Advertisement

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

10:59 AM Apr 27, 2024 | Team Udayavani |

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಿ.ವಿ.ರಾಮನ್‌ ನಗರದ ಸುದ್ದಗುಂಟೆ ಪಾಳ್ಯದ ಮತಗಟ್ಟೆ ಬಳಿ ಶುಕ್ರವಾರ ಕೇಸರಿ ಟೀ ಶರ್ಟ್‌ ಧರಿಸಿ ಕುಟುಂಬಸ್ಥರೊಂದಿಗೆ ಮತ ಚಲಾಯಿಸಲು ಬಂದಿದ್ದ ಮೋಹನ್‌ ಎಂಬ ಯುವಕನ ಮೇಲೆ ಕೆಲವರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

Advertisement

ಮೋಹನ್‌ ಮತಗಟ್ಟೆಯತ್ತ ಬರುತ್ತಿದ್ದಂತೆ ಕೆಲವರು ಕೇಸರಿ ಶರ್ಟ್‌ ಧರಿಸಿದ್ದ ಹಿನ್ನೆಲೆಯಲ್ಲಿ ಆತನನ್ನು ಮತಗಟ್ಟೆ ಪ್ರವೇಶಿಸದಂತೆ ಆಕ್ಷೇಪಿಸಿ ಹಲ್ಲೆ ಮಾಡಿದ್ದಾರೆ. ನಂತರ ಈ ವಿಚಾರವಾಗಿ, ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಎಂಎಲ್‌ಸಿ ನಾರಾಯಾಣಸ್ವಾಮಿ ಸ್ಥಳಕ್ಕೆ ಬಂದು ಮತದಾನ ನಿಲ್ಲಿಸುವುದಾಗಿ ಕೂಗಾಡಿದ ಪ್ರಸಂಗವೂ ನಡೆಯಿತು. ಕೇಸರಿ ಶರ್ಟ್‌ ಹಾಕಿದಕ್ಕೆ ಗಲಾಟೆ ಮಾಡುತ್ತಿದ್ದಾರೆ ಎಂದು ಬಿಜೆಪಿಯವರು ಆರೋಪಿಸಿದರೆ, ಬಿಜೆಪಿಗೆ ಮತ ಹಾಕಲು ಒತ್ತಾಯಿಸುತ್ತಿದ್ದಾರೆಂದು ಕಾಂಗ್ರೆಸ್‌ ಕಾರ್ಯಕರ್ತರು ಪ್ರತ್ಯಾರೋಪ ಮಾಡಿದರು.

ಕೂಡಲೇ ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಇಬ್ಬರ ಜಗಳ ಬಿಡಿಸಿ ಪರಿಸ್ಥಿತಿ ನಿಯಂತ್ರಿಸಿದರು. ಪ್ರಕರಣದ ಬಗ್ಗೆ ಮಾಹಿತಿ ಪಡೆದು ಪೂರ್ವ ವಿಭಾಗದ ಡಿಸಿಪಿ ಕುಲದೀಪ್‌ ಕುಮಾರ್‌ ಜೈನ್‌ ಆಗಮಿಸಿ ಕಾಂಗ್ರೆಸ್‌ ಕಾರ್ಯಕರ್ತರ ಮನವೊಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next