Advertisement

ಜಾತಕ ಕುಂಡಲಿಯಲ್ಲಿ ನಿಮ್ಮ ಮಾತಿನ ನೈಪುಣ್ಯತೆ ಕಾಣುತ್ತದೆ

11:39 AM Jul 15, 2017 | |

ಮಾತಿನ ಸ್ಥಾನದ ಹಿರಿತನ ತಾಯಿ ಶ್ರೀ ಸರಸ್ವತಿಯದ್ದು. ಆದರೆ ದುರ್ದೈವವಶಾತ್‌ ಈ ಮಾತಿನ ಸ್ಥಾನವಾದ ಎರಡನೇ ಮನೆಗೆ ಜಾತಕ ಕುಂಡಲಿಯಲ್ಲಿ ಸರಿಯಾದ ಶುಭಗ್ರಹಗಳ ಅನುಪಮ ಸುಹಾಸಕರೆತೆ ಸಿಗದಿರುವುದು, ದುಷ್ಟಗ್ರಹಗಳು ತಮ್ಮ ಅಧಿಪತ್ಯವನ್ನು ತಮ್ಮ ಮಾತಿನ ವಿಷಯವಾಗಿ ಹೊಂದಿರುವುದು ದುಷ್ಟಗ್ರಹಗಳ ಸಂಸರ್ಗ ದೃಷ್ಟಿಗಳಿಂದ ಮಾತಿನ ಮನೆ, ಮಾತಿನ ಮನೆಯ ಅಧಿಪತಿ ಭ್ರಷ್ಟಗೊಳ್ಳುವುದು ಸಾಮಾನ್ಯ. ಆದರೆ ಎಲ್ಲವೂ ಒಳಿತೆನಿಸಿವ ಮಟ್ಟದಲ್ಲಿದ್ದಾಗ ಮಾತು 
ಒಬ್ಬನಿಗೆ ವರವಾಗಿ ಪರಿಣಮಿಸುತ್ತದೆ.

Advertisement

ಭಾರತೀಯ ಜೋತಿಷ್ಯದಲ್ಲಿ ಒಬ್ಬ ವ್ಯಕ್ತಿಯ ಜನ್ಮಕುಂಡಲಿಯ ಮೇಲಿಂದ ಆ ವ್ಯಕ್ತಿಯ ಮಾತಿನ ವೈಖರಿಯನ್ನು ಮಾತಿನಿಂದಾಗಿ ತನ್ನ ಜೀವನದ ಯಶಸ್ಸು ಅಥವಾ ಅಪಯಶಸ್ಸನ್ನು ನಿಷ್ಕರ್ಷೆ ಮಾಡಬಹುದು. ಮಾತು ಮಾಣಿಕ್ಯ, ಮಾತೇ ಸಕಲ ಸಂಪದಕ್ಕೆ ದಾರಿ ಎಂದು ತಿಳಿದವರು ಹೇಳುತ್ತಾರೆ. ಬಸವಣ್ಣನವರು ಕೂಡಾ ತಮ್ಮ ವಚನದಲ್ಲಿ ಮಾತಿನ ವೈಶಿಷ್ಟ್ಯವನ್ನು ಬಣ್ಣಿಸುತ್ತಾ ಮಾತು ಮುತ್ತಿನ ಹಾರದಂತಿರಬೇಕು ಎನ್ನುತ್ತಾರೆ. ಮಾತು ಸ್ಫಟಿಕದ ಶಲಾಕೆಯಂತೆ ಮನೋಹರವಾಗಿರಬೇಕು ಎಂದು ಹೇಳುತ್ತಾರೆ. ಮಾತಿನ ಸೊಗಸು ಕಲ್ಲಾಗಿರುವ ಲಿಂಗ ಕೂಡಾ ಅಹುದಹುದು ಎನ್ನಬೇಕು ಎನ್ನುತ್ತಾರೆ.

ಇದೆಲ್ಲ ಸರಿ, ಆದರೆ ಬಲ್ಲವರು ಮಾತೇ ಜೋತಿರ್ಲಿಂಗ ಎಂದು ಹೇಳುವುದು ಒಂದೆಡೆಯಾದರೆ, ಮಾತು ಬೆಳ್ಳಿ ಮೌನ ಬಂಗಾರ ಎಂಬ ಬಲ್ಲವರ ಇನ್ನೊಂದು ಅಭಿಪ್ರಾಯ ಕೂಡಾ ಮಾತಿನ ಬಗೆಗಾಗಿ ಇದೆ. ಒಟ್ಟಿನಲ್ಲಿ ತಿಳಿದವರ ಮಾತುಗಳು ಮಾತಿನ ಬಗೆಗೆ ಹೀಗೆಲ್ಲ ಬಂತೆಂಬುದು ಒಂದೆಡೆಯಾದರೆ, ಜಾನಪದರು ಮಾತಿನ ಬಗೆಗೆ ಹೇಳುವ ಇನ್ನೊಂದು ನಾಣ್ನುಡಿ ಅದ್ಭುತವಾಗಿದೆ. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು. ನಿಜ ಒಂದೇ ಒಂದು ಮಾತಿನಿಂದ ಮನೆತನಕ್ಕೆ ಮನೆತನವೇ ತಾಪತ್ರಯಕ್ಕೆ ಬೀಳುವ ಜತೆ ಕುಟುಂಬದ ಒಬ್ಬ ವ್ಯಕ್ತಿಯ ಮಾತಿನಿಂದ ಮನೆ ಇಬ್ಭಾಗವಾಗಿ, ಕುಟುಂಬದ ಮಂದಿ ಎಲ್ಲ ಬೇರಾಗುವ ದುರಂತವನ್ನುನಾವು ಕಂಡಿದ್ದೇವೆ.

ಜನ್ಮ ಕುಂಡಲಿಯಲ್ಲಿ ಎರಡನೇ ಮನೆ ಮಾತಿನ ಮನೆ ಜನ್ಮ ಕುಂಡಲಿಯಲ್ಲಿ ಎರಡನೇ ಮನೆ ಮಾತನ್ನು ಆ ವ್ಯಕ್ತಿಯ ಕುರಿತಾಗಿ ಪ್ರತಿಫ‌ಲಿಸುತ್ತದೆ. ಇದು ಕುಂಡಲಿಯಲ್ಲಿ ಮಾರಕ ಸ್ಥಾನವೂ ಹೌದು. ಈ ಮನೆಯ ಅಧಿಪತಿ ಮಾರಕನೂ ಆಗಿರುತ್ತಾನೆ. ಎರಡನೇ ಮನೆಯಲ್ಲಿರುವ ಗ್ರಹ ಕೂಡಾ ಮಾರಕ ಅಂಶಗಳನ್ನು ಪಡೆದುಬಿಡುತ್ತಾನೆ. ಎರಡನೇ ಮನೆಯ ಅಧಿಪತ್ಯವಾಗಲೀ, ಎರಡನೇ ಮನೆಯಲ್ಲಿರುವ ಗ್ರಹವೇ ಇರಲಿ, ಶುಭ ಗ್ರಹಗಳಾದರೂ ತಮ್ಮ ಅಂತರಂಗದಲ್ಲಿ ಮಾರಕ ಸ್ಪಂದನಗಳನ್ನು ಹೊಂದಿರುತ್ತವೆ.  ಹೀಗಾಗಿ ಮೇಧಾ ಶಕ್ತಿ ಮತ್ತು ಪ್ರಸಂಗಾವಧಾನಗಳು ಮಾತಿನ ವಿಷಯದಲ್ಲಿ ಈ ಗ್ರಹಗಳ ಮೂಲಕ ವ್ಯಕ್ತಿಯೊಬ್ಬನಿಗೆ ಅವರ ಜಾತಕದಲ್ಲಿ ಒದಗಿಬಂದರೆ ಮಾತುಗಳು ಬಂಗಾರವಾಗುತ್ತವೆ. 

ಅತಿಯಾದ ಮಾತು ಅಪಾಯಕಾರಿಯಾದದ್ದು. ಪೂರ್ತಿ ಮಾತನಾಡಲು ಬಾರದೆ ಚಡಪಡಿಸುವ ಮಾತೇ ಯುಕ್ತ ಸಂದರ್ಭದಲ್ಲಿ ಹೊರಡದೆ ಮೂಕವಾಗಿ ಮಹತ್ವದ್ದೊಂದು ಚರ್ಚೆ ಹಾಗೂ ಕಾಗದ ಪತ್ರಗಳ ಒಡಂಬಡಿಕೆಯ ಸಂದರ್ಭದಲ್ಲಿ ಕಳೆದುಕೊಳ್ಳುವ ಆಮೇಲೆ ಹಳಹಳಿಸುವ ದುರ್ಭರ ಸ್ಥಿತಿಗೆ ಸಿಲುಕಿಕೊಳ್ಳುವುದೂ ತಪ್ಪು. 

Advertisement

ಮಾತಿನ ಸ್ಥಾನದ ಹಿರಿತನ ತಾಯಿ ಶ್ರೀ ಸರಸ್ವತಿಯದ್ದು. ಆದರೆ ದುರ್ದೈವವಶಾತ್‌ ಈ ಮಾತಿನ ಸ್ಥಾನವಾದ ಎರಡನೇ ಮನೆಗೆ ಜಾತಕ ಕುಂಡಲಿಯಲ್ಲಿ ಸರಿಯಾದ ಶುಭಗ್ರಹಗಳೊಂದಿಗೆ ಹೊಂದಾಣಿಕೆ ಯಾಗದಿರುವುದು, ದುಷ್ಟಗ್ರಹಗಳು ತಮ್ಮ ಅಧಿಪತ್ಯವನ್ನು ತಮ್ಮ ಮಾತಿನ ವಿಷಯವಾಗಿ ಹೊಂದಿರುವುದು ದುಷ್ಟಗ್ರಹಗಳ ಸಂಸರ್ಗ ದೃಷ್ಟಿಗಳಿಂದ ಮಾತಿನ ಮನೆ, ಮಾತಿನ ಮನೆಯ ಅಧಿಪತಿ ಭ್ರಷ್ಟಗೊಳ್ಳುವುದು ಸಾಮಾನ್ಯ. ಆದರೆ ಎಲ್ಲವೂ ಒಳಿತೆನಿಸಿವ ಮಟ್ಟದಲ್ಲಿದ್ದಾಗ ಮಾತು ಒಬ್ಬನಿಗೆ ವರವಾಗಿ ಪರಿಣಮಿಸುತ್ತದೆ.

ಆಡಿದ್ದು ಮಾಡಲಾಗದೆ ಸೋತ ಜುಲ್ಫಿಕರ್‌ ಭುಟ್ಟೋ
ಭುಟ್ಟೋ ಕುಟುಂಬ ಯಾರಿಗೆ ತಾನೆ ತಿಳಿದಿಲ್ಲ? ಭಾರತೀಯರಿಗಂತೂ ಭುಟ್ಟೋ ಒಂದರ್ಥದಲ್ಲಿ ಆಪ್ತರ ಸಾಲಿಗೆ ಸೇರುವ ಹಾಗೆ ಕಂಡರೂ ಭಾರತದೊಂದಿಗಿನ ದ್ವೇಷವನ್ನು ಪ್ರತಿಪಾದಿಸುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡ ಕುಟುಂಬವಾಗಿ, ಕಾರಣವಲ್ಲದ ಕಾರಣಕ್ಕೆ ಹುತಾತ್ಮರಾಗುವ ಸ್ಥಿತಿ ಕಂಡು ಕನಿಕರ ಸಿಟ್ಟು ಭಾರತೀಯರಿಂದ ಪಡೆಯುವ ವಿಪರ್ಯಾಸ ಹೊಂದಿದ ಕುಟುಂಬ. ಭಾರತೀಯರನ್ನು ವಿಶ್ವಸಂಸ್ಥೆಯ ತನ್ನ ಭಾಷಣದಲ್ಲಿ ನಾಯಿಗಳು ಎಂದು ಕರೆದ ವ್ಯಕ್ತಿ ಜುಲ್ಫಿಕರ್‌ ಆಲಿ ಭುಟ್ಟೋ. ಭಾರತೀಯರ ವಿರುದ್ಧ ಧರ್ಮಯುದ್ಧ ಸಾರಿ 1971ರಲ್ಲಿ ನಡೆದ ಯುದ್ಧದಲ್ಲಿ ಸೋತು ಸುಣ್ಣಾಗಿ ಲಕ್ಷಕ್ಕೂ ಮೀರಿ ಸೆರೆಸಿಕ್ಕ ತನ್ನ ಯೋಧರನ್ನು ಬಿಡುಗಡೆ ಮಾಡಿ ಎಂದು ಅಂಗಲಾಚಿದ ವ್ಯಕ್ತಿ.

ಜಾತಕದಲ್ಲಿ ಕರ್ಕಾಟಕ ರಾಶಿ ಇವರ ಮಾತಿನ ಮನೆ. ಇದರ ಅಧಿಪತಿಗೆ ರಾಹುದೋಷ ಬೇರೆ. ಯುಕ್ತವಲ್ಲದ ಸ್ಥಾನದಲ್ಲಿ ಚಂದ್ರ ದುರ್ಬಲಾತಿ ದುರ್ಬಲ. ಮೇಲಿಂದ ಚಂದ್ರನಿಗೆ ದುರ್ದೈವದಿಂದ ಹತ್ತಿದ ಕೇಮದ್ರುಮದಂಥ ಕೆಟ್ಟ ಯೋಗ ದುಷ್ಟರಾದ ಶನಿ ಕೇತು ಕುಜರ ದೃಷ್ಟಿಯ ಪ್ರಭಾವ ಕೂಡಾ ಚಂದ್ರನ ಮೇಲೆ.  

ಮನೋಹರತೆಯನ್ನು ಮಾತಿಗೆ ಕಲ್ಪಿಸಿಕೊಡಬೇಕಾದ ಚಂದ್ರ ನಷ್ಟದ ಮನೆಯಲ್ಲಿ ಸ್ಥಿತನಾಗಿ ದುಷ್ಟರ ಪ್ರಭಾವದಿಂದ ಮಾತಿಗೂ, ನಡವಳಿಕೆಗೂ ಹೊಂದಾಣಿಕೆ ಇರದೆ ಭುಟ್ಟೋ ಪರದಾಡಿದ್ದು ಅತಿಂಥ ರೀತಿಯಲ್ಲಲ್ಲ. ಮರಣಾಧಿಪತಿಯಾದ ಶನೈಶ್ಚರನ ಮುಖ್ಯ ದಶಾಕಾಲವೂ ಚಂದ್ರನ ಭುಕ್ತಿಯೂ ಇದ್ದಾಗ ಇದೇ ಚಂದ್ರನ ಸಕಾರಾತ್ಮಕವಲ್ಲದ ಸ್ಪಂದನಗಳು ಶನೈಶ್ಚರನು ಸೂಚಿಸುವ ಸೆರೆಮನೆಯ ಗೋಳು ಇತ್ಯಾದಿ ಸೇರಿ ಆಕಾಲದ ಸರ್ವಾಧಿಕಾರಿ ಪಾಕಿಸ್ತಾನದ ಜಿಯಾ ಉಲ್‌ ಹಕ್‌ರಿಂದ ನೇಳುಗಂಬ ಏರಿದ್ದು ಭುಟ್ಟೋ ಸ್ಥಿತಿಯಾಯ್ತು. ಭುಟ್ಟೋ ಆಡಿದ ಕೊನೆಯ ಮಾತು ನಾನು ನಿಷ್ಪಾಪಿ ಮುಗ್ಧ ಎಂದು. ಜಿಯಾ ವೈಯುಕ್ತಿಕವಾಗಿ ಆಡಿದ ಖಾಸಗಿ ಸ್ವರೂಪದ ಭುಟ್ಟೋ ಮಾತುಗಳಿಂದ ಅಪಮಾನಕ್ಕೊಳಗಾಗಿ ಭುಟ್ಟೋ ಎಂದರೆ ವ್ಯಾಗ್ರರಾಗುತ್ತಿದ್ದರು ಎಂಬ ವದಂತಿಯೂ ಇದೆ. ಇದು ಹೌದಾದರೆ ಮಾತು ಒಬ್ಬ ವ್ಯಕ್ತಿಯ 
ಜೀವನ್ಮರಣದ ಪರಿಸ್ಥಿತಿಯಲ್ಲಿ ಎಷ್ಟು ಮುಖ್ಯ ಎಂಬುದನ್ನು ಸಾರುತ್ತದೆ. 

ಮಾತಿನ ಮಲ್ಲ ಚರ್ಚಿಲ್‌
ಭಾರತೀಯರಿಗೆ ಸ್ವಾತಂತ್ರ್ಯ ನೀಡಿದರೆ ಅದು ಸ್ವಾರ್ಥ, ರಕ್ತ ಹೀರುವ ಲಂಪಟರ ಕೈಗೆ ಸಿಕ್ಕಿ ದೇಶ ನರಳುವಂತಾಗುತ್ತದೆ ಎಂದು ಚರ್ಚಿಲ್‌ ಗುಡುಗಿ ತನ್ನ ದೇಶದ ಸಂಸತ್ತಿನಲ್ಲಿ ಭಾರತದ ಸ್ವಾತಂತ್ರ್ಯದ ವಿಚಾರದಲ್ಲಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದರು. ಭಾರತೀಯರಿಗಿದು ಕಾದಸೀಸದಂತಿದ್ದರೂ ಇಂದಿನ ಪರಿಸ್ಥಿತಿ ಗಮನಿಸಿದಾಗ ಚರ್ಚಿಲ್‌ ಮಾತು ಸತ್ಯವಾಯ್ತಲ್ಲ ಎಂದು ಅನಿಸದಿರದು. 
ಹಿಟ್ಲರ್‌ ದಾಳಿಯಿಂದ ಬ್ರಿಟನ್‌ ತತ್ತರಿಸಿ ಕಂಗಾಲಾದರೂ, ಪ್ರಧಾನಿಯಾಗಿ ದೇಶದ ಜನರಲ್ಲಿ ಸೋಲುತ್ತಿರುವುದು ದೇಶ ಬ್ರಿಟನ್‌ ಅಲ್ಲ ಎಂದು  ದೈರ್ಯ ಹಾಗೂ ಆತ್ಮವಿಶ್ವಾಸವನ್ನು ತನ್ನ ವಾಕ್‌ ಶಕ್ತಿಯಿಂದ ಸದಾ ತುಂಬುತ್ತಲೇ ಇದ್ದ. ಭರವಸೆ ಕೊಡುತ್ತಿದ್ದ. ಚರ್ಚಿಲ್‌ ಬಗ್ಗೆ ಜನಕ್ಕೆ ವಿಶ್ವಾಸವಿತ್ತು. ಅವನ ಮಾತಿನ ಶಕ್ತಿ ಅದು. ನಿಜ, ಚರ್ಚಿಲ್‌ ಮಾತು ಉಳಿಸಿಕೊಂಡಿದ್ದ. ಶುಭ ಗ್ರಹಗಳಾದ ಗುರು, ಶುಕ್ರ ಹಾಗೂ ಬುಧ ಗ್ರಹಗಳ ಶಕ್ತಿ ಮಾತಿನ ಮಂಟಪದಲ್ಲಿ ಚರ್ಚಿಲ್‌ ಅದ್ಭುತನೆನಿಸಲು ಅವಕಾಶ ನೀಡಿದವು. ಕೇತುದೋಷ ಕೆಲವೊಮ್ಮೆ ಮಾತಿನಲ್ಲಿ ಉಗ್ಗು ತರುತ್ತಿತ್ತು.  ಬಾಲ್ಯದಲ್ಲಿನ ತಂದೆತಾಯಿಗಳ ಆರೈಕೆಯ ಕೊರತೆ ಹಾಗೂ ಕೇತುದೋಷ ಈ ಉಗ್ಗನ್ನು ಆಗಾಗ ಕಾಡುತ್ತಿತ್ತು. 

ಅನಂತಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next