Advertisement

22ನೇ ಹರೆಯದಲ್ಲಿ ಇಹಲೋಕ ತ್ಯಜಿಸಿದ ರಾಪರ್-ಯೂಟ್ಯೂಬರ್ ಲಿಲ್ ಬೋ ವೀಪ್

03:05 PM Mar 08, 2022 | Team Udayavani |

ವಾಷಿಂಗ್ಟನ್: ಆಸ್ಟ್ರೇಲಿಯನ್ ರಾಪರ್- ಯೂಟ್ಯೂಬ್ ಸ್ಟಾರ್ ಲಿಲ್ ಬೋ ವೀಪ್ ಅವರು ತನ್ನ 22ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. ಮಾರ್ಚ್ 3ರಂದು ಲಿಲ್ ಬೋ ವೀಪ್ ನಿಧನರಾಗಿದ್ದಾರೆ ಎಂದು ಆಕೆಯ ತಂದೆ ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.

Advertisement

“ಈ ವಾರಾಂತ್ಯದಲ್ಲಿ ಖಿನ್ನತೆ, ಆಘಾತ ಮತ್ತು ಮಾದಕ ವ್ಯಸನದ ವಿರುದ್ಧ ನನ್ನ ಮಗಳ ಜೀವನದ ಹೋರಾಟವನ್ನು ನಾವು ಕಳೆದುಕೊಂಡಿದ್ದೇವೆ. ನಾವು ಅವಳನ್ನು ಅಮೆರಿಕದಿಂದ ತುರ್ತು ವಾಪಸಾತಿ ಮೂಲಕ ಕರೆದುಕೊಂಡು ಬಂದಾಗಿನಿಂದ ನಾವು ಹೋರಾಡುತ್ತಿದ್ದೇವೆ. ಆದರೆ ಅದರಲ್ಲಿ ಸೋಲನುಭವಿಸಿದ್ದೇವೆ” ಎಂದು ಆಕೆಯ ತಂದೆ ಮ್ಯಾಥ್ಯೂ ಸ್ಕೋಫೀಲ್ಡ್ ಹೇಳಿದ್ದಾರೆ. ಯೂಟ್ಯೂಬರ್ ಲಿಲ್ ಬೋ ವೀಪ್ ಸಾವಿಗೆ ಕಾರಣ ಇನ್ನೂ ಬಹಿರಂಗಗೊಂಡಿಲ್ಲ.

ಇದನ್ನೂ ಓದಿ:ಇವಿಎಂ ಸ್ಟ್ರಾಂಗ್ ರೂಮ್ ಕಾಯಲು ಎಸ್ ಪಿ ಕಾರ್ಯಕರ್ತರ ಮೂರು ಪಾಳಿಗಳ ಕೆಲಸ !

ಲಿಲ್ ಬೋ ವೀಪ್ ಅವರ ಅಸಲಿ ಹೆಸರು ವಿನೋನಾ ಬ್ರೂಕ್ಸ್. 2015ರಲ್ಲಿ ಆಕೆ ಸೌಂಡ್ ಕ್ಲೌಡ್ ಮೂಲಕ ತನ್ನ ಮ್ಯೂಸಿಕ್ ಗಳನ್ನು ಹಂಚಿಕೊಳ್ಳುತ್ತಿದ್ದಳು. ಯೂಟ್ಯೂಬ್ ನಲ್ಲಿ ಲಕ್ಷಾಂತರ ಚಂದಾದಾರರನ್ನು ಹೊಂದಿದ್ದ  ಲಿಲ್ ಬೋ ವೀಪ್ ನಿಧನಕ್ಕೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next