ನವದೆಹಲಿ: ಅಲ್ಬಾನಿಯಾದ ಡ್ಯುರೆಸ್‌ನಲ್ಲಿ ಆರಂಭಗೊಂಡ ಐಡಬ್ಲ್ಯುಎಫ್ ವರ್ಲ್ಡ್ ಯೂತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ ಮೊದಲ ದಿನ ಭಾರತ 2 ಕಂಚಿನ ಪದಕಗಳನ್ನು ಜಯಿಸಿದೆ.
ವನಿತೆಯರ 40 ಕೆಜಿ ವಿಭಾಗದ ಸ್ಪರ್ಧೆಯಲ್ಲಿ 14 ವರ್ಷದ ಜೋಶ್ನಾ ಸಾಬರ್ 115 ಕೆಜಿ ಭಾರವೆತ್ತಿ(ಸ್ನ್ಯಾಚ್‌ನಲ್ಲಿ 53 ಕೆಜಿ, ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 62 ಕೆಜಿ) ತೃತೀಯ ಸ್ಥಾನಿಯಾದರು. ಸ್ನ್ಯಾಚ್ ವಿಭಾಗದಲ್ಲಿ ಬೆಳ್ಳಿ ಗೆದ್ದ ಜೋಶ್ನಾ, 7 ಸ್ಪರ್ಧಿಗಳ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 6ನೇ ಸ್ಥಾನಿಯಾದರು. ಎರಡೂ ವಿಭಾಗಗಳಿಗೆ ಪ್ರತ್ಯೇಕ ಪದಕ ನೀಡಲಾಗುತ್ತದೆ. ಆದರೆ ಅಂತಿಮವಾಗಿ ಗಣನೆಗೆ ಬರುವುದು ಸ್ನ್ಯಾಚ್ ಪ್ಲಸ್ ಕ್ಲೀನ್ ಆ್ಯಂಡ್ ಜರ್ಕ್‌ನ ಒಟ್ಟು ತೂಕ ಮಾತ್ರ.
ಪುರುಷರ 49 ಕೆಜಿ ವಿಭಾಗದಲ್ಲಿ 16 ವರ್ಷದ ಧನುಷ್ ಲೋಗನಾಥನ್ ಒಟ್ಟು 200 ಕೆಜಿ(88 ಕೆಜಿ ಪ್ಲಸ್ 112 ಕೆಜಿ) ಭಾರವೆತ್ತಿ ಕಂಚು ಗೆದ್ದರು. ಆದರೆ ಜೋಶ್ನಾ ಅವರಂತೆ ಸ್ನ್ಯಾಚ್‌ನಲ್ಲಿ ದ್ವಿತೀಯ ಸ್ಥಾನಿಯಾಗಿದ್ದರು.