Advertisement

ದುಶ್ಚಟಕ್ಕೆ ಯುವಜನಾಂಗ ಬಲಿ: ಬಸವಪ್ರಭು ಶ್ರೀ ವಿಷಾದ

10:38 AM Aug 13, 2019 | Suhan S |

ದಾವಣಗೆರೆ: ಪ್ರಸ್ತುತ ಯುವಜನಾಂಗ ಆರೋಗ್ಯದ ಎಚ್ಚರಿಕೆ ವಹಿಸದೇ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದುರಂತ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಿಷಾದಿಸಿದ್ದಾರೆ.

Advertisement

ನಗರದ ವಿರಕ್ತ ಮಠದಲ್ಲಿ ಕರುಣಾಜೀವ ಕಲ್ಯಾಣ ಟ್ರಸ್ಟ್‌ ಏರ್ಪಡಿಸಿದ್ದ 200ನೇ ಯಶಸ್ವಿ ಆರೋಗ್ಯ ತಪಾಸಣಾ ಶಿಬಿರ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ದೇಹ ರಕ್ಷಣೆಗೆ ಅತಿ ಹೆಚ್ಚು ಜಾಗ್ರತೆ ವಹಿಸಬೇಕು. ಆದರೆ, ಇಂದಿನ ಯುವ ಸಮೂಹ ಮದ್ಯ, ಗುಟ್ಕಾ, ಸಿಗರೇಟ್‌ಗಳಂತಹ ವಸ್ತುಗಳ ದಾಸರಾಗಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು.

ಶ್ರಮರಹಿತ ಜೀವನದಿಂದ ಇಂದು ಮಾನವನ ಶರೀರ ರೋಗದ ಗೂಡಾಗಿ ಮಾರ್ಪಟ್ಟಿದೆ. ಅತಿಯಾದ ಆಹಾರ ಸೇವನೆ ಹಾಗೂ ಬೊಜ್ಜಿನಿಂದ ಮಧುಮೇಹ ಸಮಸ್ಯೆ ಎದುರಾಗಲಿದೆ. ಆರೋಗ್ಯ ಎಲ್ಲಕ್ಕಿಂತ ದೊಡ್ಡ ಸಂಪತ್ತು. ಮುನುಷ್ಯನ ಆರೋಗ್ಯ ಸುಸ್ಥಿತಿಯಲ್ಲಿರಲು ಯಾವುದೇ ದುಶ್ಚಟಕ್ಕೆ ಬಲಿಯಾಗಬಾರದು. ಒಮ್ಮೆ ದೇಹ ರಿಪೇರಿಗೆ ಬಂದರೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಭಗವಂತ ನೀಡಿರುವ ದೇಹವನ್ನು ಅತಿ ಎಚ್ಚರಿಕೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಅಲ್ಲಿನ ಜನರ ಬದುಕು ನೀರಲ್ಲಿ ಮುಳುಗಿ ಹೋಗಿದೆ. ಅವರ ನೆರವಿಗೆ ದಾವಿಸುವುದು ಪ್ರತಿಯೊಬ್ಬರ ಕರ್ತವ್ಯ, ಸಂತ್ರಸ್ತರಿಗೆ ಸಹಾಯ ಮಾಡಲಿಚ್ಚಿಸುವವರು ಶಿವಯೋಗಾಶ್ರಮ ಅಥವಾ ವಿರಕ್ತ ಮಠಕ್ಕೆ ಅಗತ್ಯ ವಸ್ತುಗಳನ್ನು ನೀಡಿದರೆ ಶ್ರೀಮಠದಿಂದ ಅವುಗಳನ್ನು ಸಂಕಷ್ಟಕ್ಕೊಳದ ಜನರಿಗೆ ತಲುಪಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಹುಬ್ಬಳ್ಳಿಯ ಕಾರಟಗಿ ಆಸ್ಪತ್ರೆ ಡಾ| ರಾಮಚಂದ್ರ ಹಾಗೂ ಹರಿಹರದ ಡಾ| ಸವಿತಾ ಅವರಿಗೆ ಕಾರ್ಯಕ್ರಮದಲ್ಲಿ ಕರುಣಾ ಸೇವಾ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ, ಮಾತನಾಡಿದ ಡಾ| ರಾಮಚಂದ್ರ ಕಾರಟಗಿ, 12ನೇ ಶತಮಾನದಲ್ಲೇ ಬಸವಣ್ಣನವರು ಕಾಯಕ ನಿಷ್ಠೆ ತತ್ವ ಸಾರಿದ್ದರು. ದಯವೇ ಧರ್ಮದ ಮೂಲವೆಂದು ಹೇಳಿದ್ದರು. ಬಡವರು, ನೊಂದವರಿಗೆ ನೆರವು ನೀಡುವುದರಿಂದ ಬದುಕಿನ ಸಾರ್ಥಕತೆ ಲಭಿಸಲಿದೆ. ಈ ನಿಟ್ಟಿನಲ್ಲಿ ಕರುಣಾ ಜೕವ ಟ್ರಸ್ಟ್‌ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

Advertisement

ಕರುಣಾ ಜೀವ ಟ್ರಸ್ಟ್‌ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ, ಡಾ| ಬಿ.ಎಂ.ವಿಶ್ವನಾಥ್‌, ಡಾ| ಶಾರದಾ ಶೆಟ್ಟಿ, ಸಿ.ಜಿ.ದಿನೇಶ್‌, ಇತರರು ಕಾರ್ಯಕ್ರಮದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next