Advertisement

ಪೆಟ್ರೋಲ್ ದರ ಹೆಚ್ಚಳ: ಜಾಗಟೆ ತಟ್ಟೆ ಬಾರಿಸಿ ವಿನೂತನ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್

01:05 PM Jun 09, 2021 | Team Udayavani |

ಶಿವಮೊಗ್ಗ: ಪೆಟ್ರೋಲ್ ದರ ಶತಕ ಬಾರಿಸಿದ್ದನು ವಿರೋಧಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.

Advertisement

ನಗರದ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಜಾಗಟೆ ತಟ್ಟೆ ಶಂಕ ಬಾರಿಸಿ ಅಣಕು ಸಂಭ್ರಮಾಚರಣೆಯ ಮೂಲಕ ಪ್ರತಿಭಟಿಸಿದರು.

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ತಟ್ಟೆ ಜಾಗಟೆ ಶಂಕಗಳನ್ನು ಬಾರಿಸಿ ಪೆಟ್ರೋಲ್ ಬಂಕಿಗೆ ಬರುವ ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಸಿಹಿ ನೀಡುವ ಮುಖಾಂತರ ಅಣಕು ಸಂಭ್ರಮಾಚರಣೆಯನ್ನು ಆಚರಿಸಲಾಯಿತು.

ಕೂಡಲೇ ರಾಷ್ಟ್ರಪತಿಗಳು ಇಂತಹ ಕೋವಿಡ್ ನಂತಹ ವಿಪತ್ತು  ಪರಿಸ್ಥಿತಿಯಲ್ಲೂ  ಪೆಟ್ರೋಲ್ ದರದಲ್ಲಿ ಶತಕ ಬಾರಿಸಿದ ಸನ್ಮಾನ್ಯ ಪ್ರಧಾನ ಮಂತ್ರಿಗಳಿಗೆ ಯಾವುದಾದರೂ ಭೂಷಣ ಅಥವಾ ಯಾವುದಾದರೂ ಚಕ್ರ ವೀರ ಪ್ರಶಸ್ತಿಗಳನ್ನು ನೀಡಲಿ ಎಂದು ಯುವ ಕಾಂಗ್ರೆಸ್  ಆಗ್ರಹಿಸಿದೆ.

Advertisement

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಪಿ ಗಿರೀಶ್ , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್ , ಮಹಾನಗರ  ಪಾಲಿಕೆ ಸದಸ್ಯರಾದ ಎಚ್.ಸಿ. ಯೋಗೀಶ್, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್ , ಗ್ರಾಮಂತರ ಅಧ್ಯಕ್ಷ ಈಟಿ ನಿತಿನ್ , ದಕ್ಷಿಣ ಬ್ಲಾಕ್ ಯುವ  ಕಾಂಗ್ರೆಸ್ . ಎಸ್ ಕುಮಾರೇಶ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಗಳಾದ ಆರ್ ಕಿರಣ್ , ಟಿವಿ ರಂಜಿತ್, ಪದಾಧಿಕಾರಿಗಳಾದ ಎಂ ರಾಹುಲ್ ಸಂದೀಪ್ ಮೊದಲಿಯಾರ್, ವೆಂಕಟೇಶ್ ಕಲ್ಲೂರು, ಪವನ್, ರಾಕೇಶ್, ವಿ ಶರತ್, ಗೋವಿಂದ ವರ್ಮ, ಪ್ರಜ್ವಲ್, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next