ರಾಮನಗರ: ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಅವರನ್ನು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿಯವರು ತಕ್ಷಣ ತಮ್ಮಸಚಿವ ಸಂಪುಟದಿಂದ ಕೈಬಿಡಬೇಕುಎಂದು ಒತ್ತಾಯಿಸಿ ರಾಮನಗರ ಜಿಲ್ಲಾಯುವ ಕಾಂಗ್ರೆಸ್ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಐಜೂರು ವೃತ್ತದಲ್ಲಿ ಜಮಾಯಿಸಿದರು. ಕೆ.ಎಸ್.ಈಶ್ವರಪ್ಪ, ಶಾಸಕ ಬಸವನಗೌಡ ಯತ್ನಾಳ್ ಅವರುಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ: ಯುವ ಕಾಂಗ್ರೆಸ್ ಮುಖಂಡ ಸಚಿನ್‌ಗೌಡ, ದೇಶದಲ್ಲಿ ರಾಷ್ಟ್ರಧ್ವಜವನ್ನು ತಾಯಿಗೆ ಸಮಾನವಾಗಿ ಗೌರವಿಸಲಾಗುತ್ತಿದೆ. ಹರುಕು ಬಾಯಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ರಾಷ್ಟ್ರ ಧ್ವಜಕ್ಕೆಅಪಮಾನ ಮಾಡಿ, ಕಾಂಗ್ರೆಸ್ ನಾಯಕರ ವಿರುದ್ಧ ಲಘು ವಾಗಿ ಮಾತನಾಡಿದ್ದಾರೆ ಎಂದು ಟೀಕಿಸಿದರು.
ಸಚಿವರನ್ನು ಸಂಪುಟದಿಂದ ಕೈಬಿಡಿ: ಈಶ್ವರಪ್ಪ ಅವರನ್ನು ದೇಶದ್ರೋಹಿ ಎಂದ ಅವರು ಸಚಿವರು ತಕ್ಷಣ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿಗಳು ಈಶ್ವರಪ್ಪನ ವರನ್ನು ತಕ್ಷಣ ತಮ್ಮ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಮುತ್ತಿಗೆ ಎಚ್ಚರಿಕೆ: ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಾಸಕ ಬಸವನ ಗೌಡ ಯತ್ನಾಳ್ ಬಿಜೆಪಿ ವರಿಷ್ಠರಬೆಂಬಲ ಗಳಿಸಿಕೊಳ್ಳುವ ಉದ್ದೇಶದಲ್ಲಿಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಬಾಯಿಗೆ ಬಂದಂತೆಮಾತನಾಡಿದ್ದಾರೆ. ಯತ್ನಾಳ್ ಅವರಹೇಳಿಕೆಗಳಿಗೆ ಯುವ ಕಾಂಗ್ರೆಸ್ ಖಂಡಿಸುತ್ತದೆ. ಪದೇ ಪದೇ ತುತ್ಛ ಹೇಳಿಕೆನೀಡುವ ಚಾಳಿ ಮುಂದುವರೆಸಿದರೆಯುವ ಕಾಂಗ್ರೆಸ್ ಅವರ ಮನೆಗೆ ಮುತ್ತಿಗೆ ಹಾಕಲಿದೆ ಎಂದು ಎಚ್ಚರಿಸಿದರು.
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂದ್ಯಾಪವಿತ್ರ, ರಾಜ್ಯಯುವ ಕಾಂಗ್ರೆಸ್ ಕಾರ್ಯದರ್ಶಿಗಳಾದ ಶಶಾಂಕ್ ರೇವಣ್ಣ, ಪ್ರದೀಪ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ನವೀನ್ ಕುಮಾರ್, ಪೃಥ್ವಿಬ್ಯಾಟಪ್ಪ, ಸಾಗರ್, ಆರೀಫ್, ತಾಲೂಕು ಅಧ್ಯಕ್ಷರುಗಳಾದಶರತ್, ಶಿವಕುಮಾರ್, ಪ್ರವೀಣ್, ವಿನಯ್ ಮತ್ತಿತ್ತರರು ಇದ್ದರು.