Advertisement
ಗುಜ್ಜಾಡಿ ಗ್ರಾಮದ ನಿವಾಸಿ ನರಸಿಂಹ ನಾಯಕವಾಡಿ ಅವರ ಪುತ್ರ ಸುಜಯ (20) ಮೃತಪಟ್ಟ ಯುವಕ.ಊರ ದೇಗುಲದ ಕಾರ್ತಿಕ ದೀಪೋತ್ಸವದ ಕಟ್ಟೆಪೂಜೆಯ ಸಿದ್ಧತೆ ಮಾಡುತ್ತಾ ಮಾವಿನ ತೋರಣ ಕಟ್ಟಲು ಕಟ್ಟೆಯ ಬಳಿ ಇರುವ ಮಾವಿನ ಮರದ ಕೊಂಬೆಯನ್ನು ಕಡಿಯಲು ಮರ ಹತ್ತಿ, ಮರದ ಕೊಬೆಯನ್ನು ಕಡಿಯುವಾಗ, ಮರದ ಕೊಂಬೆಯು ಸಮೀಪದಲ್ಲಿ ಹಾದು ಹೋದ 33 ಸಾವಿರ ಕೆವಿ ಸಾಮರ್ಥ್ಯದ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಪ್ರವಹಿಸಿ ಸುಜಯ್ ಅವರಿಗೆ ತಗಲಿದ್ದು, ತತ್‌ಕ್ಷಣ ಅವರನ್ನು ಸ್ಥಳೀಯರ ಸಹಕಾರದಲ್ಲಿ ಆಂಬುಲೆನ್ಸ್ ಮೂಲಕ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಯುವಕನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.