Advertisement

“ಯುವಶಕ್ತಿಗೆ ನೈತಿಕ ಶಿಕ್ಷಣ’ಕಾರ್ಯಾಗಾರ

02:50 AM Jul 11, 2017 | |

ನೆಹರೂನಗರ: ಸುದಾನ ಶಾಲಾ ಕಲಾಸಂಘದ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ “ಯುವಶಕ್ತಿಗೆ ನೈತಿಕ ಶಿಕ್ಷಣ’ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.

Advertisement

ಸಂಪನ್ಮೂಲ ವ್ಯಕ್ತಿಗಳಾಗಿ ಕೆಪಿಟಿಸಿಎಲ್‌ ಎಂಜಿನಿಯರ್‌ ಸುಬ್ರಹ್ಮಣ್ಯ ಅರಸೀಕೆರೆ ಭಾಗವಹಿಸಿ ವಿದ್ಯಾರ್ಜನೆ ಮಹತ್ವ, ಶಿಕ್ಷಣದಲ್ಲಿ ಪಂಚಶೀಲ ತತ್ವಗಳ ಅನಿವಾರ್ಯತೆ, ಜೀವನದಲ್ಲಿ ಶಿಸ್ತು, ಸಂಯಮ, ಸಮಯಪ್ರಜ್ಞೆ, ಸರಳತೆ, ಏಕಾಗ್ರತೆ ಮೊದಲಾದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ವಿವೇಕ ಸಂಪದದ ಅಧ್ಯಕ್ಷ ಸುಬ್ರಹ್ಮಣ್ಯ ಮತ್ತು ವಿವೇಕ ಜಾಗೃತ ಬಳಗದ ಟಿ. ಆರ್‌. ಕಲ್ಲೂರಾಯ ಹಾಗೂ ಸದಸ್ಯ ಸದಾನಂದ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಶೋಭಾ ನಾಗರಾಜ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಿಕ್ಷಕಿ ವಿನಯಾ ರೈ ಸ್ವಾಗತಿಸಿ, ಸರಸ್ವತಿ ಜಿ. ಪಿ. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next