Advertisement

ಅಗ್ನಿಪಥ ಯೋಜನೆ ರದ್ದತಿಗೆ ಹೋರಾಟ

04:08 PM Jul 16, 2022 | Team Udayavani |

ಚಿಕ್ಕಬಳ್ಳಾಪುರ: ದೇಶದ ಯುವ ಜನತೆಗೆ ವಾರ್ಷಿಕ 2 ಕೋಟಿ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇರುವ ಉದ್ಯೋಗಗಳನ್ನುಕಿತ್ತುಕೊಳ್ಳುವ ಮೂಲಕ ದುರಾಡಳಿತವನ್ನು ನಡೆಸುತ್ತಿದೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಉಸ್ತುವಾರಿ ಕಾರ್ಯದರ್ಶಿ ಎಹಸಾನ್‌ ಅಹಮದ್‌ ಖಾನ್‌ ಆರೋಪಿಸಿದರು.

Advertisement

ತಾಲೂಕಿನ ಮಂಡಿಕಲ್‌ನಲ್ಲಿ ಯುವ ಕಾಂಗ್ರೆಸ್‌ ಸಮಿತಿಯಿಂದ ಆಯೋಜಿಸಿದ್ದ ಯೂತ್‌ ಜೋಡೊ ಬೂತ್‌ ಜೋಡೋ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು. ದೇಶಾದ್ಯಂತ ನಿರುದ್ಯೋಗ ಸಮಸ್ಯೆಉಲ್ಬಣವಾಗಿದೆ ಅದನ್ನು ನಿವಾರಿಸುವ ಬದಲಿಗೆ ಕೇಂದ್ರಸರ್ಕಾರ ಅಗ್ನಿಪಥ್‌ ಎಂಬ ಯೋಜನೆಯನ್ನು ಜಾರಿಗೊಳಿಸಿ ಮತ್ತುಷ್ಟು ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಲು ಹೊರಟಿದೆ. ಈ ಯೋಜನೆಯನ್ನು ವಾಪಸ್‌ ಪಡೆಯಲು ಆಗ್ರಹಿಸಿನಿರಂತರವಾಗಿ ಹೋರಾಟ ನಡೆಸಲಿದೆ ಎಂದರು.

ಕೇಂದ್ರ ಸರ್ಕಾರದ ಮತ್ತು ಬಿಜೆಪಿ ನೇತೃತ್ವದ ರಾಜ್ಯಸರ್ಕಾರಗಳ ಜನವಿರೋಧಿ ಮತ್ತು ರೈತ ವಿರೋಧಿ ಧೋರಣೆಗಳನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಚಲೋ ವಾರ್ಡ್‌ ಚಲೋ ಪಂಚಾಯತ್‌ ಕಾರ್ಯಕ್ರಮವನ್ನು ಸಂಘಟಿಸಲಾಗಿದ್ದುಯುವ ಕಾಂಗ್ರೆಸ್‌ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಸರ್ಕಾರದ ವ್ಯಫಲ್ಯಗಳು ಹಾಗೂ ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನು ತಿಳಿಸುವ ಕೆಲಸ ಮಾಡಲಿದ್ದಾರೆ ಎಂದರು.

ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಅಧ್ಯಕ್ಷ ಬಿವಿ ಶ್ರೀನಿವಾಸ್‌ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಉಸ್ತುವಾರಿ ಕೃಷ್ಣ ಅಲಾವರ್‌ ಅವರ ನೇತೃತ್ವದಲ್ಲಿಯೂತ್‌ ಜೋಡೋ ಬೂತ್‌ ಜೋಡೋ  ಅಭಿಯಾನವನ್ನು ಜು. 11 ರಿಂದ ಆರಂಭಿಸಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರಸೂಚನೆಯಂತೆ ಯುವ ಧ್ವನಿ ಎಂಬ ಕಾರ್ಯಕ್ರಮದ ಮೂಲಕ ನಿರುದ್ಯೋಗಿಗಳ ಮಾಹಿತಿಯನ್ನು ಸಂಗ್ರಹಿಸುವ ಅಭಿಯಾನ ನಡೆಯುತ್ತಿದೆ ಎಂದರು.

ರಾಜ್ಯ ಯುವ ಕಾಂಗ್ರೆಸ್‌ ಉಪಾಧ್ಯಕ್ಷೆ ಎಚ್‌.ಆರ್‌. ದೀಪಿಕಾರೆಡ್ಡಿ ಮಾತನಾಡಿ, ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ಇರುವ ಸಾರ್ವಜನಿಕ ಸ್ವಾಮ್ಯದ ಸ್ವತ್ತುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಯುವಜನರೊಂದಿಗೆ ಕೇಂದ್ರ ರಾಜ್ಯ ಬಿಜೆಪಿ ಸರ್ಕಾರಗಳು ಚೆಲ್ಲಾಟ ಮಾಡುತ್ತಿವೆ ಎಂದು ಟೀಕಿಸಿದರು.

Advertisement

ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮುದಾಸಿರ್‌ ದಾವುದ್‌ ಮಾತನಾಡಿ, 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಪಕ್ಷವನ್ನುಸದೃಢಗೊಳಿಸಬೇಕು ಆ ನಿಟ್ಟಿನಲ್ಲಿ ಯುವ ಕಾಂಗ್ರೆಸ್‌ಕಾರ್ಯಕರ್ತರು ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಾಲೂಕಿನಲ್ಲಿ ಕಾಂಗ್ರೆಸ್‌ ಅನ್ನು ಸದೃಢವಾಗಿ ಬೆಳೆಸುವಂತೆ ಮನವಿ ಮಾಡಿದರು.

ರಾಜ್ಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಮಾರುತಿ, ಉಸ್ತುವಾರಿ ಮೊಹಮ್ಮದ್‌ ಝಬೀಉಲ್ಲಾ, ಅಲಾಮಿಸ್‌ ಖಾನ್‌, ಜಿಲ್ಲಾಯುವ ಕಾಂಗ್ರೆಸ್‌ನ ಉಪಾಧ್ಯಕ್ಷ ಶಂಕರ್‌, ಕಾಂಗ್ರೆಸ್‌ನ ಹಿರಿಯ ಮುಖಂಡ ಅಜಿತ್‌ ಪ್ರಸಾದ್‌, ಮಂಡಿಕಲ್‌ ಬ್ಲಾಕ್‌ ಕಾಂಗ್ರೆಸ್‌ಪ್ರಧಾನ ಕಾರ್ಯದರ್ಶಿ ನಾಗೇಶ್‌, ಸತೀಶ್‌ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಹಾಗೂ ಬ್ಲಾಕ್‌ ಯುವ ಕಾಂಗ್ರೆಸ್‌ ಪದಾಧಿಕಾರಿಗಳು ಹಾಜರಿದ್ದರು.

ಕಾಂಗ್ರೆಸ್‌ ಸಾಧನೆ, ತ್ಯಾಗ ತಿಳಿಸಲು ಒತ್ತು :

ರಾಜ್ಯದಲ್ಲಿ ಮತ್ತು ದೇಶದಲ್ಲಿ ಯುವಕರನ್ನು ಕಾಂಗ್ರೆಸ್‌ ಪಕ್ಷದತ್ತ ಸೆಳೆಯಲು ಮತ್ತು ಈ ದೇಶದಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್‌ ಮಾಡಿರುವ ತ್ಯಾಗಬಲಿದಾನದ ಕುರಿತು ಯುವಕರಿಗೆ ತಿಳಿಸುವಕೆಲಸವನ್ನು ಮಾಡುವ ಜತೆಗೆ ಸಂಘಟನೆಯನ್ನು ಮತ್ತಷ್ಟು ಸದೃಢಗೊಳಿಸಲು ಯೂತ್‌ ಜೋಡೋ ಬೂತ್‌ ಜೋಡೋ ಕಾರ್ಯಕ್ರಮದ ಮೂಲಕ ಬೂತ್‌ ಮಟ್ಟದಲ್ಲಿ 5 ಯುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಸೇರಿಸಿ ಗ್ರಾಮೀಣ ಮಟ್ಟದಲ್ಲಿ ಡಿಜಿಟಲ್‌ ಮಿಡಿಯಾ ವಿಭಾಗ ಸಕ್ರೀಯವಾಗಿಕಾರ್ಯನಿರ್ವಹಿಸಲಿದೆ ಎಂದು ಯುವಕಾಂಗ್ರೆಸ್‌ನ ಉಸ್ತುವಾರಿ ಕಾರ್ಯದರ್ಶಿ ಎಹಸಾನ್‌ ಅಹಮದ್‌ ಖಾನ್‌ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಪದಾಧಿಕಾರಿಗಳ ನೇಮಕ :  ಚಿಕ್ಕಬಳ್ಳಾಪುರ ಗ್ರಾಮಾಂತರ ಯುವಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ ಸತೀಶ್‌,ರಮೇಶ್‌, ನವೀನ್‌ಕುಮಾರ್‌, ಪ್ರಧಾನಕಾರ್ಯದರ್ಶಿಗಳಾಗಿ ಮೋಹನ್‌ಕುಮಾರ್‌, ಶಿವಕುಮಾರ್‌, ನರಸಿಂಹ, ಶಶಾಂಕ್‌, ಶಾಹಿದ್‌ ಹಾಗೂ ಮಹಿಳಾ ಉಪಾಧ್ಯಕ್ಷೆಯಾಗಿ ನಸೀಮಾ ತಾಜ್‌ ಅವರನ್ನು ನೇಮಕ ಮಾಡಿ ಆದೇಶ ಪತ್ರದ ಪ್ರತಿಗಳನ್ನು ಕಾರ್ಯಕರ್ತರಿಗೆ ವಿತರಣೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next