Advertisement

ಮೆಟ್ರೋ ನಿಲ್ದಾಣದಲ್ಲಿ ಬರ್ತ್‌ಡೇ: ಯೂಟ್ಯೂಬರ್‌ ಬಂಧನ, ಜಾಮೀನು

08:28 PM Jul 10, 2022 | Team Udayavani |

ಲಕ್ನೋ: ಮೆಟ್ರೋ ನಿಲ್ದಾಣದಲ್ಲಿಯೇ ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳುವುದಾಗಿ ಹೇಳಿ, ಅಭಿಮಾನಿಗಳನ್ನು ಆಹ್ವಾನಿಸಿ, ಪೊಲೀಸರ ಬಂಧನಕ್ಕೊಳಗಾಗಿದ್ದ ಪ್ರಸಿದ್ಧ ಯೂಟ್ಯೂಬರ್‌ ಗೌರವ್‌ ತನೇಜಾಗೆ ಜಾಮೀನು ಸಿಕ್ಕಿದೆ.

Advertisement

ಯೂಟ್ಯೂಬ್‌ನಲ್ಲಿ “ಫ್ಲೈಯಿಂಗ್‌ ಬೀಸ್ಟ್‌’, “ಫಿಟ್‌ ಮಸಲ್ಸ್‌ ಟಿವಿ’ ಮತ್ತು “ರಶºರಿ ಕೇ ಪಾಪ’ ಹೆಸರಿನ ಮೂರು ಚಾನೆಲ್‌ಗ‌ಳ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಗೌರವ್‌ ಶನಿವಾರ ತಾವು ನೋಯ್ಡಾದ ಸೆಕ್ಟರ್‌ 51 ಮೆಟ್ರೋ ನಿಲ್ದಾಣದಲ್ಲಿ ಹುಟ್ಟಿದ ಹಬ್ಬ ಆಚರಿಸಿಕೊಳ್ಳುವುದಾಗಿ ಹೇಳಿದ್ದರು.

ಅದಕ್ಕೆಂದು ಮೆಟ್ರೋ ರೈಲಿನ ಕೋಚ್‌ ಒಂದನ್ನೂ ಬುಕ್‌ ಮಾಡಿದ್ದರು. ಈ ವಿಚಾರವಾಗಿ ಅವರ ಪತ್ನಿ ರಿತು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಾಕಿ, ಪಾರ್ಟಿಗೆ ಬರಬೇಕೆಂದು ಅಭಿಮಾನಿಗಳನ್ನು ಆಹ್ವಾನಿಸಿದ್ದರು. ಇದರಿಂದಾಗಿ ಸಾವಿರಾರು ಜನರು ಶನಿವಾರ ಸೆಕ್ಟರ್‌ 51 ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ್ದಾರೆ.

ಕೊನೆಯ ಕ್ಷಣದಲ್ಲಿ ಹುಟ್ಟು ಹಬ್ಬದ ಆಚರಣೆ ಕೈಬಿಡಲಾಗಿದೆಯಾದರೂ, ಮೆಟ್ರೋ ನಿಲ್ದಾಣದಲ್ಲಿ ಗಲಭೆ ಉಂಟಾಗಿದ್ದರಿಂದಾಗಿ ಪೊಲೀಸರು ಗೌರವ್‌ರನ್ನು ಬಂಧಿಸಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಅವರಿಗೆ ಜಾಮೀನು ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next