Advertisement

ನಿಮ್ಮ ಮೆಚ್ಚಿನ ವಾಹಿನಿಗಳು ನಿಮ್ಮ ಕೈ ತಪ್ಪಲ್ಲ

06:25 AM Dec 29, 2018 | |

ಭಾರತೀಯ ಡಿಟಿಎಚ್‌ ಗ್ರಾಹಕರ ಹಿತದೃಷ್ಟಿಯಿಂದ ಭಾರತೀಯ ದೂರ ಸಂಪರ್ಕ ಪ್ರಾಧಿಕಾರ (ಟ್ರಾಯ್‌) ರೂಪಿಸಿರುವ ಹೊಸ ಶುಲ್ಕ ಪದ್ಧತಿ ಇಂದಿನಿಂದ (ಡಿ.29) ಜಾರಿಗೊಳ್ಳಲಿದೆ. ಈ ಪದ್ಧತಿ ಬಗ್ಗೆ ಹಲವಾರು ಡಿಟಿಎಚ್‌ ಸಂಸ್ಥೆಗಳು ಅಸಮಾಧಾನ ಹೊಂದಿರುವ ಹಿನ್ನೆಲೆಯಲ್ಲಿ ತಾವು ವೀಕ್ಷಿಸುವ ಚಾನೆಲ್‌ಗ‌ಳು ಇಂದಿನಿಂದ ವೀಕ್ಷಣೆಗೆ ಲಭ್ಯವಾಗುವುದಿಲ್ಲ ಎಂಬ ಭೀತಿ ಅನೇಕ ಗ್ರಾಹಕರನ್ನು ಕಾಡುತ್ತಿದೆ. ಜತೆಗೆ, ತಾವು ನೋಡಬಯಸುವ ಚಾನೆಲ್‌ಗ‌ಳ ಪ್ರಸಾರ ಮುಂದುವರಿಯುವಂತೆ ಮಾಡುವುದು ಹೇಗೆಂಬುದು ಗ್ರಾಹಕರ ಪ್ರಶ್ನೆಯಾಗಿದೆ. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

Advertisement

* ಇಂದಿನಿಂದ ಮೆಚ್ಚಿನ ಟಿವಿ ವಾಹಿನಿಗಳ ಪ್ರಸಾರ ನಿಲುಗಡೆಯಾಗುತ್ತದೆಯೇ? 
ಇಲ್ಲ. ಟ್ರಾಯ್‌ ಆದೇಶದ ಪ್ರಕಾರ ಇಂದಿನಿಂದ ಹೊಸ ಶುಲ್ಕ ವ್ಯವಸ್ಥೆ ಜಾರಿಯಾದ ನಂತರವೂ ಗ್ರಾಹಕರ ಅಚ್ಚುಮೆಚ್ಚಿನ ಟಿವಿ ವಾಹಿನಿಗಳು ಎಂದಿನಂತೆ ಲಭ್ಯವಾಗಲಿವೆ. ಇದರಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. 

* ತಮ್ಮ ಆಯ್ಕೆಯ ಚಾನೆಲ್‌ಗ‌ಳನ್ನು ಉಳಿಸಿಕೊಳ್ಳಲು ಗ್ರಾಹಕರೇನು ಮಾಡಬೇಕು? 
ಗ್ರಾಹಕರು ಮೊದಲಿಗೆ ತಮ್ಮ ಬೇಸಿಕ್‌ ಶುಲ್ಕದ ರೂಪದಲ್ಲಿ 130+ ತೆರಿಗೆ ಕಟ್ಟಬೇಕು. ಇದು ಫ್ರೀ-ಟು-ಏರ್‌ ಮಾದರಿಯ 100 ಚಾನೆಲ್‌ಗ‌ಳನ್ನು ನೀಡಲು ಅನುಕೂಲವಾಗುತ್ತದೆ. ಪಾವತಿ ಮಾದರಿಯ ಚಾನೆಲ್‌ಗ‌ಳು ಬೇಕಾದಲ್ಲಿ ಕೇಬಲ್‌ ಆಪರೇಟರ್‌ಗಳಿಂದ ವಾಹಿನಿಗಳ ನೂತನ ದರ ಪಟ್ಟಿ ಪಡೆದು, ಅದರಲ್ಲಿ ತಮಗೆ ಬೇಕಾದ ವಾಹಿನಿಗಳ ಆಯ್ಕೆ ಮಾಡಿಕೊಳ್ಳಬಹುದು. 

* ಪಾವತಿ ವಾಹಿನಿಗಳ ಶುಲ್ಕ ಹೇಗೆ? 
ಗ್ರಾಹಕರು ಫ್ರೀ-ಟು-ಏರ್‌ ಮಾದರಿಯ ಚಾನೆಲ್‌ಗ‌ಳಿಗಾಗಿ 130 ರೂ. ಮತ್ತು ತೆರಿಗೆು ಪಾವತಿಸಬೇಕು. ಇದು ಬೇಸಿಕ್‌. ಇದರ ಜತೆಗೆ, ತಮಗೆ ಬೇಕಾದ ವಾಹಿನಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎರಡು ಆಯ್ಕೆಗಳು ನಿಮ್ಮ ಮುಂದಿರುತ್ತೆ. ಉದಾಹರಣೆಗೆ, ಸ್ಟಾರ್‌ ಸಮೂಹವು ತನ್ನ 13 ಚಾನೆಲ್‌ಗ‌ಳ ಬಂಡಲ್‌ಗೆ 49 ರೂ.ಗಳ ಮಾಸಿಕ ದರ ನಿಗದಿಗೊಳಿಸಲು ತೀರ್ಮಾನಿಸಿದೆ. ಈ ಎರಡೂ ಪ್ಯಾಕ್‌ಗಳನ್ನು ಆರಿಸಿಕೊಳ್ಳಬಯಸುವವರು 130+49+20 (ನೆಟ್‌ವರ್ಕ್‌ ಶುಲ್ಕ) = 199+ತೆರಿಗೆಯನ್ನು ಶುಲ್ಕದ ರೂಪದಲ್ಲಿ ಕಟ್ಟಬೇಕಿದೆ. ಪ್ರೀಮಿಯಂ ಪ್ಯಾಕ್‌ಗಳಾದ ಕ್ರೀಡೆ ಮತ್ತು ಮೂವೀಸ್‌ನಂಥ ಪ್ಯಾಕ್‌ಗಳಿಗೆ ಪ್ರತ್ಯೇಕ ಶುಲ್ಕವಿರುತ್ತದೆ. 

* ಚಾನೆಲ್‌ಗ‌ಳ ಗುತ್ಛದಲ್ಲಿರುವ ವಾಹಿನಿಗಳಲ್ಲಿ ನಮಗಿಷ್ಟವಾದವನ್ನೇ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆಯೇ?
ಇದೆ. ಇದಕ್ಕಾಗಿ “ಲಾ ಡಿ ಕಾರ್ಟೆ’ (ಆಯ್ಕೆ ಮಾಡಿ-ಹಣ ನೀಡಿ ಮಾದರಿ) ವಾಹಿನಿಗಳ ಪಟ್ಟಿಯನ್ನು ಗ್ರಾಹಕರು ನೋಡಬೇಕು. ಈ ಪಟ್ಟಿಯಲ್ಲಿ ವಿವಿಧ ಬ್ರಾಡ್‌ಕಾಸ್ಟ್‌ ಕಂಪನಿಗಳ ಬಂಡಲ್‌ಗ‌ಳಲ್ಲಿರುವ ವಾಹಿನಿಗಳ ದರವನ್ನು ಪ್ರತ್ಯೇಕವಾಗಿ ನೀಡಲಾಗಿರುತ್ತದೆ. ಅದರಲ್ಲಿ ನಿಮಗೆ ಬೇಕಾದ ವಾಹಿನಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

Advertisement

* ಲಾ ಡಿ ಕಾರ್ಟೆಯಲ್ಲಿ ಆಯ್ಕೆ ಮಾಡಿಕೊಳ್ಳುವ ವಾಹಿನಿಗಳಿಗೆ ಶುಲ್ಕ ಹೇಗೆ? 
ಲಾ ಡಿ ಕಾರ್ಟೆ ಪಟ್ಟಿಯಿಂದ ನೀವು ಆಯ್ಕೆ ಮಾಡಿಕೊಳ್ಳುವ ಪ್ರತಿ 25 ಚಾನೆಲ್‌ಗ‌ಳಿಗೆ 20 ರೂ. ಮಾಸಿಕ ಶುಲ್ಕವಿರುತ್ತದೆ. 50 ಆಯ್ಕೆ ಮಾಡಿದರೆ, 25+25 ಚಾನೆಲ್‌ಗ‌ಳೆಂದು ಪ್ರತ್ಯೇಕ ಲೆಕ್ಕ ತೆಗೆದುಕೊಂಡು 40 ರೂ. ಶುಲ್ಕ ವಿಧಿಸಲಾಗುತ್ತದೆ. ಒಂದೊಮ್ಮೆ ಗ್ರಾಹಕರು 25 ಚಾನೆಲ್‌ಗ‌ಳ ಬದಲಿಗೆ ಕೇವಲ 5 ಅಥವಾ 10 ಚಾನೆಲ್‌ಗ‌ಳನ್ನು ಆಯ್ಕೆ ಮಾಡಿಕೊಂಡರೂ ಹೆಚ್ಚುವರಿ ಶುಲ್ಕ 20 ರೂ.ಗಳನ್ನೇ ತೆರಬೇಕಿರುತ್ತದೆ. 

ಟ್ರಾಯ್‌ ಕಾಲಾವಕಾಶ: ಈ ನಡುವೆ, ಪ್ರತಿಯೊಬ್ಬ ಗ್ರಾಹಕರು ತಮ್ಮ ಆಯ್ಕೆಯ ವಾಹಿನಿಗಳ ಪಟ್ಟಿಯನ್ನು ಸಂಬಂಧಪಟ್ಟ ಕೇಬಲ್‌ ಟಿವಿ ಆಪರೇಟರ್‌ಗಳಿಗೆ ಅಥವಾ ಡಿಟಿಎಚ್‌ ಸಂಸ್ಥೆಗಳಿಗೆ ಜ. 31ರೊಳಗೆ ಸಲ್ಲಿಸಲು ಟ್ರಾಯ್‌ ಕಾಲಾವಕಾಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next