Advertisement

“ನೀರು ಕೊಡೋ ಮಗನೇ”ಎಂದು ಏಕವಚನದಲ್ಲಿ ಕೇಳಿದ್ದಕ್ಕೆ ಚೂರಿ ಇರಿದು ಕೊಲೆ

01:02 PM Sep 13, 2022 | Team Udayavani |

ಬೆಂಗಳೂರು: “ನೀರು ಕೊಡೋ ಮಗನೇ’ ಎಂದು ಏಕವಚನದಲ್ಲಿ ಕೇಳಿದ ವಿಚಾರಕ್ಕೆ ಇಬ್ಬರು ಆಟೋ ಚಾಲಕರ ನಡುವೆ ನಡೆದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪೀಣ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಆರ್‌.ಟಿ.ನಗರ ನಿವಾಸಿ ಸಿದ್ದಿಕ್‌ (23) ಕೊಲೆಯಾದ ಆಟೋ ಚಾಲಕ. ಈ ಸಂಬಂಧ ಅಜಯ್‌ ಎಂಬ ಆಟೋ ಚಾಲಕನನ್ನು ಬಂಧಿಸಲಾಗಿದೆ. ಜಾಲಹಳ್ಳಿ ಕ್ರಾಸ್‌ನಲ್ಲಿರುವ ಆಟೋ ನಿಲ್ದಾಣದಲ್ಲಿ ರಾತ್ರಿ 11.30ರ ಸುಮಾರಿಗೆ ಅಜಯ್‌ ಎಂಬಾತ ಆಟೋ ನಿಲ್ಲಿಸಿಕೊಂಡು ನಿಂತಿದ್ದ. ಅದೇ ವೇಳೆಯಲ್ಲಿ ಸಿದ್ದಿಕ್‌ ಆಟೋ ನಿಲ್ದಾಣಕ್ಕೆ ಬಂದಿದ್ದಾನೆ. ಆಗ “ಏನೋ ಮಗನೇ ನೀರಿದ್ದರೆ ಕೋಡೋ’ ಎಂದು ಏರುಧ್ವನಿಯಲ್ಲಿ ಸಿದ್ದಿಕ್‌ ಕೇಳಿದ್ದಾನೆ. ಅದಕ್ಕೆ ಕೋಪಗೊಂಡ ಅಜಯ್‌, “ಮಗನೇ’ ಎಂದು ಕರೆಯು ತ್ತಿಯಾ ಎಂದು ಜಗಳವಾಡಿದ್ದಾನೆ. ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಇದು ವಿಕೋಪಕ್ಕೆ ಹೋಗಿದ್ದು, ಆಕ್ರೋಶಗೊಂಡ ಅಜಯ್‌, ಚಾಕುವಿನಿಂದ ಸಿದ್ದಿಕ್‌ನ ಎದೆ, ಹೊಟ್ಟೆ ಹಾಗೂ ಇತರೆ ಭಾಗಗಳಿಗೆ ಇರಿದಿದ್ದಾನೆ. ರಕ್ತಸ್ರಾವದಲ್ಲಿ ಬಿದ್ದಿದ್ದ ಸಿದ್ದಿಕ್‌ನನ್ನು ಇತರೆ ಆಟೋ ಚಾಲಕರು ಕೂಡಲೇ ಸಮೀ ಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.

ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next