Advertisement

ರಾವೂರ ಶ್ರೀಸಿದ್ಧಲಿಂಗೇಶ್ವರ ರಥದ ಚಕ್ರ ಹರಿದು ಯುವಕ ಸಾವು; ಇಬ್ಬರಿಗೆ ಗಾಯ

08:37 PM Apr 24, 2022 | Team Udayavani |

ವಾಡಿ (ಚಿತ್ತಾಪುರ): ರವಿವಾರ ಸಂಜೆ ಸಂಭ್ರಮದಿಂದ ನಡೆದ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಶ್ರೀಸಿದ್ಧಲಿಂಗೇಶ್ವರರ ರಥೋತ್ಸವ ವೇಳೆ ಚಕ್ರಗಳನ್ನು ತಳ್ಳಲು ಹೋದ ಹಲವು ಜನ ಯುವ ಭಕ್ತರಲ್ಲಿ ಒರ್ವ ಮೃತಪಟ್ಟು ಇಬ್ಬರಿಗೆ ಗಾಯಗಳಾದ ದುರ್ಘಟನೆ ನಡೆದಿದೆ.

Advertisement

ರಾವೂರ ಗ್ರಾಮದ ವೆಂಕಪ್ಪ ಕೆಸಬಾಳ ಅವರ ಪುತ್ರ ನಿವಾಸಿ ಲಕ್ಷ್ಮಿಕಾಂತ್ (25) ಮೃತ ದುರ್ದೈವಿ. ಇದೇ ಗ್ರಾಮದವರಾದ ಯಂಕಪ್ಪ (22) ಹಾಗೂ ಭೀಮಾಶಂಕರ ಹೊಸಮನಿ (30) ಎಂಬುವವರ ಕಾಲು ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಾಡಿ ಸರಕಾರಿ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿಪಿಐ ಪ್ರಕಾಶ ಯಾತನೂರ ತಿಳಿಸಿದ್ದಾರೆ.

ತೇರು ಸಾಗುವಾಗ ಹಗ್ಗ ಎಳೆಯುವವರು ಭಕ್ತಿಯ ಪರಾಕಾಷ್ಠೆ ಮೆರೆದು ವೇಗವಾಗಿ ಎಳೆದರು ಎನ್ನಲಾಗಿದ್ದು, ಮೂವರು ಕೋಲಾಟದ ಯುವಕರು ಚಕ್ರಕ್ಕೆ ಸಿಲುಕುವಂತಾಯಿತು. ಮೃತ ಯುವಕನ ದೇಹದ ಮೇಲೆ ರಥದ ಚಕ್ರ ಹರಿದಿದ್ದರಿಂದ ಘಟನಾ ಸ್ಥಳದಲ್ಲಿ ನೆತ್ತರು ಹರಿದು ಕೋಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬಂದೋಬಸ್ತಿನಲ್ಲಿದ್ದ ವಾಡಿ ಠಾಣೆಯ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next