Advertisement

ಯುವ ಸಂಸ್ಥೆಗಳಿಂದ ನಾಯಕತ್ವ ಬೆಳವಣಿಗೆ ಸಾಧ್ಯ: ಭವಾನಿ ಚಿದಾನಂದ

02:45 PM Feb 22, 2017 | |

ಪುತ್ತೂರು: ಯುವಸಂಸ್ಥೆಗಳಿಂದ ನಾಯಕತ್ವ ಬೆಳವಣಿಗೆಗೆ  ಪೂರಕ ವಾತಾವರಣ ದೊರಕುತ್ತದೆ. ಇದರಿಂದ  ಸಮಾಜದಲ್ಲಿ ಆರೋಗ್ಯಕರ ಬೆಳವಣಿಗೆ ಸಾಧ್ಯ ಎಂದು ಪುತ್ತೂರು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಹೇಳಿದರು.

Advertisement

ಅವರು ಪುತ್ತೂರು ಲಯನ್ಸ್‌ ಸೇವಾ ಮಂದಿರದಲ್ಲಿ  ಪಡೀಲು ಚೈತನ್ಯ ಮಿತ್ರ ವೃಂದ ಇದರ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ನೇತಾಜಿ ಸುಭಾಶ್ಚಂದ್ರ  ಬೋಸ್‌ ಜಯಂತಿಯ ಅಂಗವಾಗಿ ಪ್ರಗತಿ ಎಜುಕೇಶನಲ್‌ ಫೌಂಡೇಶನ್‌ನ ಪ್ರಾಯೋಜಕತ್ವದಲ್ಲಿ ನಡೆದ  ತಾಲೂಕಿನ ಯುವಪ್ರತಿಭೆಗಳ ಹಾಸ್ಯ ಪ್ರಹಸನ, ಕಿರುನಾಟಕ, ಜಾನಪದ ಕುಣಿತಗಳನ್ನೊಳಗೊಂಡ ಸಾಂಸ್ಕೃತಿಕ  ಕಾರ್ಯಕ್ರಮ ಪ್ರತಿಭಾ ಸಮ್ಮಿಲನ -2017 ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದರು.

ನಗರ ಸಭಾಧ್ಯಕ್ಷೆ ಜಯಂತಿ ಬಲಾ°ಡು ಅಧ್ಯಕ್ಷತೆ ವಹಿಸಿದ್ದರು.ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ  ಹೇಮನಾಥ ಶೆಟ್ಟಿ ಕಾವು, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್‌ ರೈ ಸೂಡಿಮುಳ್ಳು, ವಿವೇಕ ಜಾಗೃತ ಬಳಗ ವಿಟ್ಲ ಇದರ ಅಧ್ಯಕ್ಷ  ಗಣೇಶ್‌ ಕುಮಾರ್‌, ಹಾರಾಡಿ ಶಾಲಾ ಮುಖ್ಯ ಶಿಕ್ಷಕ ಮುದರ, ಸವಣೂರು  ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ.,  ಪ್ರಗತಿ ಎಜುಕೇಶನಲ್‌ ಫೌಂಡೇಶನ್‌ ಸ್ಥಾಪಕಾಧ್ಯಕ್ಷ ಗೋಕುಲ್‌ನಾಥ್‌ ಪಿ.ವಿ., ಉಪಾಧ್ಯಕ್ಷೆ ಹೇಮಲತಾ ಗೋಕುಲ್‌ನಾಥ್‌, ಪಡೀಲು ಚೈತನ್ಯ ಮಿತ್ರ ವೃಂದದಅಧ್ಯಕ್ಷ ರಮೇಶ್‌ ಕುಲಾಲ್‌, ಕಾರ್ಯದರ್ಶಿ ಅರುಣ ಕುಮಾರ್‌ ಕೆ., ಸಂಚಾಲಕ ಸಂಪತ್‌ ಕುಮಾರ್‌ ಜೈನ್‌ ಉಪಸ್ಥಿತರಿದ್ದರು.

ಅಭಿನಂದನೆ
ದ.ಕ.ಜಿಲ್ಲಾ ಯುವಜನ ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ  ಪುತ್ತೂರು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್‌ ರೈ ಸೂಡಿಮುಳ್ಳು ಅವರನ್ನು ಪಡೀಲು ಚೈತನ್ಯ ಮಿತ್ರ ವೃಂದ ಇದರ ವತಿಯಿಂದ ಅಭಿನಂದಿಸಲಾಯಿತು. ಪ್ರತಿಭಾ ಸಮ್ಮಿಲನದಲ್ಲಿ  ಪ್ರಖ್ಯಾತಿ ಯುವತಿ ಮಂಡಲ  ನರಿಮೊಗರು, ಶ್ರೀ ಗೌರಿ ಯುವತಿಮಂಡಲ ಮಂಜು ನಾಥನಗರ ಪಾಲ್ತಾಡಿ, ಬೆಥನಿ ಶಿಕ್ಷಣ ಸಂಸ್ಥೆ ದರ್ಬೆ, ಸ.ಹಿ.ಪ್ರಾ. ಶಾಲೆ ಹಾರಾಡಿ, ಪ್ರಗತಿ ಶಿಕ್ಷಣ ಸಂಸ್ಥೆ ಕಾಣಿಯೂರು ತಂಡಗಳು ಮತ್ತು ವೈಯುಕ್ತಿಕವಾಗಿ ಹಲವರು ಪ್ರತಿಭೆ ಪ್ರದರ್ಶಿಸಿದರು.

ಚೈತನ್ಯ ಮಿತ್ರ ವೃಂದದ ಮಾಜಿ ಸಂಚಾಲಕ ಗಣೇಶ್‌ ಎನ್‌. ಸ್ವಾಗತಿಸಿ, ಗಣೇಶ್‌ ಮೊಟ್ಟೆತ್ತಡ್ಕ ವಂದಿಸಿದರು. ಚಂದ್ರಶೇಖರ್‌ ಪಿ. ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next