಯೂಬರ್‌ ಹುಡುಗಿಯೊಬ್ಬಳು ಅಪ್ಪನ ಮಾತಿನಿಂದ ನೊಂದು ಮನೆ ಬಿಟ್ಟು ಹೋಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಮಹಾರಾಷ್ಟ್ರದ ಔರಂಗಾಬಾದ್ ನ 16 ವರ್ಷದ ಬಾಲಕಿ ಕಾವ್ಯ ʼಬಿಂದಾಸ್‌ ಕಾವ್ಯʼ ಎಂಬ ಯೂಟ್ಯೂಬ್‌ ಚಾನೆಲ್‌ ನ್ನು ಹೊಂದಿದ್ದಾರೆ. ಸುಮಾರು 4 ಮಿಲಿಯನ್‌ ಗೂ ಅಧಿಕ ಸಬ್ ಸ್ಕ್ರೈಬರ್ಸ್‌ ಹೊಂದಿರುವ ಚಾನೆಲ್‌  ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಾವ್ಯ ಅವರ ಅಮ್ಮ ಈ ಚಾನೆಲ್‌ ನ್ನು ನೋಡಿಕೊಳ್ಳುತ್ತಾರೆ. ಕಾವ್ಯಾ ಚಾನೆಲ್‌ ನ ಮುಖ್ಯ ಮುಖ. ಪ್ರತಿ ವಿಡಿಯೋದಲ್ಲಿ ಕಾವ್ಯ ಆಡುವ ಮಾತು – ಹಂಚಿಕೊಳ್ಳುವ ವಿಷಯ, ವಿಶೇಷಗಳಿಂದ ʼಬಿಂದಾಸ್‌ ಕಾವ್ಯʼ ಯೂಟ್ಯೂಬ್‌ ಚಾನೆಲ್‌ ಖ್ಯಾತಿಯನ್ನು ಪಡೆದುಕೊಂಡಿದೆ.

ಸೆ.9 ರಂದು ಕಾವ್ಯಳ ಮನೆಯಲ್ಲಿ ಸಣ್ಣ ಗಲಾಟೆಯಾಗಿದೆ. ಕಾವ್ಯಳಿಗೆ ಅಪ್ಪ ಸಿಟ್ಟಾಗಿ ಎರಡು ಮಾತು ಹೇಳಿ ಜೋರು ಮಾಡಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಕಾವ್ಯ ಯಾರಿಗೂ ಹೇಳದೇ ಮನೆ ಬಿಟ್ಟು ಹೋಗಿದ್ದಾಳೆ.

ಮಧ್ಯಾಹ್ನ 2 ಗಂಟೆಗೆ ಮನೆಯಿಂದ ಹೊರ ಹೋದ ಕಾವ್ಯ ರಾತ್ರಿಯಾದರೂ ಮನೆಗೆ ಮರಳಿ ಬರದಿದ್ದಕ್ಕೆ ಆತಂಕಗೊಂಡ ತಂದೆ – ತಾಯಿ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ.

ಮಗಳು ಕಾಣದಿದ್ದಕ್ಕೆ ಕಾವ್ಯಳ ತಂದೆ – ತಾಯಿ ʼಬಿಂದಾಸ್‌ ಕಾವ್ಯʼ ಚಾನೆಲ್‌ ಮೂಲಕ ಲೈವ್‌ ಸ್ಟ್ರೀಮ್‌ ಮಾಡಿ ಆಳುತ್ತಾ, ಕಾವ್ಯಳನ್ನು ಹುಡುಕಲು ನಮಗೆ ಸಹಾಯ ಮಾಡಿ, ನಾವು ಎಫ್‌ ಐ ಆರ್‌ ದಾಖಲಿಸಿದ್ದೇವೆ, ಯಾರಿಗಾದರೂ ಅವಳು ಕಂಡರೆ ದಯವಿಟ್ಟು ನಮಗೆ ಹೇಳಿ. ಅವಳ ಮೊಬೈಲ್‌ ನನ್ನ ಬಳಿ ಇದೆ. ಅವಳು ನಮ್ಮನ್ನು ಬಿಟ್ಟು ಎಂದೂ ಇದ್ದವಳಲ್ಲ ಎಂದು ಕಾರಿನಲ್ಲಿ ಹೋಗುವ ವೇಳೆ ಆಳಲು ತೋಡಿಕೊಂಡು ವಿಡಿಯೋವನ್ನು ಮಾಡಿದ್ದಾರೆ. ಈ ವಿಡಿಯೋ ಯೂಟ್ಯೂಬ್‌ ನಲ್ಲಿ 4 ಮಿಲಿಯನ್‌ ಗೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ.

Advertisement

ಔರಂಗಾಬಾದ್‌ ಪೊಲೀಸರು, ಕಾವ್ಯಳ ಫೋಟೋವನ್ನು ರೈಲ್ವೆ ಪೊಲೀಸರಿಗೆ ರವಾನಿಸಿದ್ದಾರೆ. ಕೂಡಲೇ ಪೊಲೀಸರು ಮಹಾರಾಷ್ಟ್ರದಿಂದ 500 ಕಿ.ಮಿ ದೂರದಲ್ಲಿರುವ   ಇಟ್ರಾರ್ಸಿ ರೈಲ್ವೆ ನಿಲ್ದಾಣದ ರೈಲುಗಳಲ್ಲಿ ಹುಡುಕಾಡಿದ್ದಾರೆ. ಭುಸಾವಲ್‌ ನಿಂದ ಬರುವ ಖುಷಿ ನಗರ್‌ ಎಕ್ಸ್‌ ಪ್ರೆಸ್‌ ರೈಲಿನ ಸ್ಲೀಪರ್‌ ಕೋಚ್‌ ನಲ್ಲಿ ಕಾವ್ಯ ಪತ್ತೆ ಆಗಿದ್ದು, ಪೊಲೀಸರು ಔರಂಗಾಬಾದ್‌ ಪೊಲೀಸರಿಗೆ ಹಾಗೂ ಪೋಷಕರಿಗೆ ಮಾಹಿತಿ ಕೊಟ್ಟಿದ್ದಾರೆ.

ಕಾವ್ಯ ಸಿಕ್ಕಿದ್ದಾಳೆ ಎನ್ನುವ ವಿಷಯ ತಿಳಿದ ಪೋಷಕರು ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ ಹೋಗುವ ದಾರಿಯಲ್ಲಿ ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಮಾಡಿ, ಕಾವ್ಯ ಪತ್ತೆಯಾಗಿದ್ದಾಳೆ. ಲಕ್ನೋನ ನಮ್ಮ ಹಳ್ಳಿಗೆ ಹೋಗುತ್ತಿದ್ದಳು. ಪೊಲೀಸರಿಗೆ ಹಾಗೂ ಮಾನಸಿಕವಾಗಿ ಧೈರ್ಯ ತುಂಬಿದ ಯೂಟ್ಯೂಬರ್‌ ವೀಕ್ಷಕರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಈ ವಿಡಿಯೋ ಕೂಡ ʼಬಿಂದಾಸ್‌ ಕಾವ್ಯʼ ಚಾನೆಲ್‌ ನಲ್ಲಿ 4 ಮಿಲಿಯನ್‌ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

ಪೊಲೀಸರು ಕಾವ್ಯಳನ್ನು  ತಂದೆ – ತಾಯಿಗೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next