Advertisement
ಮಗಳಿಗೆ ಡ್ರಗ್ಸ್ ನೀಡಿ ನಿರಂತರ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಕೆಲವು ದಿನಗಳ ಹಿಂದೆ ಬಿಜೈಯ ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿರುವುದು ಪೊಲೀಸರಲ್ಲಿನ ಶಂಕೆಗೆ ಇನ್ನಷ್ಟು ಪುಷ್ಟಿ ನೀಡಿದೆ.
ನಗರ ಪೊಲೀ ಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 2021ರಲ್ಲಿ ಡ್ರಗ್ಸ್ ಸೇವನೆ, ಮಾರಾಟಕ್ಕೆ ಸಂಬಂಧಿಸಿದಂತೆ 328 ಪ್ರಕರಣಗಳನ್ನು ದಾಖಲಿಸಿಕೊಂಡು 492 ಮಂದಿಯನ್ನು ಬಂಧಿಸಲಾಗಿದೆ. ಗಾಂಜಾ, ಎಂಡಿಎಂಎ ಟ್ಯಾಬ್ಲೆಟ್, ಕೊಕೇನ್, ಹೆರಾಯ್ನ, ಎಂಡಿಎಂಎ ಪೌಡರ್, ಎಲ್‌ಎಸ್‌ಡಿ ಸ್ಟಾಂಪ್ಸ್ ಸೇರಿದಂತೆ 85 ಲ.ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
Related Articles
Advertisement
ಹಾಸ್ಟೆಲ್‌ಗಳಿಗೂ ಪೂರೈಕೆ?ಕೆಲವು ಕಾಲೇಜು ಹಾಸ್ಟೆಲ್‌ಗಳಲ್ಲಿಯೇ ವಿದ್ಯಾರ್ಥಿಗಳು ಮಾದಕ ದ್ರವ್ಯ ಚಟಕ್ಕೆ ಒಳಗಾಗುತ್ತಾರೆ. ಅನಂತರ ಅವರದ್ದೇ ಗುಂಪು ಸೃಷ್ಟಿಯಾಗುತ್ತದೆ. ಹೆಣ್ಣು-ಗಂಡು ಭೇದವಿಲ್ಲ. ಇಂಥವರನ್ನು ಸೆಳೆದು ಖಾಯಂ ಗಿರಾಕಿ ಮಾಡಿಕೊಳ್ಳಲು ಪೆಡ್ಲರ್‌ಗಳು ಸಂಚು ರೂಪಿಸಿರುತ್ತಾರೆ ಎನ್ನುತ್ತಾರೆ ಪೊಲೀಸರು. ಒಟ್ಟು ಡ್ರಗ್ಸ್ ವ್ಯಸನಿಗಳಲ್ಲಿ ಶೇ. 40ರಷ್ಟು ಯುವತಿಯರು ಇರುವುದು ವರದಿಗಳಿಂದ ಗೊತ್ತಾಗಿದೆ. ಪಾರ್ಟಿ ಡ್ರಗ್ಸ್ ಬಗ್ಗೆ ಯುವಜನರ ಆಕರ್ಷಣೆ ಆತಂಕಕಾರಿ. ಗೋವಾದಲ್ಲಿದ್ದ ಪಾರ್ಟಿ ಡ್ರಗ್ಸ್ ಮಂಗಳೂರಿನಲ್ಲಿಯೂ ಸಿಗುತ್ತಿರುವ ಅನುಮಾನವಿದೆ. 18ಕ್ಕಿಂತ ಕಡಿಮೆ ವಯಸ್ಸಿನವರು ಕೂಡ ಡ್ರಗ್ಸ್ ಚಟ ಹತ್ತಿಸಿಕೊಂಡಿದ್ದಾರೆ. ವ್ಯಸನಿಗಳು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ಹೊರಬರಲು ಸಾಧ್ಯ. ಇದಕ್ಕಿಂತ ಹೆಚ್ಚಾಗಿ ಯಾವುದೇ ಕಾರಣಕ್ಕೆ ಡ್ರಗ್ಸ್ ಚಟಕ್ಕೆ ಬೀಳದಂತೆ ಯುವಜನತೆ ಎಚ್ಚೆತ್ತುಕೊಳ್ಳುವುದು ಅತ್ಯಗತ್ಯ.
– ಗುರುಪ್ರಸಾದ್,
ಆಪ್ತ ಸಮಾಲೋಚಕರು, “ಬಾರ್ಕ್’ ಮಂಗಳೂರು ಹಲವು ವಿದ್ಯಾರ್ಥಿಗಳ ಬಂಧನ
ನ. 12ರಿಂದ ಡಿ. 6ರವರೆಗೆ ನಗರದಲ್ಲಿ ಗಾಂಜಾ ಸೇವನೆ ಆರೋಪದಲ್ಲಿ 25ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದು ಅವರಲ್ಲಿ 16 ಮಂದಿ ಕಾಲೇಜು ವಿದ್ಯಾರ್ಥಿಗಳು. ಜೂನ್‌ನಲ್ಲಿ ಗಾಂಜಾ ಮಾರಾಟ ಪ್ರಕರಣದಲ್ಲಿ ಮೆಡಿಕಲ್ ವಿದ್ಯಾರ್ಥಿಯೋರ್ವ ಸೆರೆಯಾಗಿದ್ದ. ಹೈಡ್ರೋವೀಡ್ ಗಾಂಜಾ ಮಾರಾಟ ಪ್ರಕರಣದಲ್ಲಿ ವೈದ್ಯ ವಿದ್ಯಾರ್ಥಿನಿಯನ್ನು ಬಂಧಿಸಿದ್ದರು. 2013ರಲ್ಲಿ ವಿದ್ಯಾರ್ಥಿನಿಯೋರ್ವಳು ಡ್ರಗ್ಸ್ ಚಟದಿಂದ ಹೊರಬರಲಾಗದೆ ನೇಣಿಗೆ ಶರಣಾಗಿದ್ದಳು.