ಯುವಕ-ಯುವಕನಿಗೆ ವಿವಾಹ ಮಾಡಿ ಮಾದಪ್ಪನಿಗೆ ಮೊರೆಯಿಡುವ ವಿಶೇಷ ಆಚರಣೆ ಮಹದೇಶ್ವರ ಬೆಟ್ಟದಲ್ಲಿ
ನಡೆಯಿತು. ಶಿವರಾತ್ರಿ ಜಾತ್ರೆಗೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಕೆಲ ಗ್ರಾಮಸ್ಥರು ಪ್ರತಿ ಮನೆಯಿಂದ ಹಣ
ಸಂಗ್ರಹಿಸಿಕೊಂಡು ಕ್ಷೇತ್ರ ತಲುಪುತ್ತಾರೆ. ಬಳಿಕ ಶ್ರೀಕ್ಷೇತ್ರದಲ್ಲಿ ವಿವಾಹ ಕಾರ್ಯಕ್ರಮ ಆಯೋಜಿಸಿ ಇಬ್ಬರು ಯುವಕರನ್ನು ಆಯ್ಕೆ ಮಾಡಿ ಅವರನ್ನು ವಧು ವರರ ರೀತಿ ಅಲಂಕರಿಸಲಾಗುತ್ತದೆ. ಓರ್ವನಿಗೆ ಸೀರೆ ಉಡಿಸಿ, ಬಳೆ ತೊಡಿಸಿ ವಧುವಿನಂತೆ ಸಿಂಗರಿಸಲಾಗುತ್ತದೆ. ಬಳಿಕ ಈ ಇಬ್ಬರನ್ನೂ ವಧು ವರರಂತೆ ಮೆರವಣಿಗೆ ನಡೆಸಿ ಪೂಜಾ ವಿಧಿ ವಿಧಾನ ನಡೆಸಲಾಯಿತು.
Advertisement