ರತ್ನಕಲಾ ಅವರಿದ್ದ ಏಕಸದಸ್ಯ ಪೀಠ, ಆರೋಪಿಯ ತಂದೆ ಹಾಗೂ ಇನ್ನಿಬ್ಬರ ಭದ್ರತೆ ಖಾತರಿ, 50 ಸಾವಿರ ರೂ.ವೈಯಕ್ತಿ ಬಾಂಡ್,
ಸಾಕ್ಷಿ ನಾಶ ಪಡಿಸಬಾರದು ಹಾಗೂ ತನಿಖೆಗೆ ಸಹಕರಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ. ಅರ್ಜಿದಾರ ಪರ ವಕೀಲ ಹಸ್ಮತ್‌ಪಾಷ ವಾದ ಮಂಡಿಸಿ, ಅರ್ಜಿದಾರರ ತಂದೆತಾಯಿ ಇಬ್ಬರು ವೈದ್ಯರಾಗಿದ್ದು, ಸಮಾಜದಲ್ಲಿ ಉತ್ತಮಸ್ಥಾನ ಹೊಂದಿದ್ದಾರೆ. ಆರೋಪಿಯು ಕಳೆದ ಆರುತಿಂಗಳಿನಿಂದ ಜೈಲಿನಲ್ಲಿದ್ದು, ಆರೋಗ್ಯ ಏರುಪೇರಾಗಿದೆ. ಜೈಲಿ ನಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಿಲ್ಲ.
ಜತೆಗೆ ಕೊಲೆ ಮಾಡಲಾಗಿದೆ ಎನ್ನಲಾದ ಕೋಣೆಯಲ್ಲಿ ಇಬ್ಬರು ಹೊರತಾಗಿ ಬೇರೆಯಾರು ಇರದ ಕಾರಣ ಯಾವುದೇ ಸಾಕ್ಷಿ ಇಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು. ನಡೆದಿದ್ದೇನು?: ವೇಶ್ಯಾವೃತ್ತಿ ನಡೆಸುತ್ತಿದ್ದ ಉಗಾಂಡ ಮೂಲದ ಯುವತಿ ನಕಯಾಕಿಫ್ಲೋರೆನ್ಸ್ ಕಳೆದ ಫೆ. 2 ರ ಮಧ್ಯರಾತ್ರಿ ಎಂ.ಜಿ.ರಸ್ತೆ ಬಳಿ ಗ್ರಾಹಕರಿಗಾಗಿ ಕಾಯುತ್ತಿದ್ದಾಗ ಈಶಾನ್ಯ ಭಾರತದ ಯುವಕ ಇಶಾನ್ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದ. ಇಡೀ ರಾತ್ರಿ ಜತೆಯಲ್ಲಿ ಇರಲು 5 ಸಾವಿರ ರೂ.ಗೆ ಒಪ್ಪಂದ
ಮಾಡಿಕೊಳ್ಳಲಾಗಿತ್ತು. ಇಬ್ಬರ ನಡುವೆ ವ್ಯವಹಾರ ಕುದುರಿದ ನಂತರ ಇಶಾನ್ ನನ್ನು ಫ್ಲೋರೆನ್ಸ್ ಕೊತ್ತನೂರಿನ ತನ್ನ ಮನೆಗೆ
ಕರೆದುಕೊಂಡು ಹೋಗಿದ್ದಳು. ಮೊದಲು ಇಬ್ಬರ ನಡುವೆ ಒಪ್ಪಂದವಾದಂತೆ 5 ಸಾವಿರ ರೂ. ಫ್ಲೋರೆನ್ಸ್‌ಗೆ ಇಶಾನ್ ಕೊಟ್ಟಿದ್ದಾನೆ. ಆಗ 10 ಸಾವಿರ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾಳೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಶಾನ್ ಮತ್ತು ನಕಯಾಕಿಫ್ಲೋರೆನ್ಸ್ ನಡುವೆ
ಜಗಳವಾಗಿದೆ. ಈ ಸಂದರ್ಭದಲ್ಲಿ ಫ್ಲೋರೆನ್ಸ್ ಚಾಕುವಿನಿಂದ ಇಶಾನ್ ಮೇಲೆ ಹಲ್ಲೆ ನಡೆಸಿದ್ದಳು. ಆಗ ಆತನ ಕೈಗೆ ಗಾಯವಾಗಿದ್ದವು. ಕೂಡಲೇ ತನ್ನ ಆತ್ಮ ರಕ್ಷಣೆಗಾಗಿ ಚಾಕುವನ್ನು ಕಸಿದುಕೊಂಡಿದ್ದ ಇಶಾನ್ ಆಕೆಗೆ ಇರಿದಿದ್ದಾನೆ. ಘಟನೆ ಕುರಿತು ಮನೆಮಾಲೀಕರು ಕೊತ್ತ ನೂರು ಪೊಲೀಸ್ ಠಾಣೆಯಲ್ಲಿ ದೂರುನೀಡಿದ್ದರು. ಪೊಲೀಸರು ಎಫ್ ಐ ಆರ್ ದಾಖಲಿಸಿ ಕೊಂಡು ಆರೋಪಿಯನ್ನು
ಆಕೆಯ ಮನೆಯಲ್ಲಿ ಬಂಧಿಸಿದ್ದರು. ಪ್ರಕರಣದ ಆರೋಪಿ ಇಶಾನ್ ಈ ಹಿಂದೆ ಅಧೀನ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿ ಸಿದ್ದರು.ಆದರೆ ಅಧೀನ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತು. ಈ ಹಿನ್ನೆಲೆಯಲ್ಲಿ ಜಾಮೀನು ನೀಡುವಂತೆ ಕೋರಿ
ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.
Advertisement