Advertisement

ನಿಮ್ಮ ಆಯುರಾರೋಗ್ಯ ಸಂಪತ್ತು ಮತ್ತು ಜನ್ಮ ಕುಂಡಲಿ

02:41 PM Jan 14, 2017 | |

ನಮ್ಮ ಭಾರತೀಯ  ಆರ್ಷೇಯ ಪದ್ಧತಿ ಯಾವಾಗಲೂ ಆಯಸ್ಸು ಆರೋಗ್ಯ ಹಾಗೂ ಸಂಪತ್ತುಗಳ ಬಗ್ಗೆ ಒಂದು ರೀತಿಯ ಒತ್ತುಕೊಟ್ಟು ಹಿರಿಯರಿಂದ ಗುರುಗಳಿಂದ ಆಶೀರ್ವಾದಗಳನ್ನು ಪಡೆಯಲು ಜನರನ್ನು ಪ್ರೇರೇಪಿಸುತ್ತದೆ. ನಮ್ಮ ಮಂಗಳ ಶ್ಲೋಕಗಳು ರಾಜ ಮಹಾರಾಜರುಗಳ ಪ್ರಜೆಗಳ ಪರಿಪಾಲನೆಯನ್ನು ನ್ಯಾಯಮಾರ್ಗದಲ್ಲಿ ಪರಿಪಾಲಿಸಬೇಕು ಎಂಬುದನ್ನು ಅಪೇಕ್ಷಿಸುತ್ತದೆ. ಆಡಳಿತ ವರ್ಗದ ನ್ಯಾಯದ ಕಡೆ ಸಂಪನ್ನವಾಗಿದ್ದರೆ ಲೋಕದ ಜನರೆಲ್ಲ ಸುಖವಾಗಿರಲು ಅವಕಾಶ ತೆರೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಡುತ್ತದೆ.  ಆಯಸ್ಸು, ಆಯುರಾರೋಗ್ಯ ಸಂಪತ್ತು ಒಗ್ಗೂಡಿಯೇ ಹೊಂದಿದವರಾದರೆ ಸುಖಕ್ಕೆ ಶಕ್ತಿ ಪಡೆಯಲು ಅವಕಾಶ ಲಭಿಸುತ್ತದೆ. ಹಾಗಾದರೆ ಜಾತಕ ಕುಂಡಲಿಯಲ್ಲಿ ಆಯಸ್ಸು, ಆರೋಗ್ಯ ಸಂಪತ್ತುಗಳು ಪರಿಪೂರ್ಣ ಪ್ರಮಾಣದಲ್ಲಿ ಒದಗಿ ಬರಲು ಅವರವರ ಕರ್ಮ ಅವಕಾಶ ಕೊಡುತ್ತದೆಯೇ? ನಿಜ ಒಂದು ಕುಂಡಲಿಯ ಶಕ್ತಿ ಒಬ್ಬ ವ್ಯಕ್ತಿಗೆ ಆಯಸ್ಸು, ಆರೋಗ್ಯ ಸಂಪತ್ತು ಇತ್ಯಾದಿಗಳನ್ನು ನಿರಾತಂಕವಾಗಿ ಒದಗಿ ಬರುವಂತೆ ಸಮತೋಲನ ಪಡೆದಿರುವುದು ಕಷ್ಟ. ಹಾಗಾದರೆ ಯಾಕೆ ಕಷ್ಟ? ಕಷ್ಟಗಳನ್ನು ನಿಯಂತ್ರಿಸಬಹುದೇ?

Advertisement

ಒಂದು ಜಾತಕ ಕುಂಡಲಿ ಮತ್ತು ಹನ್ನೆರಡು ಮನೆಗಳು
 ತಾಯಿಯ ಗರ್ಭದಿಂದ ಹೊರಬಂದ ಮೇಲಿಂದ ಲಗ್ನಭಾವ ಎನ್ನುವುದು ನಿರ್ಧಾರವಾಗುತ್ತದೆ. ಲಗ್ನಭಾವದ ಮೇಲಿಂದಲೇ ಆಯಸ್ಸು-ಆರೋಗ್ಯ ಸಂಪತ್ತು ವಿದ್ಯೆ, ವಿನಯ ಭಾಗ್ಯ ಸುಖ ಲಾಭ, ರೋಗ, ರುಜಿನ, ಕಷ್ಟ ಕಾರ್ಪಣ್ಯಗಳು, ದಾಂಪತ್ಯ ಸಾಫ‌ಲ್ಯ ಮಕ್ಕಳು ಸದ್ಗತಿಗಳೆಲ್ಲ ನಿರ್ಣಯವಾಗಬೇಕು. ಈ ಎಲ್ಲಾ ನಿರ್ಣಯಗಳನ್ನೂ ಗ್ರಹಗಳ ಶಕ್ತಿ, ಗ್ರಹಗಳ ಯೋಗ ದಯಪಾಲಿಸುವ ಪ್ರಯತ್ನಗಳು ವ್ಯಕ್ತಿಯ ರೂಪ ಮಾತು ವಿನಯ ಚಾತುರ್ಯಗಳನ್ನು ನಿರ್ಧರಿಸಿ ಗೆಲುವಿಗೋ, ಸೋಲಿಗೋ ತಳ್ಳುತ್ತದೆ. ರೂಪವೇ ಗೆಲುವಿಗೆ ಕಾರಣವಾಗಬಹುದು. ದುರ್ಗತಿಗಳಿಗೆ ದಾರಿ ಮಾಡಿಕೊಡಬಹುದು. ಆದರೆ ಸಾಮಾನ್ಯವಾಗಿ ವಿದ್ಯೆ ಹಾಗೂ ವಿನಯಗಳು ಒಬ್ಬ ವ್ಯಕ್ತಿಯನ್ನು ಗೆಲ್ಲಿಸಲು ಸಾಧ್ಯ ಎಂಬುದಾಗಿ ಇಡೀ ಜಗತ್ತು ಅರಿತಿದೆ. ಭಾರತೀಯರಂತೂ ಇದನ್ನು ಲಾಗಾಯ್ತಿನಿಂದ ನಂಬಿದ್ದಾರೆ. ವಿದ್ಯಾ ದದಾತಿ ವಿನಯಂ ಎಂಬ ಮಾತು ನಮ್ಮ ನಂಬಿಕೆ. ನಮ್ಮ ಭಾರತೀಯರು ಶ್ರೇಷ್ಠತೆಯನ್ನು ಮಾನವೀಯತೆ ಮೆರೆದು ಪಡೆಯಲು ಯತ್ನಿಸುತ್ತಾರೆ ಎಂಬುದು ಸ್ಪಷ್ಟ. ಆದರೆ ಜಾತಕ ಕುಂಡಲಿಯಲ್ಲಿ ಒಂದೊಂದು ವಿಧವಾಗಿ ಹಂಚಿಹೋಗುವ ನವಗ್ರಹಗಳು ತಾವು ಪಡೆದ ಮನೆಗಳು, ಒಡೆತನ ಅನ್ಯ ಒಳ್ಳೆಯ ಅಥವ ಆಕೆಟ್ಟ ಗ್ರಹಗಳ ದೃಷ್ಟಿ ಜೊತೆಗೆ ಇನ್ನೊಂದು ಗ್ರಹದ ಜೊತೆಗಿರುವ ಒಂದು ಗ್ರಹ ತನ್ನ ಶಕ್ತಿಯನ್ನು ಕಳೆದುಕೊಳ್ಳುವುದು ಇಲ್ಲಾ ವೃದ್ಧಿಸಿಕೊಳ್ಳುವುದು ನಡೆದೇ ನಡೆಯುತ್ತದೆ. ಶುಕ್ರ ಹಾಗೂ ಬುಧರು ಒಗ್ಗೂಡಿದಾಗ ಇರುವ ಶಕ್ತಿ ಶುಕ್ರನ ಜೊತೆಗೆ ರವಿಯೋ, ಚಂದ್ರನೋ ಇದ್ದರೆ ಅಥವಾ ಕುಜನಿದ್ದರೆ ಸಂಪನ್ನತೆ ಪಡೆಯುವುದಿಲ್ಲ.

ತಪ್ಪು ಗ್ರಹಗಳ ಒಗ್ಗೂಡುವಿಕೆ ಅಥವಾ ದೃಷ್ಟಿ ದೋಷದ ಫ‌ಲವಾಗಿ ಆಯಸ್ಸು ಆರೋಗ್ಯ ಸಂಪತ್ತುಗಳು ಸಮತೋಲನ ತಪ್ಪುತ್ತಿರುತ್ತದೆ. ಪರಮಜಾnನಿಯಾಗಿ ವಿದ್ವತ್ತಿನಲ್ಲಿ ಅದ್ವಿತೀಯನಾಗಿರುವ ಒಬ್ಬ ವ್ಯಕ್ತಿಗೆ ವಾಕ್‌ ಶಕ್ತಿ ಚಾತುರ್ಯತೆಯನ್ನು ಅರಳುಹುರಿದಂತೆ ಮಾತಿನ ಕಲೆಯಾಗುವ ಸಂಪನ್ನತೆ ಪಡೆಯದಿದ್ದರೆ ಏನೇ ಜಾnನ ಇದ್ದರೂ ಅದು ಶೂನ್ಯವೇ ಆಗುತ್ತದೆ. ಕಾರಣ ಜಾnನವೂ ವಾಕ್‌ ಶಕ್ತಿಯೂ ಒಂದು ಇನ್ನೊಂದನ್ನು ಸಂವೇದಿಸುವ ಶಕ್ತಿ ಪಡೆದಿರಬೇಕು. ಪಡೆಯುವುದು ಸುಲಭವಲ್ಲ. ಪಡೆದಿದ್ದೇ ಆದರೆ ಅದು ಅದೃಷ್ಟವೇ ಸರಿ.      

ಕುಂಡಲಿಯಲ್ಲಿ ಸುಖ ಭಾಗ್ಯ ಮತ್ತು ಪ್ರಾಪ್ತಿ
ಇಂದು ಜೋತಿಷಿಯ ಬಳಿ ಬಹಳ ಜನ ರಾಜಕೀಯದಲ್ಲಿ ಅದೃಷ್ಟ ಇದೆಯಾ, ಸಿನಿಮಾದಲ್ಲಿ ಅವಕಾಶವಿದೆಯಾ, ಅನ್ಯರು ನಮ್ಮ ಮೇಲೆ ಕೃತ್ತಿಮ ಪ್ರಯೋಗಿಸಿ ಶಕ್ತಿ ಕುಂದಿಸುವ ಕೆಲಸ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಭಾರಿ ಸಂಖ್ಯೆಯಲ್ಲಿ ಕೇಳುತ್ತಾರೆ. ಇವುಗಳ ನಂತರದ ಪ್ರಶ್ನೆಗಳು ಮದುವೆಯಾಗುತ್ತಿಲ್ಲ ಏಕೆ ಎಂಬ ಪ್ರಶ್ನೆಗಳನ್ನು ಹಾಕುತ್ತಿರುತ್ತಾರೆ. ಇದರ ನಂತರದ ಸ್ಥಾನ ವಿವಾಹ. ಜೀವನದಲ್ಲಿ ಹೊಂದಾಣಿಕೆ ಇಲ್ಲ, ಹೊರಬರುವುದು ಹೇಗೆ ಎಂದು ಪ್ರಶ್ನಿಸುತ್ತಾರೆ. ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದು ಒದ್ದಾಡುವ ಜನರ ಸಂಖ್ಯೆಯೂ ಅಪಾರ. ಬಾವಿಯಿಂದ ಹೊರಬರುವುದೆಂತು ಎಂದು ಪೇಚಾಡುತ್ತಾರೆ. ನಮ್ಮ ನಿಮ್ಮ ಕರ್ಮಫ‌ಲ ಪ್ರಾರಬ್ಧಗಳು ಬೇಡವೆಂದರೂ ತಪ್ಪನ್ನು ಮಾಡಿಸುತ್ತದೆ. ಹಾಸಿಗೆಗಿಂತ ಕಾಲು ಹೊರಚಾಚಿದ ಮೇಲೆ ನೀನೇ ಗತಿ, ನೀವೇ ಕಾಪಾಡಬೇಕು ಎಂದು ದೀನರಾಗಿ ಅಂಗಲಾಚುತ್ತಾರೆ. ತಮಗೆ ತಿಳಿದದ್ದನ್ನು ಮಾಡಲು ಮುಂದಾಗದೆ ತಿಳಿಯದ್ದನ್ನು ಮಾಡಲು ಹೋಗಿ ಹೊಂಡಕ್ಕೆ ಬೀಳೂತ್ತಾರೆ. ಇಲ್ಲೆಲ್ಲಾ ಮುಖ್ಯವಾಗಿ ಅಂದರೆ ಮೇಲೆ ವಿವರಿಸಿದ ಸಂಗತಿಗಳಿಗೆ ಸುಖ ಭಾಗ್ಯ ಪ್ರಾಪ್ತಿಗಳ ವಿಷಯದಲ್ಲಿ ಜಾತಕ ಶಕ್ತಿ ಪಡೆದಿರಬೇಕಾಗುತ್ತದೆ. ಆದರೆ ತಪ್ಪು ಹೆಜ್ಜೆ ಇರಿಸಿ ಅವಸರದಿಂದ ಬೇಡದ್ದನ್ನು ಮಾಡಿ ಅನ್ಯರನ್ನು ದೂರುತ್ತಿರುತ್ತಾರೆ. ದಾಂಪತ್ಯದ ವಿಷಯ ಲೈಂಗಿಕ ವಿಷಯಗಳ ಸಂಬಂಧವಾಗಿ ಹಲವು ಸಲ ವಿಷಯ ಮರೆಮಾಚುತ್ತಾರೆ. ಜೋತಿಷಿಗೆ ತನ್ನ ಕುರಿತೇ ಅನುಮಾನ ಹುಟ್ಟಿಸುವಷ್ಟು ಸುಳ್ಳುಗಳನ್ನು ಪ್ರತಿಪಾದಿಸುತ್ತಾರೆ. ಮಹತ್ವಾಕಾಂಕ್ಷಿಗಳಿಗೆ ಒಂದಾದರೂ ಮನೆ ಶಕ್ತಿಯಿಂದ ಕೂಡಿರಬೇಕು. ವ್ಯಕ್ತಿತ್ವವನ್ನು ಮೆರೆಸುವ ಲಗ್ನಭಾವವಾದರೂ ಪ್ರಭಲವಾಗಿರಬೇಕು. ಲಗ್ನಾಧಿಪತಿಯು ಶಕ್ತಿಯುತನಾದರೆ ಸುಖ ಹಾಗೂ ಸೌಭಾಗ್ಯಗಳನ್ನು ಅನೇಕ ಲಾಭ ಸಂವರ್ಧನೆಗಳನ್ನು ರೂಪಿಸಿಕೊಡುವ ಶಕ್ತಿ ಲಗ್ನಾಧಿಪತಿಗೆ ಇರುತ್ತದೆ. 

ಆರೋಗ್ಯವೇ ಸೌಭಾಗ್ಯವಾಗಬೇಕು
ಎಲ್ಲಾ ಇದ್ದೂ ಆರೋಗ್ಯವೇ ಇರದಿದ್ದರೆ ಹೇಗೆ? ಎಲ್ಲಾ ಇದ್ದು ಸ್ವಾತಂತ್ರ್ಯವೇ ಶೂನ್ಯವಾದರೆ? ಎಲ್ಲಾ ಇದ್ದೂ ಹಣವೇ ಇರದಿದ್ದರೆ ಏನು ಪ್ರಯೋಜನ? ಸತಿಪತಿಗಳಾಗಿದ್ದಲ್ಲಿಂದ ಪ್ರತಿದಿನವೂ ಜಗಳವಾಡಿದರೆ ಮನೆಯಲ್ಲಿ ಶಾಂತಿಯೊಂದೇ ಅಲ್ಲ ಏನೂ ಒದಗಿ ಬರಲಾರದು. ಋಣಾನುಬಂಧ ರೂಪದಲ್ಲಿ ಸಂಪತ್ತು ಬಾಳ ಸಂಗಾತಿ ಮಕ್ಕಳೂ ವಾಸಿಸುವ ಮನೆ ಸಿಗುತ್ತದೆ. ಕಾಲ ಪುರುಷನಿಗೆ ಒಂದು ಮಿತಿ ಇರುತ್ತದೆ. ಒಂದು ಕಾಲಘಟ್ಟದಲ್ಲಿ ಮೇಲೇರಿಸಿ ನಾಲ್ಕು ಜನರ ನಡುವೆ ಮಿಂಚಿಸುತ್ತಾನೆ. ಕೆಲವೇ ದಿನ ತಿಂಗಳು ಅಥವಾ ವರ್ಷಗಳಲ್ಲಿ ಮೂಲೆಗೆ ತಳ್ಳುತ್ತಾನೆ. ಹಲವು ಸಿನಿಮಾ ನಟರು ರಾಜಕಾರಣಿಗಳು ಉದ್ಯಮಿಗಳು ತಮ್ಮ ಸ್ವಂತ ವೃತ್ತಿಯಲ್ಲಿ ಜನಪ್ರಿಯವಾಗಿ ಮೇಲೆ ಬಂದವರು ಕಾಲದ ಇನ್ನೊಂದು ಘಟ್ಟದಲ್ಲಿ ನೆಲಕಚ್ಚುತ್ತಾರೆ. ಹಾಗಾದರೆ ಶಕ್ತಿ ಹಾಗೂ ಪ್ರತಿಭೆಗಳು ಅದೇ ಆಗಿದ್ದರೂ ಹಿಂದೆ ಬೀಳುವುದೇಕೆ? ಒಂದು ಕಾಲಕ್ಕೆ ಶಕ್ತಿ ಹಾಗೂ ಪ್ರತಿಭೆ ಎಂದು ರೂಪುಗೊಂಡಿದ್ದ ವಿಚಾರಗಳು ಕಾಲಾನುಕ್ರಮದಲ್ಲಿ ಹಳಸಲಾಗಬಹುದು. ಕಿಲುಬು ಹಿಡಿದ ಲೋಹಗಳಾಗಬಹುದು.  ನಮ್ಮ ಸಫ‌ಲತೆ ಹಾಗೂ ಕಾಲ ಸೂಕ್ತವಾಗಿ ಬೆಸೆದುಕೊಳ್ಳಬೇಕು. ನಮ್ಮನ್ನು ಸ್ವೀಕರಿಸುವ ಅದೃಷ್ಟಶಾಲಿ ನಮ್ಮ ಜನ್ಮಜಾತವಾದ ಪ್ರತಿಭೆ ಆ ಕಾಲಕ್ಕೆ ಚಲಾವಣೆಯಲ್ಲಿ ತೂಕ ಕಳೆದುಕೊಂಡರೆ ಏನೂ ಪ್ರಯೋಜನವಿಲ್ಲ. ಹೀಗಾಗಿ ಕಾಲಾಯ ತಸೆ¾„ ನಮಃ ಎಂದು ನಮ್ಮ ಆಷೇìಯ ಉಕ್ತಿಗಳು ಹೇಳಿವೆ.

Advertisement

ಮಹತ್ವಾಕಾಂಕ್ಷೆಗಳು ಹಾಗೂ ಅರಿಷಡ್ವರ್ಗಗಳು
ಇವು ಬಹು ಮುಖ್ಯವಾದ ಘಟಕಗಳು. ನಿಮ್ಮ ಜೀವನದಲ್ಲಿ ಮಹತ್ವಾಕಾಂಕ್ಷೆ ಇರದಿದ್ದರೆ ಯಾವ ಪುರುಷಾರ್ಥಕ್ಕೂ ಅರ್ಥವಿಲ್ಲ. ಮಹತ್ವಾಕಾಂಕ್ಷೆಗಳು ನಮ್ಮ ದುಷ್ಟ ಅರಿಷಡ್ವರ್ಗಗಳಾದ ಮದ, ಮತ್ಸರ, ಮೋಹ, ಕಾಮ ಲೋಭ ಕ್ರೋಧಗಳನ್ನು ಆವರಣವಾಗಿಸಿಕೊಳ್ಳಬಾರದು. ಒಂದೇ ತೆರನಾಗಿರದ ಅದೃಷ್ಟ ಯಾವ ವೇಳೆಯಲ್ಲಾದರೂ ಕೈಕೊಡಬಹುದು. ಆದರೆ ಆಗಲೂ ಅರಿಷಡ್ವರ್ಗಗಳಿಂದ ಹೊರತಾದ ವಿದ್ಯೆ ಹಾಗೂ ವಿನಯಗಳು ನಮ್ಮ ಮಹತ್ವಾಕಾಂಕ್ಷೆಗಳನ್ನು ಗೆಲ್ಲಿಸಬಲ್ಲವು. ನಮ್ಮ ಜಾತಕದ ತೊಂದರೆಗಳನ್ನು ಸೂಕ್ತವಾದ ಜ್ಯೋತಿಷಿಯ ಮೂಲಕ ತಿಳಿದವರಿಗೆ ಅದು ದಾರಿ ದೀಪವಾಗುತ್ತದೆ. ದೇವ ಶಾಪ, ಪಿತೃಶಾಪ, ಮಾತೃಶಾಪ, 

ಸ್ತ್ರೀ ಶಾಪಗಳು ನಮ್ಮನ್ನು ಕಾಂತೀನ ಗೊಳಿಸುತ್ತದೆ. ಕಾರಣವಿರದೆ ಶಾಪ ಹಾಕುವ ಸ್ತ್ರೀ ತನ್ನ ನಾಶ ತಾನೆ ಮಾಡಿಕೊಳ್ಳುತ್ತಾಳೆ. ಹೀಗಾಗಿ ನಿಮ್ಮ ಬಗೆಗಿನ ಭರವಸೆ ನಿಮ್ಮಲ್ಲಿಯೇ ಇದೆ. ದೇವರು ನಿಮ್ಮ ಜಾnನ ಹಾಗೂ ವಿನಯಗಳಲ್ಲಿ ಇದ್ದಾನೆ. ಸತ್ಯಂ ಶಿವಂ ಸುಂದರಂ ಎಂಬ ಮಾತು ನಮಗೆ ತಿಳಿದದ್ದೇ ಆಗಿದೆ. ಲಕ್ಷಿ$¾ಯನ್ನು ಪಾರ್ವತಿಯ ಮೂಲಕ ಒಲಿಸಿಕೊಳ್ಳಿ. ಆದರೆ ಧೈರ್ಯದಿಂದ ಮುನ್ನುಗ್ಗಿದರೆ ಲಕ್ಷಿ$¾ ಪ್ರಸನ್ನಗೊಳ್ಳುತ್ತಾಳೆ. ಪಾರ್ವತಿಯನ್ನು ವಾಣಿಯ ಮೂಲಕ ಕೈವಶ ಮಾಡಿಕೊಳ್ಳಿ. ಇದರ ಅರ್ಥ ಜಾnನವೇ ಮುಖ್ಯ. ಹಣವೂ ಮುಖ್ಯ. ಆರೋಗ್ಯವೂ ಮುಖ್ಯ.

ಅನಂತ ಶಾಸ್ತ್ರಿ 

Advertisement

Udayavani is now on Telegram. Click here to join our channel and stay updated with the latest news.

Next