Advertisement

ಕತ್ತು ಸೀಳಿ ಅಮಾನುಷವಾಗಿ ಕೊಲೆಗೀಡಾದ ತರುಣನ ಶವ ಪತ್ತೆ

12:28 PM Aug 28, 2017 | udayavani editorial |

ಥಾಣೆ :  ಜಿಲ್ಲೆಯ ತಿತ್ವಾಲಾ ಸಮೀಪದ ಆಣೆಭಿಸೋಳೆ ಗ್ರಾಮದಲ್ಲಿ ಕತ್ತು ಸೀಳಿ ಮೈತುಂಬ ಇರಿದು ಕೊಲ್ಲಲಾದ 18ರ ಹರೆಯದ ತರುಣನೋರ್ವನ ಶವ ಕೆಂಪು ಮಣ್ಣಿನ ರಸ್ತೆಯ ಪಕ್ಕದಲ್ಲಿ ಬಿದ್ದಿರುವುದು ಪತ್ತೆಯಾಗಿದೆ. 

Advertisement

ಮೃತ ತರುಣನನ್ನು ಕನ್ಹಯ್ಯಲಾಲ್‌ ಕುಮಾವತ್‌ ಎಂದು ಗುರುತಿಸಲಾಗಿದ್ದು ಈತನು ಉಲ್ಲಾಸನಗರದ ನಿವಾಸಿ ಎಂದು ಗೊತ್ತಾಗಿದೆ.

ಹಿಂದಿನ ರಾತ್ರಿಯಷ್ಟೇ ಯುವಕನು ನಾಪತ್ತೆಯಾಗಿರುವ ಬಗ್ಗೆ ಆತನ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. 

ಕೊಲೆಗೀಡಾಗಿರುವ ಕುಮಾವತ್‌ ಸೀರೆ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಮತ್ತು ಶನಿವಾರ ರಾತ್ರಿ ಸ್ನೇಹಿತರೊಂದಿಗೆ ಹೋಗಿದ್ದವನು ಅನಂತರ ಮನೆಗೆ ಮರಳಿ ಬಂದಿರಲಿಲ್ಲ.

ಪೊಲೀಸರು ಕೊಲೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next