Advertisement

ಮೂರು ವರ್ಷದ ಬಾಲಕಿಯ ಬಾಯಲ್ಲಿ ಪಟಾಕಿ ಸುಟ್ಟ ಪುಂಡ ತರುಣ; ಬಾಲಕಿ ಗಂಭೀರ

04:24 PM Nov 08, 2018 | Team Udayavani |

ಲಕ್ನೋ : ದೀಪಾವಳಿಯ ಮುನ್ನಾ ದಿನ ನಿನ್ನೆ ಬುಧವಾರ ಕೀಟಲೆಕೋರ, ಅವಿವೇಕಿ ಪುಂಡ ತರುಣನೋರ್ವ ಮೂರು ವರ್ಷದ ಬಾಲಕಿಯ ಬಾಯಲ್ಲಿ ಪಟಾಕಿ ಇರಿಸಿ ಸ್ಫೋಟಿಸಿದ ಅಮಾನುಷ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.

Advertisement

ಬಾಯಲ್ಲಿ ಪಟಾಕಿ ಸಿಡಿದು ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಒಡನೆಯೇ ಆಸ್ಪತ್ರೆಗೆ ಒಯ್ಯಲಾಗಿದೆ. ಆಕೆಯ ಸ್ಥಿತಿ ಚಿಂತಾಜನಕವಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಮೀರತ್‌ನ ದೌರಾಲಾ ರಸ್ತೆಯಲ್ಲಿರುವ ಮಿಲಾಕ್‌ ಗ್ರಾಮದಲ್ಲಿ ಈ ಅತ್ಯಮಾನುಷ ಘಟನೆ ನಡೆದಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿ ಪುಂಡ ತರುಣನಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಆಸ್ಪತ್ರೆಯಲ್ಲಿ  ಜೀವನ್ಮರಣ ಹೋರಾಟದಲ್ಲಿರುವ ಬಾಲಕಿಯ ತಂದೆ ಶಶಿ ಕುಮಾರ್‌ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹಸುಳೆಯ ಮೇಲೆ ಈ ಅತ್ಯಮಾನುಷ ಕ್ರೌರ್ಯ ನಡೆಸಿರುವ ತರುಣನನ್ನು ಹರ್‌ಪಾಲ್‌ ಎಂದು ಹೆಸರಿಸಿದ್ದಾರೆ.

ಆರೋಪಿ ಪುಂಡ ತರುಣ ಹರ್‌ಪಾಲ್‌, ಮನೆಯ ಮುಂದೆ ಆಡಿಕೊಂಡಿದ್ದ ಬಾಲಕಿಯ ಬಳಿ ಹೋಗಿ ಆಕೆಯ ಬಾಯಿಯಲ್ಲಿ ಸುತ್ತಳಿ ಬಾಂಬ್‌ ಇರಿಸಿ ಅದಕ್ಕೆ ಬೆಂಕಿ ಹಚ್ಚಿದಾಗ ಅದು ಭಾರೀ ಸದ್ದಿನೊಂದಿಗೆ ವಸ್ತುತಃ ನ್ಪೋಟಗೊಂಡಿತು. ಪರಿಣಾಮವಾಗಿ ಬಾಲಕಿಯು ಗಂಭೀರವಾಗಿ ಗಾಯಗೊಂಡಳು. 

Advertisement

ವೈದ್ಯರು ಬಾಲಕಿಯ ಜೀವ ಉಳಿಸಲು ಶತಪ್ರಯತ್ನ ಮಾಡುತ್ತಿದ್ದು ಈ ವರೆಗೆ ಅವರು ಚಿಂದಿಯಾಗಿರುವ ಆಕೆಯ ಬಾಯಿಗೆ 50 ಹೊಲಿಗೆಗಳನ್ನು ಹಾಕಿದ್ದಾರೆ. ಸ್ಫೋಟದಿಂದ ಬಾಲಕಿಯ ಗಂಟಲು ಕೂಡ ಸುಟ್ಟು ಹೋಗಿದೆ. ಇದರಿಂದಾಗಿ ಆಕೆಯ ಸ್ಥಿತಿ ತೀವ್ರವಾಗಿ ವಿಷಮಿಸಿದೆ ಎಂದು ವೈದ್ಯರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next