Advertisement

ಯುವ ಕಾಂಗ್ರೆಸ್‌ ಅಧ್ಯಕ್ಷ  ಫ‌ಲಿತಾಂಶ ಜ.29ಕ್ಕೆ

12:49 AM Jan 23, 2021 | Team Udayavani |

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆ ಫ‌ಲಿತಾಂಶ ಜ.29ಕ್ಕೆ ಮುಂದೂಡಲಾಗಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಹಿಂದೆ ಜ. 24ಕ್ಕೆ ಫ‌ಲಿತಾಂಶ ಪ್ರಕಟಿಸುವುದಾಗಿ ಚುನಾವಣಾಧಿಕಾರಿಗಳು ತಿಳಿಸಿದ್ದರು. ಈ ಮಧ್ಯೆ, ಚುನಾವಣೆ ಹಾಗೂ ಮತದಾನ ಪ್ರಕ್ರಿಯೆ ರದ್ದು ಮಾಡಬಹುದು ಅಥವಾ ಒಬ್ಬ ಅಭ್ಯರ್ಥಿಯನ್ನು ಅನರ್ಹ ಮಾಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಆದರೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರ ಪೈಕಿ ಒಬ್ಬರ ವಿರುದ್ಧ ಪ್ರಕರಣಗಳು ಇರುವುದರಿಂದ ಫ‌ಲಿತಾಂಶ  ತಡವಾಗುತ್ತಿದೆ. ಜತೆಗೆ ಚುನಾವಣೆಯಲ್ಲಿ ಅಕ್ರಮಗಳು ನಡೆದಿರುವ ಆರೋಪವೂ ಇರುವುದರಿಂದ ಪರಿಶೀಲಿಸಲಾಗುತ್ತಿದೆ. ರದ್ದು ಸಂಭವ ಕಡಿಮೆ ಎಂದು ಹೇಳಲಾಗಿದೆ.

ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆದರೆ, ಅಕ್ರಮಗಳ ಹಿನ್ನೆಲೆಯಲ್ಲಿ ಇನ್ಮುಂದೆ ಯಾವ ರಾಜ್ಯದಲ್ಲಿಯೂ ಚುನಾವಣೆ ನಡೆಸದಿರುವುದ ತೀರ್ಮಾನಕ್ಕೆ ಎಐಸಿಸಿ ಬಂದಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next