Advertisement

ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿ ಯುವಕನಿಗೆ ಚಾಕು ಇರಿತ

09:45 AM Aug 24, 2019 | Team Udayavani |

ಹುಬ್ಬಳ್ಳಿ: ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿ ಮೂರ್ನಾಲ್ಕು ಜನರ ತಂಡವೊಂದು ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ ನಡೆದಿದೆ. ಉಣಕಲ್ಲ ಆಶ್ರಯ ಕಾಲೋನಿ ನಿವಾಸಿ ಸುಭಾಸ ಮಲ್ಲೇಶಪ್ಪ ಮುಂಡಗೋಡ (31) ಎಂಬಾತನೇ ಚಾಕು ಇರಿತಕ್ಕೊಳಗಿರುವ ಯುವಕನಾಗಿದ್ದಾನೆ.

Advertisement

ಪಿ.ಬಿ. ರಸ್ತೆ ಬಂಕಾಪುರ ಚೌಕ್ ಬಳಿಯ ಇಂದಿರಾನಗರ ನಿವಾಸಿಗಳಾದ ಪುರುಷೋತ್ತಮ ಪೆನಗೊಂಡ, ಮಂಜು ಪೆನಗೊಂಡ, ಗಣೇಶ ಪೆನಗೊಂಡ ಈ ಕೃತ್ಯ ಎಸಗಿದ್ದಾರೆ ಎಂದು ಗಾಯಾಳುವಿನ ಪತ್ನಿ ಕೃಷ್ಣಕುಮಾರಿ ಅವರು ಆರೋಪಿಸಿದ್ದಾರೆ.

ಇದೀಗ ಗಾಯಾಳು ಸುಭಾಸನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಆರ್.‌ ದಿಲೀಪ್ ಅವರು ಘಟನಾ ಸ್ಥಳಕ್ಕೆ ಹಾಗೂ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ತಪ್ಪಿತಸ್ಥರನ್ನು ಶೀಘ್ರ ಬಂಧಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಮಾಧ್ಯಮದವರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next