Advertisement

ಆಕಸ್ಮಿಕವಾಗಿ ನಾಲೆಗೆ ಬಿದ್ದ ಜಿಂಕೆಯನ್ನು ರಕ್ಷಿಸಿದ ಯುವಕರು

09:37 AM Mar 27, 2021 | Team Udayavani |

ಹುಣಸೂರು: ಆಕಸ್ಮಿಕವಾಗಿ ನಾಲೆಗೆ ಬಿದ್ದ ಜಿಂಕೆಯನ್ನು ಯುವಕರು ರಕ್ಷಿಸಿರುವ ಘಟನೆ ಕಳಲೆ ಗ್ರಾಮದಲ್ಲಿ ನಡೆದಿದೆ.

Advertisement

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಳಲೆ-ಏಚಗುಂಡ್ಲ ಗ್ರಾಮಗಳ ರಸ್ತೆಯ ಬೀಚನಹಳ್ಳಿ ಕಬಿನಿ ನಾಲೆಯಲ್ಲಿ ಜಿಂಕೆಯೊಂದು ಆಕಸ್ಮಿಕವಾಗಿ ನಾಲೆ ಬಿದ್ದ ಪರಿಣಾಮ ಜಿಂಕೆಯ ಕಾಲುಗಳು ಮತ್ತು ಮುಖದ ಭಾಗದಲ್ಲಿ ಗಾಯಗಳಾಗಿವೆ

ಜಮೀನಿಗೆ ತೆರಳಿದ್ದ ಅದೇ ಗ್ರಾಮದ ಯುವಕರಾದ ರವಿಚಂದ್ರ, ವಿನೋದ್, ರಾಜೇಶ್ ಜಿಂಕೆ ನಾಲೆಗೆ ಬಿದ್ದಿರುವುದನ್ನು ಕಂಡು ನಾಲೆಗೆ ಇಳಿದು ಮೇಲೆತ್ತಿ ಜಿಂಕೆಯನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ:ರಸ್ತೆ ಬದಿ ನಿಂತಿದ್ದ ಕ್ಯಾಂಟರ್ ಗೆ ಓಮ್ನಿ ಢಿಕ್ಕಿ: ಮಹಿಳೆ ಸಾವು, ಐವರಿಗೆ ಗಾಯ

ಈ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿ ಶರತ್ ಭೇಟಿ ನೀಡಿ ಪರಿಶೀಲನೆ ನಡೆಸಿ ಜಿಂಕೆಯನ್ನು ವಶಕ್ಕೆ ಪಡೆದು ಚಿಕಿತ್ಸೆ ಕೊಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next