Advertisement
ದ.ಕ. ಜಿಲ್ಲಾಡಳಿತ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ. ಜಿ.ಪಂ., ಬೆಳ್ತಂಗಡಿ ತಾ.ಪಂ., ಗ್ರಾ.ಪಂ. ಬಳಂಜ, ಜಿಲ್ಲಾ ಯುವ ಜನ ಒಕ್ಕೂಟ, ತಾಲೂಕು ಯುವಜನ ಒಕ್ಕೂಟ, ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ವತಿಯಿಂದ ಬಳಂಜ ಶ್ರೀ ಉಮಾಮಹೇಶ್ವರ ಯುವಕ ಮಂಡಲದ ಆಶ್ರಯದಲ್ಲಿ ಶನಿವಾರ ಬಳಂಜ ಉ.ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಜನ ಮೇಳ ರಾಷ್ಟ್ರಭಕ್ತಿ ಮೂಡಿಸುವ ಸಮ್ಮೇಳನವಾಗಬೇಕಿದೆ. ಯುವಸಬಲೀಕರಣ ಅಧಿಕಾರಿಗಳ ಹುದ್ದೆ ತಾಲೂಕು ಮಟ್ಟದಲ್ಲಿ ಕೊರತೆಬಂದಿದ್ದು ಇದನ್ನು ಭರ್ತಿಗೊಳಿಸಬೇಕು ಎಂಬ ಬೇಡಿಕೆಯೂ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಸಂಸ್ಕೃತಿ ಸಂದೇಶ ಮತ್ತಷ್ಟು ಜನರನ್ನು ತಲುಪಲು ಮುಂದಿನ ದಿನಗಳಲ್ಲಿ ಯುವಜನ ಮೇಳ ತಾಲೂಕು ಮಟ್ಟದಲ್ಲಿ ನಡೆಯಬೇಕಿದೆ ಎಂದರು.
Related Articles
Advertisement
ಗಣ್ಯರಾದ ಕೊರಗಪ್ಪ ನಾಯ್ಕ, ತುಂಗಪ್ಪ ಬಂಗೇರ, ನಮಿತಾ, ಸೌಮ್ಯಲತಾ, ಮಮತಾ ಎಂ. ಶೆಟ್ಟಿ, ವಿನೂಷಾ ಪ್ರಕಾಶ್, ಕೇಶವತಿ, ವಸಂತಿ, ಅಮಿತಾ, ದೇವಕಿ ಕೊರಗಪ್ಪ ನಾಯ್ಕ, ಯಶೋಧರ ಶೆಟ್ಟಿ, ರೇವತಿ, ಮಂಜುಳಾ, ಕೇಶವ ಗೌಡ ಬೆಳಾಲು, ಸುರೇಶ್ ರೈ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ವಿನು ಬಳಂಜ, ಯೋಗೀಶ್ ಆರ್. ಉಪಸ್ಥಿತರಿದ್ದರು.
ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಕಾಪಿನಡ್ಕ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿ’ಸೋಜಾ ಪ್ರಸ್ತಾವನೆಗೈದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿ ಪ್ರಭಾಕರ ನಾರಾವಿ ವಂದಿಸಿದರು.
3 ಲಕ್ಷ ರೂ. ನೆರವುಕರಾವಳಿ ನಿವೃತ್ತ ವಾಯುಸೇನಾ ಅಧಿಕಾರಿಗಳಿಂದ ಬೆಳ್ತಂಗಡಿ ಕಾಳಜಿ ರಿಲೀಫ್ ಫಂಡ್‌ಗೆ 3 ಲಕ್ಷ ರೂ.ಗಳನ್ನು ಉಸ್ತುವಾರಿ ಸಚಿವರ ಮೂಲಕ ಶಾಸಕ ಹರೀಶ್ ಪೂಂಜ ಅವರಿಗೆ ಹಸ್ತಾಂತರಿಸಲಾಯಿತು. ಪೌರತ್ವ ಕಾಯಿದೆ ತಿದ್ದುಪಡಿಯಿಂದ ದೇಶದ ಅಥವಾ ರಾಜ್ಯದ ಯಾವುದೇ ಪ್ರಜೆಗೆ ಅನ್ಯಾಯವಾಗುವುದಿಲ್ಲ. ಅದರ ಸೂಕ್ಷ್ಮತೆಯನ್ನು ಪ್ರತಿಯೊಬ್ಬ ಪ್ರಜೆ ಅರ್ಥೈಸಿಕೊಂಡು ಸಹಕಾರ ನೀಡಬೇಕು ಎಂದು ಸರಕಾರದ ಸಚಿವನಾಗಿ ವಿನಂತಿಸುತ್ತಿದ್ದೇನೆ.
– ಕೋಟ ಶ್ರೀನಿವಾಸ ಪೂಜಾರಿ