Advertisement
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿ ನಗರದ ಎಪಿಎಂಸಿ ರಸ್ತೆ ಸಮೀಪದ ನಿವಾಸಿ ಮಾಜಿ ಸೈನಿಕ ರಾಧಾಕೃಷ್ಣ ಗೌಡ ಮತ್ತು ಉಷಾ ರಾಧಾಕೃಷ್ಣ ದಂಪತಿಯ ಎರಡನೇ ಪುತ್ರ ರಾಧೇಶ್ ಆರ್. ಗೌಡ ಪದೋನ್ನತಿಗೊಂಡು ಕ್ಯಾಪ್ಟನ್ ಆಗಿ ನೇಮಕಗೊಂಡವರು. ಮೊದಲ ಪುತ್ರ ರಂಜಿತ್ ಆರ್.ಗೌಡ ಕಮೀಷನ್ಡ್ ಅಧಿಕಾರಿ ಆಗಿದ್ದಾರೆ.
ರಾಧೇಶ್ ಆರ್. ಗೌಡ ಭಾರತೀಯ ಭೂ ಸೇನೆಯಲ್ಲಿ 18ನೇ ಗ್ರೆನೇಡಿಯರ್ ಬೆಟಾಲಿಯನ್‌ಗೆ ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡು ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಕ್ಯಾಪ್ಟನ್ ಆಗಿ ಪದೋನ್ನತಿ ಹೊಂದಿ ಕಾರ್ಗಿಲ್ ದ್ರಾಸ್ ಸೇನಾ ಶಿಬಿರದ 21ನೇ ಗ್ರೇನೇಡಿಯರ್ನಲ್ಲಿ ಸೇರ್ಪಡೆಗೊಳ್ಳಲಿದ್ದಾರೆ. ರಾಧೇಶ್ ಆರ್. ಗೌಡ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪುತ್ತೂರಿನಲ್ಲಿ, ಪದವಿಪೂರ್ವ ಶಿಕ್ಷಣವನ್ನು ಮಂಗಳೂರು ಹಾಗೂ ಎಂಜಿನಿಯ ರಿಂಗ್ ಶಿಕ್ಷಣವನ್ನು ಪುತ್ತೂರು ಹಾಗೂ ಕನಕಪುರದಲ್ಲಿ ಪೂರ್ಣಗೊಳಿಸಿ, 2015ರಲ್ಲಿ ಭಾರತೀಯ ಭೂ ಸೇನೆಯಲ್ಲಿ ಕಮೀಷನ್ಡ್ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಚೆನ್ನೈ ಆಫೀಸರ್ ಟ್ರೇನಿಂಗ್ ಅಕಾಡೆಮಿಯಲ್ಲಿ 1 ವರ್ಷದ ತರಬೇತಿ ಪಡೆದು 18ನೇ ಗ್ರೇನೆಡಿಯರ್ ಬೆಟಾಲಿಯನ್‌ಗೆ ನಿಯುಕ್ತಿಗೊಂಡು ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಈಗ ಕ್ಯಾಪ್ಟನ್ ಆಗಿ ನಿಯಕ್ತಿಗೊಂಡಿದ್ದಾರೆ. 2017 ಎ. 15ರಂದು ಕ್ಯಾಪ್ಟನ್ ಆಗಿ ಪದೋನ್ನತಿ ಹೊಂದಿದ್ದೇನೆ. ಮುಂದಿನ 1 ವರ್ಷ ಕಾರ್ಗಿಲ್‌ನಲ್ಲಿ ಕರ್ತವ್ಯ ನಿರ್ವಹಿಸಲಿದ್ದೇನೆ. ತಂದೆ ಮಾಜಿ ಸೈನಿಕರಾಗಿದ್ದು, ಅವರು ನಮಗೆಲ್ಲಾ ಸ್ಫೂರ್ತಿ. ಸಹೋದರ ನೇವಿಯಲ್ಲಿ ಲೆಫ್ಟಿನೆಂಟ್ ಆಗಿದ್ದಾರೆ ಎಂದು ದೇಶ ಸೇವೆಯ ಬಗ್ಗೆ ಸಂಭ್ರಮಿಸುತ್ತಾರೆ ರಾಧೇಶ್ ಆರ್. ಗೌಡ. ರಾಧೇಶ್ ಗೌಡ ಅವರ ಸಹೋದರ ರಂಜಿತ್ ಗೌಡ ಕಮಿಷನ್ಡ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಂಜಿತ್ 2012ನೇ ಸಾಲಿನಲ್ಲಿ ಭಾರತೀಯ ನೌಕಾ ಪಡೆಯಲ್ಲಿ ಕಮಿಷನ್ಡ್ ಅಧಿಕಾರಿಯಾಗಿ ನೇಮಕಗೊಂಡು, ವಿಶಾಖಪಟ್ಟಣದ ನೌಕಾನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಪ್ರಾಥಮಿಕ ಶಿಕ್ಷಣದಿಂದ ಎಂಜಿನಿಯರಿಂಗ್ ತನಕದ ಪದವಿಯನ್ನು ಪುತ್ತೂರಿನಲ್ಲೇ ಪೂರ್ಣಗೊಳಿಸಿದ್ದರು.
Related Articles
ನಾನು 9 ವರ್ಷ ಸೇನೆಯಲ್ಲಿ ಕೆಲಸ ಮಾಡಿದ್ದೆ. ಈಗ ಮಕ್ಕಳಿಬ್ಬರು ಸೈನ್ಯದಲ್ಲಿ ದೇಶ ರಕ್ಷಕರಾಗಿದ್ದಾರೆ. ನಾನು ಬಯಸಿದ್ದು ಅದನ್ನೆ. ಹಾಗಾಗಿ ನನಗೆ ಅತೀವ ಹೆಮ್ಮೆಯಿದೆ.
– ರಾಧಾಕೃಷ್ಣ ಗೌಡ (ತಂದೆ), ಮಾಜಿ ಸೈನಿಕ
Advertisement