Advertisement
ಒಂದು ವೇಳೆ ನೀವು ನೀಡಿದ ಎಟಿಎಂ ಕಾರ್ಡ್ ಬಳಸಿ ಅವರು ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡಿದಾಗ ಅಕಸ್ಮಾತ್ ತಾಂತ್ರಿಕ ದೋಷಗಳಿಂದ ಹಣ ಬರದಿದ್ದರೆ ಆ ಹಣ ಪುನ: ನಿಮ್ಮ ಅಕೌಂಟ್‌ಗೆ ಮರು ಪಾವತಿಯಾಗುವುದು ಕನಸಿನ ಮಾತು.
Related Articles
Advertisement
ಪ್ರಕರಣ ಏನು?ಮಾರತ್‌ಹಳ್ಳಿಯ ನಿವಾಸಿಯಾದ ವಂದನಾ ಎಂಬುವವರು 2013ರ ನವೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದರಿಂದ ಹೊರಗಡೆ ಹೋಗಲು ಸಾಧ್ಯವಾಗದೇ ತಮ್ಮ ಪತಿ ರಾಜೇಶ್‌ಕುಮಾರ್‌ಗೆ ತಮ್ಮ ಎಸ್‌ಬಿಐ ಎಟಿಎಂ ಕಾರ್ಡ್ ನೀಡಿ ಪಿನ್ ನಂಬರ್ ತಿಳಿಸಿ 25 ಸಾವಿರ ರೂ. ಡ್ರಾ ಮಾಡಿಕೊಂಡು ಬರುವಂತೆ ತಿಳಿಸಿದ್ದರು. ಅದರಂತೆ, ನವೆಂಬರ್ 14 ಹತ್ತಿರದ ಎಟಿಎಂ ಕೇಂದ್ರಕ್ಕೆ ತೆರಳಿದ್ದ ರಾಜೇಶ್‌ಕುಮಾರ್ ಎಟಿಎಂ ಕಾರ್ಡ್ ಸ್ವೆ„ಪ್ ಮಾಡಿದ್ದಾರೆ. ಆದರೆ, 25 ಸಾವಿರ ರೂ. ಬಂದಿರಲಿಲ್ಲ. ಇದರಿಂದ ಕಂಗಾಲಾದ ಅವರು ಕೂಡಲೇ ಬ್ಯಾಂಕ್ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲಿನ ಸಿಬ್ಬಂದಿ ಎಟಿಎಂ ಯಂತ್ರದಲ್ಲಿ ತಾಂತ್ರಿಕ ದೋಷವಿರಬಹುದು ಹೀಗಾಗಿ ಹಣ ಬಂದಿಲ್ಲ ಮುಂದಿನ 24 ಗಂಟೆಗಳಲ್ಲಿ ಹಣ ಅಕೌಂಟ್‌ಗೆ ಮರುಪಾವತಿಯಾಗಲಿದೆ ಎಂದು ಹೇಳಿದ್ದಾರೆ. ಇದಾದ ಕೆಲ ದಿನಗಳ ಬಳಿಕವೂ ಅಕೌಂಟ್‌ಗೆ 25 ಸಾವಿರ ರೂ, ಜಮಾ ಆಗದಿದ್ದರಿಂದ ದಂಪತಿ ಇಬ್ಬರೂ ಬ್ಯಾಂಕ್ ಶಾಖೆಗೆ ತೆರಳಿ ದೂರು ನೀಡಿದ್ದಾರೆ.ಇದನ್ನು ಪರಿಶೀಲಿಸಿದ್ದ ಅಧಿಕಾರಿಗಳು ಎಟಿಎಂ ಕೇಂದ್ರದಿಂದ ಹಣ ಡ್ರಾ ಆಗಿದೆ ಎಂಬ ಸ್ಪಷ್ಟನೆ ನೀಡಿ ದೂರು ಮುಕ್ತಾಯಗೊಳಿಸಿದ್ದರು. ಸಿಸಿಟಿವಿ ಪೂಟೇಜ್ ಕೂಡ ಬ್ಯಾಂಕ್‌ನವರಿಗೆ ಫ್ಲಸ್ ಆಗಿತ್ತು!
ದೂರು ನೀಡಿ ಸುಮ್ಮನಾಗದ ಈ ದಂಪತಿ ಡ್ರಾಗೆ ತೆರಳಿದ್ದ ಎಟಿಎಂ ಕೇಂದ್ರದ ಸಿಸಿಟಿವಿ ಪೂಟೇಜ್ ಕೇಳಿ ಪರಿಶೀಲಿಸಿದ್ದರು. ದೃಶ್ಯಾವಳಿಯಲ್ಲಿ ರಾಜೇಶ್‌ಕುಮಾರ್ ರಸೀದಿ ಮಾತ್ರ ಪಡೆದಿದ್ದು, ಹಣ ತೆಗೆದುಕೊಂಡಿಲ್ಲದಿರುವುದು ಸ್ಪಷ್ಟವಾಗಿತ್ತು. ಅಲ್ಲಿ, ಕಾರ್ಡ್ ಬಳಕೆದಾರರಾದ ವಂದನಾ ಇಲ್ಲದಿರುವುದು ನಿಜವಾಗಿತ್ತು. ಬಳಿಕ ವಂದನಾ ಅವರು, ಆರ್‌ಟಿಐ ಮೂಲಕ ನವೆಂಬರ್ 16ರಂದು ಎಟಿಎಂ ಯಂತ್ರದಲ್ಲಿದ್ದ ಹಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು 25 ಸಾವಿರ ರೂ. ಹೆಚ್ಚುವರಿಯಾಗಿ ಇರುವುದು ಗೊತ್ತಾಗಿತ್ತು. ಈ ದಾಖಲೆಗಳನ್ನಿಟ್ಟುಕೊಂಡೇ ವಂದನಾ ಅವರು, ಪುನ: ಎಸ್‌ಬಿಐನ ಓಂಬುಡ್ಸ್‌ಮನ್ ( ಸಾರ್ವಜನಿಕ ತನಿಖಾಧಿಕಾರಿ) ಬಳಿ ದೂರು ನೀಡಿದರು. ಆದರೆ, ತನಿಖಾಧಿಕಾರಿಗಳು, ನಿಯಮಗಳನ್ನು ಉಲ್ಲಂ ಸಿ ಎಟಿಎಂ ಕಾರ್ಡ್‌ನ ಪಿನ್ ನಂಬರ್ ಶೇರ್ ಮಾಡಲಾಗಿದೆ ಎಂಬ ಕಾರಣ ನೀಡಿ ದೂರು ಮುಕ್ತಾಯಗೊಳಿಸಿದ್ದರು. ಹೀಗಾಗಿ, ವಂದನಾ ಅವರು 2014ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ 4ನೇ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿ, 25 ಸಾವಿರ ರೂ.ಗಳಿಗೆ ಶೇ 18 ರಷ್ಟು ದಂಡ, ಆರ್‌ಬಿಐ ನಿಯಾಮಗಳಿಗಂತೆ ಪ್ರತಿದಿನ 100 ರೂ. ದಂಡದ ಜತೆಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಸಲ್ಲಿಸಿದ್ದ ದೂರು ಮೇ 29ರಂದು ವಜಾಗೊಂಡಿದೆ.